Video: ಹೈದರಾಬಾದ್​​ನಲ್ಲಿ ಧಾರಾಕಾರ ಮಳೆ; ಚರಂಡಿ ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು

ವಿಪರೀತ ಮಳೆಯಿಂದಾಗಿ ಹೈದರಾಬಾದ್​​ನಲ್ಲಿ ವಾಹನ ಮತ್ತು ಜನಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜನರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು ಎಂದು ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​ ಎಚ್ಚರಿಕೆ ನೀಡಿದೆ.

Video: ಹೈದರಾಬಾದ್​​ನಲ್ಲಿ ಧಾರಾಕಾರ ಮಳೆ; ಚರಂಡಿ ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು
ಮಳೆಯಿಂದ ರಸ್ತೆಗಳು ಜಲಾವೃತಗೊಂಡಿರುವ ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Oct 09, 2021 | 10:47 AM

ಹೈದರಾಬಾದ್​​ ಮತ್ತು ತೆಲಂಗಾಣದ ಮೇಡ್ಚಲ್-ಮಲ್ಕಾಜಗಿರಿ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ನಿನ್ನೆಯಿಂದ ವಿಪರೀತ ಮಳೆ (Heavy Rainfall)ಯಾಗುತ್ತಿದೆ. ನಿನ್ನೆ ಸಂಜೆ ಸುರಿದ ಭರ್ಜರಿ ಮಳೆಗೆ ರಸ್ತೆಗಳಲ್ಲೆಲ್ಲ ನೀರು ತುಂಬಿದೆ. ಮನೆಗಳು, ವಿವಿಧ ಕಚೇರಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.  ಧಾರಾಕಾರವಾಗಿ ಸುರಿದ ಮಳೆಯಿಂದ ಚರಂಡಿಗಳೆಲ್ಲ ತುಂಬಿ ಹರಿದಿದೆ. ಇದರಿಂದಾಗಿ ಇಬ್ಬರು ಚರಂಡಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ ಎಂದು ಎಸಿಪಿ ಕೆ.ಪುರುಶೋತ್ತಮ್ ತಿಳಿಸಿದ್ದಾರೆ.  ಹಾಗೇ, ಓಲ್ಡ್​ ಸಿಟಿ ಏರಿಯಾದಲ್ಲಿ ನಿಲ್ಲಿಸಿದ್ದ ಟೆಂಪೋ ಟ್ರಕ್​ವೊಂದು ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ರೆಸ್ಟೋರೆಂಟ್​ವೊಂದರಲ್ಲಿ ಕೂಡ ನೀರು ತುಂಬಿದೆ.

ವಿಪರೀತ ಮಳೆಯಿಂದಾಗಿ ಹೈದರಾಬಾದ್​​ನಲ್ಲಿ ವಾಹನ ಮತ್ತು ಜನಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜನರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು. ಮಳೆ ಅಧಿಕವಾಗಿ, ಹೊರಗೆಲ್ಲ ಅಸ್ತವ್ಯಸ್ತವಾಗಿದ್ದು, ಮನೆಯಿಂದ ಹೊರಬರಬೇಡಿ ಎಂದು ಗ್ರೇಟರ್​ ಹೈದರಾಬಾದ್​​ನ ಮುನ್ಸಿಪಲ್​ ಕಾರ್ಪೋರೇಶನ್​​ನ ಜಾರಿ, ಜಾಗರೂಕತೆ ಮತ್ತು ವಿಪತ್ತು (EVDM)ವಿಭಾಗ ಎಚ್ಚರಿಕೆ ನೀಡಿದೆ.  ಸದ್ಯ ರಂಗಾರೆಡ್ಡಿ, ಮೇಡ್ಚಲ್-ಮಲ್ಕಾಜಗಿರಿ,​ ಜುಬಿಲಿ ಹಿಲ್ಸ್​, ಅಂಬರ್‌ಪೇಟೆ, ನಾಂಪಲ್ಲಿ, ಹಳೆಯ ಮಲಕಪೇಟೆ, ಯಾಕುತ್ಪೂರ, ಎಲ್‌ಬಿ ನಗರ ಮತ್ತು ವನಸ್ಥಾಲಿಪುರಗಳಲ್ಲಿ ಭಾರೀ ಮಳೆಯಾಗಿದೆ.  ಹೈದರಾಬಾದ್​​ನಲ್ಲಿ ಇಂದು ಕೂಡ ಅತ್ಯಧಿಕ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿರ್ಮಾಪಕ ಇಮ್ತಿಯಾಜ್​ ಖತ್ರಿ ಮನೆ ಮೇಲೆ ಎನ್​ಸಿಬಿ ದಾಳಿ; ಬಾಲಿವುಡ್​ ಸೆಲೆಬ್ರಿಟಿಗಳಿಗೆ ನಡುಕ ಶುರು

ಸಿಎಂ ಬೊಮ್ಮಾಯಿ ಅ.11ರಂದು ತಿರುಪತಿಯಲ್ಲಿ ವಾಸ್ತವ್ಯ, ತಿಮ್ಮಪ್ಪನ ದರ್ಶನ; ವೇಂಕಟೇಶ್ವರ ಭಕ್ತಿ ಚಾನೆಲ್ ಇನ್ನು ಕನ್ನಡದಲ್ಲೂ ಪ್ರಸಾರ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್