ನಾಸಿಕ್ ಟಿಸಿಎಸ್ ಪ್ರಕರಣ; ಪರಾರಿಯಾಗಿದ್ದ ಗರ್ಭಿಣಿ ನಿದಾ ಖಾನ್‌ಗೆ ಜಾಮೀನು ನಿರಾಕರಣೆ

ನಾಸಿಕ್ ಟಿಸಿಎಸ್ ಪ್ರಕರಣದ ಆರೋಪಿ ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಏಪ್ರಿಲ್ 27ಕ್ಕೆ ಮುಂದಿನ ನ್ಯಾಯಾಲಯದ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಟಿಸಿಎಸ್ ನಾಸಿಕ್ ಪ್ರಕರಣದಲ್ಲಿ ನಿದಾ ಖಾನ್‌ಗೆ ಮಧ್ಯಂತರ ರಕ್ಷಣೆಯನ್ನು ನಿರಾಕರಿಸಿದ ನ್ಯಾಯಾಲಯ ಏಪ್ರಿಲ್ 27ರಂದು ಅವರ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಮಧ್ಯಂತರ ಪರಿಹಾರ ಅರ್ಜಿ ಎರಡನ್ನೂ ವಿಚಾರಣೆ ನಡೆಸಲಿದೆ.

ನಾಸಿಕ್ ಟಿಸಿಎಸ್ ಪ್ರಕರಣ; ಪರಾರಿಯಾಗಿದ್ದ ಗರ್ಭಿಣಿ ನಿದಾ ಖಾನ್‌ಗೆ ಜಾಮೀನು ನಿರಾಕರಣೆ
Nida Khan

Updated on: Apr 20, 2026 | 6:50 PM

ನಾಸಿಕ್, ಏಪ್ರಿಲ್ 20: ನಾಸಿಕ್ ಟಿಸಿಎಸ್ ಪ್ರಕರಣದಲ್ಲಿ (TCS Case) ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅವರ ಜಾಮೀನು ಅರ್ಜಿಯನ್ನು ಏಪ್ರಿಲ್ 27ಕ್ಕೆ ವಿಚಾರಣೆ ನಡೆಸಲಾಗುವುದು. ನಿದಾ ಖಾನ್ ಅವರ ವಕೀಲರು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ಮಧ್ಯಂತರ ಜಾಮೀನು ಕೋರಿದ್ದರು. ಜಾಮೀನು ಅರ್ಜಿ ಮತ್ತು ಮಧ್ಯಂತರ ಪರಿಹಾರ ಅರ್ಜಿ ಎರಡರ ಮುಂದಿನ ವಿಚಾರಣೆ ಏಪ್ರಿಲ್ 27ಕ್ಕೆ ನಡೆಯಲಿದೆ.

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಚೇರಿಯಲ್ಲಿ ಧಾರ್ಮಿಕ ಮತಾಂತರ ಮತ್ತು ಮಹಿಳಾ ಸಹೋದ್ಯೋಗಿಗಳ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಿದಾ ಖಾನ್, ಶನಿವಾರ ನಾಸಿಕ್ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

ನಾನು 2 ತಿಂಗಳ ಗರ್ಭಿಣಿ, ಹೀಗಾಗಿ ಜಾಮೀನು ನೀಡಿ ಎಂದು ಆಕೆ ಮನವಿ ಮಾಡಿದ್ದರು. ಆಕೆ ಪರಾರಿಯಾಗಿದ್ದು, ಆಕೆಯ ಪರ ವಕೀಲರು ಅರ್ಜಿ ವಿಚಾರಣೆಗೆ ಹಾಜರಾಗಿದ್ದರು. ನಾಸಿಕ್ ಟಿಸಿಎಸ್ ಕಂಪನಿಯ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 8 ಉದ್ಯೋಗಿಗಳನ್ನು ಬಂಧಿಸಿದ್ದಾರೆ. ನಿದಾ ಖಾನ್ ಅವರನ್ನು ಪತ್ತೆಹಚ್ಚಲು 3 ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಒಂದು ತಂಡ ಮುಂಬ್ರಾ ತಲುಪಿದೆ.

ದೌರ್ಜನ್ಯ, ಬಲವಂತದ ಮತಾಂತರಕ್ಕೆ ಯತ್ನಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು, ಕಿರುಕುಳ ಮತ್ತು ನಾಸಿಕ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಮಾನಸಿಕ ಕಿರುಕುಳ ಸೇರಿದಂತೆ ಆರೋಪಗಳಿಗೆ ಸಂಬಂಧಿಸಿದ 9 ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:  ಮಲೇಷ್ಯಾ ಧರ್ಮಗುರುವಿನ ಲಿಂಕ್, ವಾಟ್ಸಾಪ್ ಚಾಟ್; ಕಗ್ಗಂಟಾಗುತ್ತಲೇ ಇದೆ ಟಿಸಿಎಸ್ ಮತಾಂತರ ಪ್ರಕರಣ

ಇನ್ನೂ ತಲೆಮರೆಸಿಕೊಂಡಿರುವ 26 ವರ್ಷದ ನಿದಾ ಖಾನ್ ತನ್ನ ಎರಡು ತಿಂಗಳ ಗರ್ಭಧಾರಣೆಯನ್ನು ಉಲ್ಲೇಖಿಸಿ ನಿರೀಕ್ಷಣಾ ಜಾಮೀನು ಕೋರಿದ್ದರು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನಾಸಿಕ್ ಬಿಪಿಒ ಘಟಕದಲ್ಲಿ ನಡೆದ ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಿದಾ ಖಾನ್ “ಮಾಸ್ಟರ್ ಮೈಂಡ್” ಎಂದು ಪೊಲೀಸರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us