ಮೆಟ್ಟೆ ಫ್ರೆಡ್ರಿಕ್ಸನ್​​ರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ; ರಾಜ್​ಘಾಟ್​​ನಲ್ಲಿ ಗಾಂಧಿಗೆ ಗೌರವ ಸಲ್ಲಿಸಿದ ಡೆನ್ಮಾರ್ಕ್​ ಪ್ರಧಾನಿ

ಮೆಟ್ಟೆ ಫ್ರೆಡ್ರಿಕ್ಸನ್ ಅವರು ಈ ಮೂರು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಚಿಂತಕರ ಚಾವಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳು, ಸಿವಿಲ್​ ಸೊಸೈಟಿ ಸದಸ್ಯರೊಟ್ಟಿಗೆ ಸಂವಾದ ನಡೆಸಲಿದ್ದಾರೆ. 

ಮೆಟ್ಟೆ ಫ್ರೆಡ್ರಿಕ್ಸನ್​​ರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ; ರಾಜ್​ಘಾಟ್​​ನಲ್ಲಿ ಗಾಂಧಿಗೆ ಗೌರವ ಸಲ್ಲಿಸಿದ ಡೆನ್ಮಾರ್ಕ್​ ಪ್ರಧಾನಿ
ಮೆಟ್ಟೆ ಫ್ರೆಡ್ರಿಕ್ಸನ್​​ರನ್ನು ಬರ ಮಾಡಿಕೊಂಡ ಪಿಎಂ ಮೋದಿ
Follow us
TV9 Web
| Updated By: Lakshmi Hegde

Updated on:Oct 09, 2021 | 12:04 PM

ಇಂದು ಮುಂಜಾನೆ ಭಾರತಕ್ಕೆ ಬಂದಿಳಿದ ಡ್ಯಾನಿಶ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್ (Mette Frederiksen) ಅವರನ್ನು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿದ್ಯುಕ್ತವಾಗಿ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi)ಯವರು ಮೆಟ್ಟೆ ಅವರನ್ನು ಬರಮಾಡಿಕೊಂಡರು. ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಇಲ್ಲಿಯವರೆಗೆ ಯಾವುದೇ ರಾಷ್ಟ್ರನಾಯಕರೂ ಭಾರತಕ್ಕೆ ಬಂದಿರಲಿಲ್ಲ. ಇದೀಗ ಮೆಟ್ಟೆ ಫ್ರೆಡ್ರಿಕ್ಸನ್,  ಕೊರೊನಾ ನಂತರ ಭಾರತಕ್ಕೆ ಭೇಟಿಕೊಟ್ಟ ಮೊದಲ ವಿದೇಶಿ ನಾಯಕಿಯಾಗಿದ್ದಾರೆ. ಇಂದು ಬೆಳಗ್ಗೆ ದೆಹಲಿ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಬರಮಾಡಿಕೊಂಡಿದ್ದರು. ಹೂಗುಚ್ಛ ಕೊಟ್ಟು ಸ್ವಾಗತಿಸಿದ್ದರು.  

ಫ್ರೆಡ್ರಿಕ್ಸನ್ ಅವರು ಈ ಮೂರು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿಯವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅದರ ಹೊರತಾಗಿ ಚಿಂತಕರ ಚಾವಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳು, ಸಿವಿಲ್​ ಸೊಸೈಟಿ ಸದಸ್ಯರೊಟ್ಟಿಗೆ ಸಂವಾದ ನಡೆಸಲಿದ್ದಾರೆ.

ಈ ವರ್ಷ ಪ್ರಾರಂಭದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​.ಜೈಶಂಕರ್​ ಡೆನ್ಮಾರ್ಕ್​​ಗೆ ಭೇಟಿ ನೀಡಿದ್ದರು. ಡೆನ್ಮಾರ್ಕ್​ ಮತ್ತು ಭಾರತದ ನಡುವೆ ವ್ಯವಹಾರ ಸಂಬಂಧ ಬಲವಾಗಿದೆ. ಹೂಡಿಕೆಯೂ ಇದೆ. 200ಕ್ಕೂ ಹೆಚ್ಚು ಡ್ಯಾನಿಶ್​ ಕಂಪನಿಗಳು ಭಾರತದಲ್ಲಿ ಇದ್ದರೆ, ಡೆನ್ಮಾರ್ಕ್​​ನಲ್ಲಿ 60 ಭಾರತದ ಕಂಪನಿಗಳಿವೆ.  ನವೀಕರಿಸಬಹುದಾದ ಇಂಧನ, ಶುದ್ಧ ತಂತ್ರಜ್ಞಾನ, ನೀರು ಮತ್ತು ತ್ಯಾಜ್ಯ ನಿರ್ವಹಣೆ, ಕೃಷಿ ಮತ್ತು ಪಶು ಸಂಗೋಪನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಡಿಜಿಟಲೀಕರಣ, ಸ್ಮಾರ್ಟ್ ಸಿಟಿ ಮತ್ತು ಹಡಗು ವಲಯದಲ್ಲಿ  ಉಭಯ ದೇಶಗಳ ನಡುವೆ  ಸಹಕಾರ ಬಲವಾಗಿದೆ. ಇದೀಗ ಡೆನ್ಮಾರ್ಕ್​ ಪ್ರಧಾನಿ ಭೇಟಿಯಿಂದ ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ.

ಇದನ್ನೂ ಓದಿ:  ನಿರ್ಮಾಪಕ ಇಮ್ತಿಯಾಜ್​ ಖತ್ರಿ ಮನೆ ಮೇಲೆ ಎನ್​ಸಿಬಿ ದಾಳಿ; ಬಾಲಿವುಡ್​ ಸೆಲೆಬ್ರಿಟಿಗಳಿಗೆ ನಡುಕ ಶುರು

ಅಬ್ಬಬ್ಬಾ! ದೊಡ್ಡ ಗಾತ್ರದ ಹಾವಿನ ಬಾಲ ಹಿಡಿದು ಎಳೆದಾಡುವ ಎರಡು ವರ್ಷದ ಮಗುವಿನ ವಿಡಿಯೋ ನೋಡಿ

Published On - 11:50 am, Sat, 9 October 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?