ಒಂದಿಂಚೂ ಜಾಗದ ಮೇಲೆ ಕಣ್ಣು ಹಾಕಲು ಬಿಡಲ್ಲ, ಚೀನಾ ಗಡಿ ಗುದ್ದಾಟಕ್ಕೆ ಮೋದಿ ಪಂಚ್

|

Updated on: Jun 20, 2020 | 8:31 AM

ದೆಹಲಿ: ನೆತ್ತರು ಕುದಿಯುತ್ತಿದೆ. ಚೀನಿ ಸೈನಿಕರು ಕೈಗೆ ಸಿಕ್ರೆ ಸಿಗಿದು ಎದೆ ಬಗೆದು ರಕ್ತ ಕುಡಿಬೇಕು ಅನ್ನಿಸ್ತಿದೆ. ನಮ್ಮ ಯೋಧರ ರಕ್ತ ಹೀರಿರೋ ಕ್ರಿಮಿಗಳನ್ನ ನಿಂತ ಜಾಗದಲ್ಲೇ ಹುಗಿದು ಹಾಕ್ಬೇಕು ಅನ್ನಿಸ್ತಿದೆ. ಅಂತಾ ಕಿಚ್ಚು ಇಡೀ ಭಾರತೀಯರ ರಕ್ತದ ಕಣ ಕಣದಲ್ಲೂ ಕುದಿಯುತ್ತಿದೆ. ಯೆಸ್.. ಅದ್ಯಾವಾಗ ಲಡಾಖ್​ ಗಡಿಯಲ್ಲಿ ಚೀನಾ ಸೈನಿಕರು ಮಾರಾಮೋಸದಿಂದ ನಮ್ಮ ಯೋಧರ ನೆತ್ತರನ್ನ ಹೀರಿದ್ರೋ ದೇಶದ ನರ ನಾಡಿಗಳಲ್ಲಿ ರಕ್ತ ಕೊತ ಕೊತ ಕುದ್ದು ಹೋಗ್ತಿದೆ. ರಣಹೇಡಿ ಕೆಂಪು ರಾಷ್ಟ್ರದ ವಿರುದ್ಧ ಆಕ್ರೋಶದ […]

ಒಂದಿಂಚೂ ಜಾಗದ ಮೇಲೆ ಕಣ್ಣು ಹಾಕಲು ಬಿಡಲ್ಲ, ಚೀನಾ ಗಡಿ ಗುದ್ದಾಟಕ್ಕೆ ಮೋದಿ ಪಂಚ್
Follow us on

ದೆಹಲಿ: ನೆತ್ತರು ಕುದಿಯುತ್ತಿದೆ. ಚೀನಿ ಸೈನಿಕರು ಕೈಗೆ ಸಿಕ್ರೆ ಸಿಗಿದು ಎದೆ ಬಗೆದು ರಕ್ತ ಕುಡಿಬೇಕು ಅನ್ನಿಸ್ತಿದೆ. ನಮ್ಮ ಯೋಧರ ರಕ್ತ ಹೀರಿರೋ ಕ್ರಿಮಿಗಳನ್ನ ನಿಂತ ಜಾಗದಲ್ಲೇ ಹುಗಿದು ಹಾಕ್ಬೇಕು ಅನ್ನಿಸ್ತಿದೆ. ಅಂತಾ ಕಿಚ್ಚು ಇಡೀ ಭಾರತೀಯರ ರಕ್ತದ ಕಣ ಕಣದಲ್ಲೂ ಕುದಿಯುತ್ತಿದೆ.

ಯೆಸ್.. ಅದ್ಯಾವಾಗ ಲಡಾಖ್​ ಗಡಿಯಲ್ಲಿ ಚೀನಾ ಸೈನಿಕರು ಮಾರಾಮೋಸದಿಂದ ನಮ್ಮ ಯೋಧರ ನೆತ್ತರನ್ನ ಹೀರಿದ್ರೋ ದೇಶದ ನರ ನಾಡಿಗಳಲ್ಲಿ ರಕ್ತ ಕೊತ ಕೊತ ಕುದ್ದು ಹೋಗ್ತಿದೆ. ರಣಹೇಡಿ ಕೆಂಪು ರಾಷ್ಟ್ರದ ವಿರುದ್ಧ ಆಕ್ರೋಶದ ಬೆಂಕಿ ಜ್ವಲಿಸ್ತಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಭಂಡ ಚೀನಾದ ವಿರುದ್ಧ ಪ್ರಧಾನಿ ಮೋದಿ ಪ್ರತೀಕಾರದ ಪ್ರತಿಜ್ಞೆ ಮೊಳಗಿಸಿದ್ರು. ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡಲ್ಲ ಅಂತಾ ಮೋದಿ ವಾರ್ನಿಂಗ್ ಮಾಡಿದ್ರು. ಇದೀಗ ಸರ್ವಪಕ್ಷ ಸಭೆಯಲ್ಲಿ ಮತ್ತೆ ಚೀನಾಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

ಪ್ರಧಾನಿ ಮೋದಿ ವಾರ್ನಿಂಗ್ ನಂ.1
ನಮ್ಮ ಒಂದಿಂಚು ಜಾಗದ ಮೇಲೂ ಕಣ್ಣು ಹಾಕಲು ಬಿಡಲ್ಲ!
ನಮ್ಮ ಜಾಗದ ಮೇಲೆ ಕಣ್ಣಿಟ್ರೆ.. ನಮ್ಮ ಭೂಮಿಯನ್ನ ಕಬಳಿಸೋಕೆ ಹೆಜ್ಜೆಯೂರೋದಿರಲಿ. ನಮ್ಮ ನೆಲ-ಜಲವನ್ನ ಕದಿಯೋಕೆ ಯೋಚನೆ ಮಾಡಿದ್ರೂ ಹೊಸಕಿ ಹಾಕಿ ಬಿಡ್ತೀವಿ. ಇದೇ ರೀತಿ ಪ್ರಧಾನಿ ಮೋದಿ ಚೀನಾಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ. ನಮ್ಮ ನೆಲ-ಜಲ ರಕ್ಷಿಸೋ, ಯಾವುದೇ ಪ್ರತಿರೋಧವನ್ನು ಎದುರಿಸುವ ಶಕ್ತಿ ನಮ್ಮ ಸೈನಿಕರಿಗೆ ಇದೆ. ನಮ್ಮ ಒಂದಿಂಚು ಜಾಗದ ಮೇಲೆ ಯಾರೂ ಕಣ್ಣು ಹಾಕಲು ಬಿಡಲ್ಲ ಅಂತ ಪ್ರಧಾನಿ ಮೋದಿ ಚೀನಾಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನಾವು ಸರ್ವಶಕ್ತರಾಗಿದ್ದೇವೆ. ಯಾರೂ ನಮ್ಮ ಒಂದಿಂಚು ಜಾಗದ ಮೇಲೂ ಕಣ್ಣು ಹಾಕಲು ಬಿಡಲ್ಲ. ನಮ್ಮ ಭಾರತೀಯ ಸೇನೆಗೆ ಯಾವುದೇ ಪ್ರತಿರೋಧ ಎದುರಿಸಲು ಸರ್ವಶಕ್ತರಾಗಿದ್ದಾರೆ. ನಮ್ಮ ಸೇನೆ ಯಾವುದೇ ಕ್ಷಣದಲ್ಲಾದಲ್ಲಿ ಎಂಥಾ ನಿರ್ಧಾರ ಕೈಗೊಳ್ಳಲು ಪರಮಾಧಿಕಾರವನ್ನ ನೀಡಲಾಗಿದೆ -ಮೋದಿ

ಪ್ರಧಾನಿ ಮೋದಿ ವಾರ್ನಿಂಗ್ ನಂ.2
ನಮ್ಮ ಗಡಿಯೊಳಕ್ಕೆ ನುಸುಳೋ ಧೈರ್ಯ ಯಾರಿಗೂ ಇಲ್ಲ
ಇನ್ನೊಂದೆಡೆ ನಮ್ಮ ಯಾವುದೇ ಸೇನಾ ನೆಲವನ್ನು ಚೀನಾ ಆಕ್ರಮಿಸಿಲ್ಲ ಆಕ್ರಮಿಸೋಕೆ ಬಿಡಲ್ಲ ಅಂತ ಚೀನಾಕ್ಕೆ ಪ್ರಧಾನಿ ಮೋದಿ ಖಡಕ್ ಮೆಸೇಜ್ ರವಾನಿಸಿದ್ರು. ನಮ್ಮ ಗಡಿಯೊಳಕ್ಕೆ ಯಾರೂ ಹೆಜ್ಜೆಯೂರಿಲ್ಲ. ನಮ್ಮ ಸೈನಿಕರಾಗಲಿ, ಸೈನ್ಯದ ನೆಲೆಯನ್ನಾಗಲಿ ಬೇರೆಯವರು ವಶಪಡಿಸಿಕೊಂಡಿಲ್ಲ. ನಮಗೆ ದೇಶ, ದೇಶದ ಜನರ ಹಿತವೇ ಮುಖ್ಯ. ನಮ್ಮ ಗಡಿಯೊಳಕ್ಕೆ ನುಸುಳೋ ಧೈರ್ಯ ಯಾರಿಗೂ ಇಲ್ಲ ಅಂತ ಪ್ರಧಾನಿ ಚೀನಾಕ್ಕೆ ಎಚ್ಚರಿಕ ಕೊಟ್ರು.

ಪ್ರಧಾನಿ ಮೋದಿ ವಾರ್ನಿಂಗ್ ನಂ.3
ಭಾರತ ಮಾತೆ ಮೇಲೆ ಕಣ್ಣೆತ್ತಿ ನೋಡಿದವರಿಗೆ ತಕ್ಕ ಪಾಠ!
ಇನ್ನು ಲಡಾಖ್​​ನ ಗಲ್ವಾನ್ ಕಣಿವೆಯಲ್ಲಿ ನಮ್ಮ ಯೋಧರ ಹೋರಾಟ ಎಂಥಾದ್ದು ಅನ್ನೋದನ್ನ ಪ್ರಧಾನಿ ಮೋದಿ ಸ್ಮರಿಸಿದ್ರು. ಶತ್ರುಗಳು ಭಾರತ ಮಾತೆಯ ಕಡೆ ಕಣ್ಣೆತ್ತಿ ನೋಡಿದ್ರೋ ಅಥವರಿಗೆ ನಮ್ಮ ವೀರರು ತಕ್ಕ ಪಾಠ ಕಲಿಸಿ ಹುತಾತ್ಮರಾಗಿದ್ದಾರೆ. ನಮ್ಮ ಸೈನಿಕರ ಬಲಿದಾನ, ಶೌರ್ಯ ಪ್ರತಿಯೊಬ್ಬ ಭಾರತೀಯನ ಮನದಲ್ಲಿಯೂ ಅಮರವಾಗಿರಲಿದೆ ಅಂತ ವೀರಪುತ್ರರನ್ನ ಕೊಂಡಾಡಿದ್ರು.

ಗಡಿಯಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಒತ್ತು!
ಇಷ್ಟೇ ಅಲ್ಲ, ನಮ್ಮ ಗಡಿಯನ್ನ ರಕ್ಷಿಸೋಕೆ ಯಾವ ರೀತಿಯ ಕ್ರಮ ಕೈಗೊಂಡಿದ್ದೇವೆ ಅನ್ನೋದನ್ನ ಪ್ರಧಾನಿ ಮೋದಿ ಎಳೆ ಎಳೆಯಾಗಿ ವಿವರಿಸಿದ್ರು. ಗಡಿ ಭಾಗದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಫೈಟರ್ ವಿಮಾನಳು, ಅತ್ಯಾಧುನಿಕ ಕ್ಷಿಪಣಿ, ಹೆಲಿಕಾಪ್ಟರ್ ಖರೀದಿಸಿ ಸೇನೆ ಬಲ ನೀಡಲಾಗಿದೆ. ನಮ್ಮ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಅಂತ ಚೀನಾಕ್ಕೆ ಪರೋಕ್ಷವಾಗಿ ವಾರ್ನ್ ಮಾಡಿದ್ರು.

ಗಡಿ ಕಾಯೋ ಸೈನಿಕರ ಬೆನ್ನಿಗೆ ಯಾವಾಗಲೂ ನಿಲ್ಲುತ್ತೇವೆ!
ಇನ್ನು, ದೇಶದ ಗಡಿ ರಕ್ಷಣಗೆಗಾಗಿ ಹಗಲು ರಾತ್ರಿ ದುಡಿಯುತ್ತಿರೋ ನಮ್ಮ ವೀರಯೋಧರ ಬೆನ್ನಿಗೆ ಇಡೀ ದೇಶವೇ ವೀರ ಯೋಧರ ಕುಟುಂಬದ ಬೆನ್ನಿಗೆ ಸರ್ಕಾರ ಯಾವಾಗಲೂ ನಿಲ್ಲಲಿದೆ ಅಂತ ಪ್ರಧಾನಿ ಮೋದಿ ಹೇಳಿದ್ರು.

ಒಟ್ನಲ್ಲಿ, ದೇಶ.. ನೆಲ-ಜಲ ಅಂತ ಬಂದಾಗ ಎಲ್ಲರೂ ಒಂದೇ. ಸರ್ವಪಕ್ಷ ಸಭೆಯಲ್ಲಿ ನಾಯಕರು ಕೂಡ ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಬಲ ತುಂಬಿದ್ದಾರೆ. ಇತ್ತ ಪ್ರಧಾನಿ ಮೋದಿ ಪ್ರತೀಕಾರದ ಪ್ರತಿಜ್ಞೆ ಮಾಡಿದ ಬೆನ್ನಲ್ಲೇ ಚೀನಾಗೆ ಮತ್ತೊಂದು ಪ್ರತ್ಯುತ್ತರವನ್ನೇ ನೀಡಿದ್ದಾರೆ. ಭಾರತ ಶಾಂತಿಪ್ರಿಯ ರಾಷ್ಟ್ರ. ನಮ್ಮ ತಂಟೆಗೆ ಬಂದ್ರೆ. ನಮ್ಮ ಭೂಮಿ ಕಣ್ಣು ಹಾಕಿದ್ರೆ ಹೊಸಕಿ ಹಾಕ್ತೀವಿ ಅನ್ನೋ ಮೂಲ ಶತ್ರು ರಾಷ್ಟ್ರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನಾದ್ರೂ ಕೆಣಕಿದ್ರೆ ಉಗ್ರ ನರಸಿಂಹನ ಅವತಾರ ತಾಳಬೇಕಾಗುತ್ತೆ ಹುಷಾರ್ ಅಂತಾ ಚೀನಾಕ್ಕೆ ಮತ್ತೆ ಎಚ್ಚರಿಕೆಯ ಮೆಸೇಜ್ ರವಾನಿದ್ದಾರೆ.

Published On - 7:32 am, Sat, 20 June 20