ಶರದ್ ಪವಾರ್ ನಂತರ ಎನ್​​ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಯಾರು?; ನಾಳೆ ನಡೆಯಲಿರುವ ಸಭೆಯಲ್ಲಿ ನಿರ್ಧಾರ

|

Updated on: May 04, 2023 | 1:55 PM

ವಾರ್ ಅವರ ದಿಢೀರ್ ರಾಜೀನಾಮೆ ನಿರ್ಧಾರವು ಪಕ್ಷದ ಕಾರ್ಯಕರ್ತರಿಗೆ ಶಾಕಿಂಗ್ ಆಗಿತ್ತು. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅವರು ಪವಾರ್ ನ್ನು ಒತ್ತಾಯಿಸಿದ್ದರು.

ಶರದ್ ಪವಾರ್ ನಂತರ ಎನ್​​ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಯಾರು?; ನಾಳೆ ನಡೆಯಲಿರುವ ಸಭೆಯಲ್ಲಿ ನಿರ್ಧಾರ
ಶರದ್ ಪವಾರ್
Follow us on

ಶರದ್ ಪವಾರ್​ (Sharad Pawar) ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (Nationalist Congress Party) ನಾಯಕರ ಸಮಿತಿಯು ಶುಕ್ರವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಸೇರಲಿದೆ. ಮಂಗಳವಾರ ಎನ್‌ಸಿಪಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದ ನಂತರ ಶರದ್ ಪವಾರ್ ಅವರೇ ಸಮಿತಿಯ ಸದಸ್ಯರನ್ನು ಹೆಸರಿಸಿದ್ದರು. ಈ ಸಮಿತಿಯಲ್ಲಿ ಹಿರಿಯ ಸದಸ್ಯರಾದ ಸುಪ್ರಿಯಾ ಸುಳೆ (Supriya Sule), ಅಜಿತ್ ಪವಾರ್, ಪ್ರಫುಲ್ ಪಟೇಲ್, ಜಯಂತ್ ಪಾಟೀಲ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಅನಿಲ್ ದೇಶಮುಖ್, ರಾಜೇಶ್ ಟೋಪೆ ಮತ್ತು ಇತರರು ಇದ್ದಾರೆ. ಪವಾರ್ ಅವರ ದಿಢೀರ್ ರಾಜೀನಾಮೆ ನಿರ್ಧಾರವು ಪಕ್ಷದ ಕಾರ್ಯಕರ್ತರಿಗೆ ಶಾಕಿಂಗ್ ಆಗಿತ್ತು. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅವರು ಪವಾರ್ ನ್ನು ಒತ್ತಾಯಿಸಿದ್ದರು. ಪಕ್ಷದ ಕಾರ್ಯಕರ್ತರಿಂದ ಒತ್ತಡ ಹೆಚ್ಚಾದ ನಂತರ, 82 ವರ್ಷದ ನಾಯಕ ತಮ್ಮ ನಿರ್ಧಾರವನ್ನು ಪುನರ್ವಿಮರ್ಶಿಸಲು ಎರಡು-ಮೂರು ದಿನಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು.

ನಮ್ಮ ಕೆಲವು ಕಾರ್ಯಕರ್ತರು ಪವಾರ್ ತಮ್ಮ ರಾಜೀನಾಮೆಯನ್ನು ಹಿಂಪಡೆಯಬೇಕೆಂದು ಬಯಸಿದ್ದರು. ಅಜಿತ್ ಪವಾರ್, ಸುಪ್ರಿಯಾ ಸುಳೆ, ನಾನು, ಛಗನ್ ಭುಜಬಲ್ ಮತ್ತು ಇತರರು ಇಂದು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೇವೆ. ನಾವು ಅವರಲ್ಲ ಮತ್ತೆ ವಿನಂತಿಸಿದ್ದೇವೆ. ಆದರೆ ನಾನು ಹೇಳಿದಂತೆ ನಾವು ಅವರಿಗೆ ಒಂದೆರಡು ದಿನ ನೀಡಬೇಕು ಎಂದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ನಿನ್ನೆ ಹೇಳಿದ್ದರು.
ಆದಾಗ್ಯೂ ಪವಾರ್ ಅವರ ಉತ್ತರಾಧಿಕಾರಿ ಮಗಳು ಸುಪ್ರಿಯಾ ಸುಳೆ ಅಥವಾ ಸೋದರಳಿಯ ಅಜಿತ್ ಪವಾರ್ ಆಗುತ್ತಾರೆಯೇ ಎಂಬುದು ಕುತೂಹಲ ಹುಟ್ಟಿಸಿದೆ.

ಎನ್‌ಸಿಪಿ ನಾಯಕ ಪವಾರ್ ಬುಧವಾರ ವೈಬಿ ಚವಾಣ್ ಸೆಂಟರ್‌ನಲ್ಲಿ ಪಕ್ಷದ ಮುಖಂಡರು ಮತ್ತು ಶಾಸಕರನ್ನು ಐದು ಗಂಟೆಗಳ ಕಾಲ ಭೇಟಿಯಾದರು. ನಂತರ, ಅವರು ಸಂಜೆ ತಮ್ಮ ಸಿಲ್ವರ್ ಓಕ್ ನಿವಾಸದಲ್ಲಿ ಮತ್ತೊಂದು ಸಭೆ ನಡೆಸಿದರು. ಪವಾರ್ ಅವರ ನಿಷ್ಠಾವಂತರು 2026 ರಲ್ಲಿ ರಾಜ್ಯಸಭಾ ಸಂಸದರಾಗುವವರೆಗೆ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ತಮ್ಮ ನಾಯಕನಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಇಷ್ಟೊಂದು ಅವಮಾನ ಮಾಡಿದ್ರು, ನಮ್ಮ ಪದಕ, ಪ್ರಶಸ್ತಿಗಳನ್ನು ವಾಪಸ್ ತೆಗೆದುಕೊಳ್ಳಿ: ನೊಂದು ನುಡಿದ ಕುಸ್ತಿಪಟುಗಳು

ಪವಾರ್ ಎನ್‌ಸಿಪಿ ಮುಖ್ಯಸ್ಥರಾಗಿ ಮುಂದುವರಿದರೆ ಮಗಳು ಸುಳೆ ಕಾರ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದು ಉತ್ತರಾಧಿಕಾರಿ ಸಮಸ್ಯೆ ಬಗೆಹರಿಯಲಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ