ಪುಲ್ವಾಮಾ, ಉರಿ ದಾಳಿಗಳೆರಡೂ ಮೋದಿ ಸರ್ಕಾರದ ಪ್ಲಾನ್; ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಗಂಭೀರ ಆರೋಪ

| Updated By: ಸುಷ್ಮಾ ಚಕ್ರೆ

Updated on: Jan 16, 2023 | 3:37 PM

2016ರ ಉರಿ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಎರಡನ್ನೂ ಕೇಂದ್ರ ಸರ್ಕಾರ ಯೋಜಿಸಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಶೇಖ್ ಮುಸ್ತಫಾ ಕಮಲ್ ಆರೋಪಿಸಿದ್ದಾರೆ.

ಪುಲ್ವಾಮಾ, ಉರಿ ದಾಳಿಗಳೆರಡೂ ಮೋದಿ ಸರ್ಕಾರದ ಪ್ಲಾನ್; ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಗಂಭೀರ ಆರೋಪ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಶೇಖ್ ಮುಸ್ತಫಾ ಕಮಲ್
Image Credit source: times now
Follow us on

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಬಗ್ಗೆ ನ್ಯಾಷನಲ್​ ಕಾನ್ಫರೆನ್ಸ್ ಪಕ್ಷದ (NC) ನಾಯಕ ಅವಮಾನ ಮಾಡಿದ್ದಾರೆ. ಪುಲ್ವಾಮಾ (Pulwama Attack), ಉರಿಯಲ್ಲಿ (Uri Attack) ನಡೆದ ದಾಳಿಗಳು ಬಿಜೆಪಿ ಸರ್ಕಾರವೇ ರೂಪಿಸಿದ ದಾಳಿಗಳು ಎಂದು ನ್ಯಾಷನಲ್ ಕಾನ್ಫರೆನ್ಸ್​ ಪಕ್ಷ ಆರೋಪಿಸಿದೆ. ಇದುವರೆಗೂ ಈ ಎರಡು ದಾಳಿಗಳಲ್ಲಿ ಮಡಿದ ಸೈನಿಕರ ಯಾವುದೇ ಫೋಟೋಗಳು ಅಥವಾ ಮೃತದೇಹಗಳ ಫೋಟೋಗಳನ್ನು ಬಿಡುಗಡೆ ಮಾಡಿಲ್ಲ. ಪ್ರಾಣ ಕಳೆದುಕೊಂಡವರೆಲ್ಲರೂ ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗಗಳಿಗೆ ಸೇರಿದವರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯ ಸಹೋದರ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಶೇಖ್ ಮುಸ್ತಫಾ ಕಮಲ್ (Sheikh Mustafa Kamal) ಗಂಭೀರ ಆರೋಪ ಮಾಡಿದ್ದಾರೆ.

2016ರ ಉರಿ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಎರಡನ್ನೂ ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಶೇಖ್ ಮುಸ್ತಫಾ ಕಮಲ್ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವೇ ಈ ದಾಳಿಗಳನ್ನು ಪ್ಲಾನ್ ಮಾಡಿತ್ತು ಎಂಬುದು ಈಗ ಖಚಿತವಾಗಿದೆ. ನಾವು ಅವರ ಫೋಟೋಗಳು ಮತ್ತು ದೇಹಗಳನ್ನು ನೋಡಿಲ್ಲ. ಆ 30-40 ಸೈನಿಕರು ಎಲ್ಲರೂ ಎಸ್‌ಸಿಗಳು ಎಂಬುದು ಸ್ಪಷ್ಟವಾಗಿದೆ ಎಂದು ಕಮಲ್ ಹೇಳಿದ್ದಾರೆ.

ಇದನ್ನೂ ಓದಿ: Breaking News ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿ; ಓರ್ವ ಪೊಲೀಸ್ ಹುತಾತ್ಮ, ಯೋಧನಿಗೆ ಗಾಯ

ಭಾರತವು 2016 ಮತ್ತು 2019ರ ದಶಕದಲ್ಲಿ 2 ಭೀಕರ ಭಯೋತ್ಪಾದಕ ದಾಳಿಗಳನ್ನು ಕಂಡಿದೆ. 2016ರ ಸೆಪ್ಟೆಂಬರ್ 18ರಂದು ಕಾಶ್ಮೀರದ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಶಸ್ತ್ರಸಜ್ಜಿತ ಉಗ್ರಗಾಮಿಗಳು ದಾಳಿ ಮಾಡಿ 17 ಸೈನಿಕರನ್ನು ಕೊಂದಿದ್ದರು. 2019ರ ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ಜೈಶ್ ಉಗ್ರಗಾಮಿಗಳು ದಾಳಿ ನಡೆಸಿ 44 ಯೋಧರನ್ನು ಕೊಂದಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Mon, 16 January 23