2024ರ ಚುನಾವಣೆಯಲ್ಲೂ ಗೆಲ್ಲುತ್ತೇವೆ, ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ: ಅಮಿತ್​ ಶಾ

|

Updated on: Oct 09, 2021 | 9:06 AM

ಅಮಿತ್​ ಶಾ ಗುಜರಾತ್​​ನ ಗಾಂಧಿನಗರಕ್ಕೆ ಸರ್ಕಾರಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ ಮಾಡಲು ಆಗಮಿಸಿದ್ದರು. ಇದೇ ವೇಳೆ ಪಾನ್ಸಾರ್​​ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಉದ್ಘಾಟಿಸಿದ್ದಾರೆ.

2024ರ ಚುನಾವಣೆಯಲ್ಲೂ ಗೆಲ್ಲುತ್ತೇವೆ, ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ: ಅಮಿತ್​ ಶಾ
ಅಮಿತ್​ ಶಾ
Follow us on

ಅಹ್ಮದಾಬಾದ್​: 2024ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ. ಮುಂದಿನ ಅವಧಿಗೂ ಖಂಡಿತ ಅವರೇ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ. ಹಾಗೇ, ಪ್ರಧಾನಿ ಮೋದಿಯವರನ್ನು ಬಿಟ್ಟು ಇನ್ಯಾವ ನಾಯಕನೂ ಹೀಗೆ 20 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ನಿರಂತರವಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲ ಎಂದೂ ಅವರು ತಿಳಿಸಿದ್ದಾರೆ. 

ಗುಜರಾತ್​​ನ ಗಾಂಧಿನಗರದ ಪಾನ್ಸಾರ್​​​ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್​ 7ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಗೆ ಕಾಲಿಟ್ಟು 20ವರ್ಷವಾಯಿತು. ಜಗತ್ತಿನ ಇನ್ಯಾವ ನಾಯಕನೂ ಹೀಗೆ  20 ವರ್ಷಗಳ ಕಾಲ ಬ್ರೇಕ್​ ಇಲ್ಲದೆ, ನಿರಂತರವಾಗಿ ಜನರ ಸೇವೆ ಮಾಡಿದ ಉದಾಹರಣೆಯಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ಕಷ್ಟ. ಅಂಥದ್ದರಲ್ಲಿ ನರೇಂದ್ರ ಮೋದಿಯವರನ್ನು ಜನರು ಮೆಚ್ಚಿ ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.  ಇನ್ನು, ನರೇಂದ್ರ ಮೋದಿ 2001ರ ಅಕ್ಟೋಬರ್​ 7ರಂದು ಗುಜರಾತ್​ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2014ರಲ್ಲಿ ಪ್ರಧಾನಮಂತ್ರಿಯಾದರು. 2024ರಲ್ಲಿಯೂ ಅವರೇ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಿದರು.

ಅಮಿತ್​ ಶಾ ಗುಜರಾತ್​​ನ ಗಾಂಧಿನಗರಕ್ಕೆ ಸರ್ಕಾರಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ ಮಾಡಲು ಆಗಮಿಸಿದ್ದರು. ಇದೇ ವೇಳೆ ಪಾನ್ಸಾರ್​​ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಉದ್ಘಾಟಿಸಿದ್ದಾರೆ. ಅಮಿತ್​ ಶಾ ನಿನ್ನೆ ಅಲ್ಲಿಯೇ ಇದ್ದ, ಚಹಾ ಅಂಗಡಿಯಿಂದ ಮಣ್ಣಿನ ಕಪ್​​​ನಲ್ಲಿ ಟೀ ಕುಡಿದಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ

ಎಣ್ಣೆ ಹಚ್ಚಿ ಮಸಾಜ್​ ಮಾಡಿ ಸ್ನಾನ ಮಾಡುವುದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ