ಭಗವಂತ್​ ಮಾನ್ ಕಾಂಗ್ರೆಸ್​ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲು ಸಿದ್ಧ: ಸಿಧು

|

Updated on: Mar 08, 2024 | 8:20 AM

ಪಂಜಾಬ್​ನ ಮುಖ್ಯಮಂತ್ರಿ ಭಗವಂತ್ ಮಾನ್ ಒಮ್ಮೆ ಕಾಂಗ್ರೆಸ್​ಗೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅವರು ನನ್ನ ಬಳಿ ಬಂದು ನೀವು ಆಮ್​ ಆದ್ಮಿ ಪಕ್ಷಕ್ಕೆ ಸೇರಿ ಅಥವಾ ನಾನೇ ಕಾಂಗ್ರೆಸ್​ ಸೇರಿತ್ತೇನೆ, ನಾನು ಉಪಮುಖ್ಯಮಂತ್ರಿಯಾಗುತ್ತೇನೆ ಎಂದು ಬಯಕೆ ವ್ಯಕ್ತಪಡಿಸಿದ್ದಾಗಿ ನವ್​ಜೋತ್​ ಸಿಂಗ್ ಸಿಧು ಹೇಳಿದ್ದಾರೆ.

ಭಗವಂತ್​ ಮಾನ್ ಕಾಂಗ್ರೆಸ್​ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲು ಸಿದ್ಧ: ಸಿಧು
ನವಜೋತ್​ ಸಿಂಗ್ ಸಿಧು ಹಾಗೂ ಭಗವಂತ್ ಮಾನ್
Image Credit source: Hindustan Times
Follow us on

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್(Bhagwant Mann) ಒಮ್ಮೆ ಕಾಂಗ್ರೆಸ್ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು ಮತ್ತು ಉಪಮುಖ್ಯಮಂತ್ರಿಯಾಗಿ  ಸೇವೆ ಸಲ್ಲಿಸಲು ಸಿದ್ಧರಾಗಿದ್ದರು ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು(Navjot Singh Sidhu) ಹೇಳಿದ್ದಾರೆ. ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನ್ನನ್ನು ಸಂಪರ್ಕಿಸಿದ್ದವರ ಬಗ್ಗೆ ನಾನು ನಿಮಗೆ ಒಂದು ವಿಷಯವನ್ನು ಹೇಳಬಲ್ಲೆ. ಭಗವಂತ್ ಮಾನ್ ಅವರು ನನ್ನ ಬಳಿಗೆ ಬಂದಿದ್ದರು ಎಂದು ಸಿಧು ಹೇಳಿದ್ದಾರೆ.

ನೀವು ನನ್ನನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡರೆ ನಾನು ನಿಮ್ಮ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲು ಸಿದ್ಧ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಸಿಧು ಅವರು ಬಿಜೆಪಿಗೆ ತೆರಳುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಲಾಯಿತು ಆಗ, ನಾನು ಕಾಂಗ್ರೆಸ್​ಗೆ ನಿಷ್ಠೆಯಿಂದಿರುತ್ತೇನೆ ಎಂದು ಹೇಳಿದರು.

ಪಂಜಾಬ್​ನಲ್ಲಿ ಸೇವೆ ಸಲ್ಲಿಸುವುದು ಪ್ರಮುಖ ವಿಷಯವಾಗಿದೆ, ಪಂಜಾಬ್​ನಲ್ಲಿ ಹೆಚ್ಚುತ್ತಿರುವ ಸಾಲದ ಬಗ್ಗೆ ಮಾನ್ ನೇತೃತ್ವದ ಎಎಪಿ ಸರ್ಕಾರವನ್ನು ಗುರಿಯಾಗಿರಿಸಿ ಮಾತನಾಡಿ, ಅವರು ವಿಮಾನಗಳು, ಐಷಾರಾಮಿ ವಾಹನಗಳಲ್ಲಿ ತೆರಳುತ್ತಾರೆ ಆದರೆ ಪಂಜಾಬ್ ಸರ್ಕಾರದ ಆರ್ಥಿಕ ಸ್ಥಿತಿ ಸರಿ ಇಲ್ಲ ಎಂದು ಹೇಳಿದರು.

ಅರವಿಂದ್ ಕೇಜ್ರಿವಾಲ್ ಮತ್ತು ಸ್ವತಃ ಭಗವಂತ್ ಮಾನ್ ಅವರು 13 ರಲ್ಲಿ 13 ಸ್ಥಾನಗಳನ್ನು ಪಂಜಾಬ್​​ನಲ್ಲಿ ಗೆಲ್ಲುವುದಾಗಿ ಹೇಳಿಕೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ 8 ಸ್ಥಾನ, ಅಕಾಲಿ-ಬಿಜೆಪಿ ಮೈತ್ರಿಕೂಟ 4 ಸ್ಥಾನಗಳ ಹಾಗೂ ಎಎಪಿ 1 ಸ್ಥಾನವನ್ನು ಪಡೆದುಕೊಂಡಿತ್ತು.

ಇದಲ್ಲದೇ, ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳ ಬಗ್ಗೆಯು ಹಂಚಿಕೊಳ್ಳಬಹುದು. ಈ ಹಿಂದೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ ಇತ್ತೀಚೆಗೆ ಕೇಜ್ರಿವಾಲ್ ಪಂಜಾಬ್‌ನಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಘೋಷಿಸಿದ್ದರು.

ಮತ್ತಷ್ಟು ಓದಿ: Navjot Singh Sidhu: ಕಾಂಗ್ರೆಸ್​​ ತೊರೆದು ಬಿಜೆಪಿ ಸೇರಲಿದ್ದಾರೆ ನವಜೋತ್ ಸಿಂಗ್ ಸಿಧು: ವರದಿ

ಕಾಂಗ್ರೆಸ್ ಜೊತೆಗಿನ ಮೈತ್ರಿಯ ಮಾತುಕತೆಯಿಂದ ಹಿಂದೆ ಸರಿದಿದೆ. ಹಾಗಾಗಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿದ್ದು, ಈ ನಿರ್ಧಾರ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ