ಯಾರೂ ಕೂಡ ಕೀರ್ತಿ ಗಳಿಸುವ ಉದ್ದೇಶದಿಂದ ಕೆಲಸ ಮಾಡಬೇಡಿ, ಸೇವಾ ಮನೋಭಾವದಿಂದ ಕೆಲಸ ಮಾಡಿ, ಸಮರ್ಪಣಾ ಭಾವವೇ ನಿಮ್ಮ ದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ರಾಷ್ಟ್ರೀಯ ನಾಗರಿಕ ಸೇವೆಗಳ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ನನಗೆ ಅಧಿಕಾರಿಗಳ ಜವಾಬ್ದಾರಿಗಳು ತಿಳಿದಿವೆ, ಕಳೆದ 20-30 ವರ್ಷಗಳಿಗಿಂತ ಈಗ ಸರ್ಕಾರದಲ್ಲಿ ಕುಳಿತವರ ಜವಾಬ್ದಾರಿ ಮೊದಲಿಗಿಂತ ಹೆಚ್ಚಾಗಿದೆ. ಅಧಿಕಾರಿಗಳಿಗೆ ಕೆಲಸದ ಹೊರೆ ಹೆಚ್ಚಿಲ್ಲ, ಸವಾಲುಗಳು ಹೆಚ್ಚಿವೆ ಎಂದರು.
ಯಾವುದೇ ವ್ಯವಸ್ಥೆಯಲ್ಲಾದರೂ ಸ್ಪರ್ಧೆ ಎಂಬುದಿರಬೇಕು, ಈಗ ಜನರು ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯೊಂದಿಗೆ ಹೋಲಿಸುತ್ತಿದ್ದಾರೆ. ನಾವು ನಮ್ಮ ಕಾರ್ಯ ವಿಧಾನಗಳನ್ನು ಎಷ್ಟು ಬೇಗ ಬದಲಾಯಿಸುತ್ತೇವೆ ಅಷ್ಟು ಒಳ್ಳೆಯದು, ಆಗ ಈ ಸವಾಲುಗಳು ಅವಕಾಶಗಳಾಗಿ ಬದಲಾಗುತ್ತವೆ. ಬದಲಾಗುತ್ತಿರುವ ಕಾಲದಲ್ಲಿ, ಸರ್ಕಾರವಿಲ್ಲದಿರುವಾಗ ಕೊರತೆ ಇರಬಹುದು, ಆದರೆ ಸರ್ಕಾರ ಇರುವಾಗ ಯಾವುದೇ ಕೊರತೆ ಇರಬಾರದು.
ಮತ್ತಷ್ಟು ಓದಿ: National Civil Services Day 2023: ರಾಷ್ಟ್ರೀಯ ನಾಗರಿಕ ಸೇವೆಗಳ ದಿನ ಇತಿಹಾಸ, ಮಹತ್ವ ತಿಳಿಯಿರಿ
ಡಿಜಿಟಲ್ ಪಾವತಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಮೊಬೈಲ್ ಡೇಟಾ ಅಗ್ಗವಾಗಿರುವ ದೇಶಗಳಲ್ಲಿ ಭಾರತವೂ ಒಂದು. ಇಂದು ದೇಶದ ಗ್ರಾಮೀಣ ಆರ್ಥಿಕತೆ ಬದಲಾಗುತ್ತಿದೆ ಎಂದು ಹೇಳಿದರು. ಇದು ಪೈಪೋಟಿಯ ಯುಗ, ಸವಾಲುಗಳು ದೊಡ್ಡದಿವೆ. ಗೃಹಿಣಿಯ ಅರ್ಹತೆಯನ್ನು ಎಂದಿಗೂ ಗಣನೆಗೆ ತೆಗೆದುಕೊಳ್ಳುವುದಿಲ್ಲ, ಒಂದೊಮ್ಮೆ ಕುಟುಂಬದಲ್ಲಿ ಮುಖ್ಯಸ್ಥರು ಇಲ್ಲ ಎಂದಾಗ ಗೃಹಿಣಿಯು ನಿರ್ವಹಣೆ ಮಾಡಲು ಪ್ರಾರಂಭಿಸುತ್ತಾಳೆ. ಪ್ರತಿಭಾವಂತರು ಐಎಎಸ್ ಅಧಿಕಾರಿಗಳು ಕೂಡ ಆಗುತ್ತಾರೆ ಎಂದರು. ಮಹಿಳೆಯ ಸಾಮರ್ಥ್ಯವನ್ನು ಅರಿಯುವ ಕಾಲ ಬಂದಿದೆ ಎಂದರು.
ನಿಮ್ಮ ಅನುಭವವು ಹೊರೆಯಾಗಬಾರದು
ಅನುಭವವು ಹೊರೆಯಾಗಬಾರದು. ಒಳ್ಳೆಯ ಮತ್ತು ಹೊಸ ಕೆಲಸವನ್ನು ಪ್ರೋತ್ಸಾಹಿಸಬೇಕು. ಅಧಿಕಾರಿಗಳು ಮೊಬೈಲ್‌ನಲ್ಲಿ ನಿರತರಾಗಿದ್ದಾರೆ, ಆದ್ದರಿಂದ ನಾನು ಅದನ್ನು ಸಭೆಯಲ್ಲಿ ಸ್ವಿಚ್ ಆಫ್ ಮಾಡಿದ್ದೇನೆ. ಇಂದು ಜಗತ್ತು ಇ-ಆಡಳಿತದಿಂದ ಎಂ-ಆಡಳಿತದತ್ತ ಸಾಗಿದೆ. ಯಾವ ಶಕ್ತಿಯನ್ನು ಮತ್ತು ಯಾವಾಗ ಬಳಸಬೇಕು ಎಂಬುದನ್ನು ತಿಳಿಯಬೇಕು.
ಸಂಪ್ರದಾಯವನ್ನು ಕಾಪಾಡಿಕೊಳ್ಳುವುದು ಸಹ ಒಂದು ಸವಾಲಾಗಿದೆ, ಅದನ್ನು ನಾವು ನೋಡಿಕೊಳ್ಳಬೇಕು. ನಾನು 16 ವರ್ಷಗಳಿಂದ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದೇನೆ. ಉತ್ತಮ ಟೀಮ್‌ವರ್ಕ್ ಇದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ನೀವು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮಯವನ್ನು ಒಮ್ಮೆ ನೆನಪಿಸಿಕೊಳ್ಳಿ, ಹಾಗಾದರೆ ಕನಸುಗಳು ಯಾವುವು, ಅದರಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂಬುದರ ಬಗ್ಗೆ ಅವಲೋಕನ ಮಾಡಿ ಎಂದು ಹೇಳಿದರು.
ನಮ್ಮ ಜೀವನದಿಂದಲೇ ನಾವು ಸ್ಪೂರ್ತಿ ಪಡೆಯಬಹುದು, ಗುಂಡಿ ತೋಡುವುದು ಮತ್ತು ತುಂಬುವುದು ಮಾತ್ರ ಕೆಲಸವಲ್ಲ, ಮರಗಳನ್ನು ನೆಡಬೇಕು. ನಾವು ಯಾವುದೇ ಕೆಲಸ ಮಾಡಿದರೂ ಫಲಿತಾಂಶ ಇರಬೇಕು. ಈಗ ನಾವು ಪ್ರತಿ ಕೆಲಸವನ್ನು ಫಲಿತಾಂಶದ ತಕ್ಕಡಿಯಲ್ಲಿ ತೂಗಬೇಕು ಎಂದು ನುಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Fri, 21 April 23