ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಬಸ್ ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.
ಸಾಯಿಬಾಬಾ ಭಕ್ತರು ಪ್ರಯಾಣಿಸುತ್ತಿದ್ದ ಬಸ್ಸೊಂದು ನಾಸಿಕ್-ಶಿರಡಿ ಹೆದ್ದಾರಿಯ ಪಥರೆ ಬಳಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 10 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಥಾಣೆಯ ಅಂಬರನಾಥದಿಂದ ಹೊರಟಿದ್ದ ಖಾಸಗಿ ಬಸ್ ಅಹಮದ್ನಗರ ಜಿಲ್ಲೆಯ ಶಿರಡಿಗೆ ಹೋಗುತ್ತಿತ್ತು, ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ನಾಸಿಕ್ ಸಿನ್ನಾರ್ ತೆಹಸಿಲ್ನ ಪಥರೆ ಶಿವಾರ್ ಬಳಿ ಬೆಳಗ್ಗೆ 7 ಗಂಟೆ ಸುಮಾರಿಗೆ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು.
ಮೃತರಲ್ಲಿ 7 ಮಹಿಳೆಯರು ಹಾಗೂ ಇಬ್ಬರು ಸಣ್ಣ ಮಕ್ಕಳು ಓರ್ವ ಪುರುಷ ಸೇರಿದ್ದಾರೆ, ಗಾಯಗೊಂಡವರಿಗೆ ಸಿನ್ನಾರ್ ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗೆ ಗಂಭೀರವಾಗಿ ಗಾಯಗಳಾಗಿರುವ ಕಾರಣ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
Published On - 9:55 am, Fri, 13 January 23