ದೆಹಲಿ: 10 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು (Navjot Singh Sidhu) ಇಂದು (ಗುರುವಾರ) ದೆಹಲಿಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ (Rahul Gandhi )ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ ಕ್ರಾಂತಿ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದ ಸಿಧು ಜಾಬ್ ಜನರಿಗಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ನನ್ನ ಮಾರ್ಗದರ್ಶಕ ರಾಹುಲ್ ಜೀ ಮತ್ತು ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಿ ಪ್ರಿಯಾಂಕಾ ಜಿ ಅವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಮಾಡಿದೆ. ನೀವು ನನ್ನನ್ನು ಜೈಲಿನಲ್ಲಿಡಬಹುದು, ನನ್ನನ್ನು ಬೆದರಿಸಬಹುದು, ನನ್ನ ಎಲ್ಲಾ ಹಣಕಾಸು ಖಾತೆಗಳನ್ನು ನಿರ್ಬಂಧಿಸಬಹುದು. ಆದರೆ ಪಂಜಾಬ್ ಮತ್ತು ನನ್ನ ನಾಯಕರಿಗೆ ನನ್ನ ಬದ್ಧತೆಯನ್ನು ಕಡಿಮೆ ಮಾಡಲಾಗುವುದಿಲ್ಲ. ನನ್ನ ನಾಯಕರು ಒಂದು ಇಂಚು ಕೂಡ ಕದಲುವುದಿಲ್ಲ ಅಥವಾ ಹಿಂದೆ ಸರಿಯುವುದಿಲ್ಲ ಎಂದು ಸಿಧು ಫೋಟೊ ಟ್ವೀಟ್ ಮಾಡಿದ್ದಾರೆ.
Met my Mentor Rahul ji and Friend, Philosopher, Guide Priyanka ji in New Delhi Today.
You can Jail me , Intimidate me, Block all my financial accounts but My commitment for Punjab and My Leaders will neither flinch nor back an inch !! pic.twitter.com/9EiRwE5AnP
— Navjot Singh Sidhu (@sherryontopp) April 6, 2023
ಪಂಜಾಬ್‌ನ ಪಟಿಯಾಲದಲ್ಲಿ 34 ವರ್ಷಗಳ ಹಿಂದೆ ರಸ್ತೆ ಜಗಳದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿದಂತೆ ನವಜೋತ್ ಸಿಧು 10 ತಿಂಗಳ ಕಾಲ ಜೈಲಿನಲ್ಲಿದ್ದರು.
ಇದನ್ನೂ ಓದಿ: AK Antony: ಅನಿಲ್ ಆಂಟನಿಯ ನಿರ್ಧಾರ ತಪ್ಪು, ಇದರಿಂದ ನನಗೆ ತುಂಬಾ ನೋವಾಗಿದೆ: ಎಕೆ ಆಂಟನಿ ಪ್ರತಿಕ್ರಿಯ
ಈ ಪ್ರಕರಣದಲ್ಲಿ ಅವರಿಗೆ ಒಂದು ವರ್ಷದ ಶಿಕ್ಷೆಯನ್ನು ನೀಡಲಾಯಿತು. ಶಿಕ್ಷೆಯ ಅವಧಿ ಪ್ರಕಾರ ಅವರು ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತ ಆದರೆ ಉತ್ತಮ ನಡವಳಿಕೆಯ ಕಾರಣದಿಂದ ಮುಂಚಿತವಾಗಿ ಬಿಡುಗಡೆ ಮಾಡಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ