ಮಹಾರಾಷ್ಟ್ರದಲ್ಲಿ ಇನ್ನೂ ಮುಗಿದಿಲ್ಲ ಆಟ: ಪಿಕ್ಚರ್​ ಅಭೀ ಬಾಕಿ ಹೈ!

|

Updated on: Nov 23, 2019 | 11:26 AM

ಮುಂಬೈ: ನಿನ್ನೆ ರಾತ್ರಿ ಬಿಜೆಪಿ ಹೈಕಮಾಂಡ್​ ನಡೆಸಿರುವ ಸರ್ಜಿಕಲ್​ ಸ್ಟ್ರೈಕ್​ ನಿಂದ ಎನ್​ಸಿಪಿ- ಶಿವಸೇನೆ ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದಿದೆ. ಈ ಮಧ್ಯೆ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ದೇವೇಂದ್ರ ಫಡ್ನವೀಸ್ ಅವ್ರು ಎನ್‌ಸಿಪಿ ಶಾಸಕರ ಬೆಂಬಲವಿರುವ ಸಹಿಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ. ಶರದ್ ಪವಾರ್​ ಫ್ಯಾಮಿಲಿ, ಪಕ್ಷ ಇಬ್ಭಾಗ, ಶಾಸಕರ ಉಚ್ಛಾಟನೆಯಾದ್ರೆ ಮುಂದೇನು? ಆದ್ರೆ ಅತ್ತ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಕೆಂಡಾಮಂಡಲಗೊಂಡಿದ್ದಾರೆ. ಹೊಸ ಸರ್ಕಾರಕ್ಕೆ ಸುತರಾಂ ಸಮ್ಮತಿಯಿಲ್ಲ ಎಂದು ಕಿಡಿಕಾರಿದ್ದಾರೆ. ಜೊತೆಗೆ, ಶಿವಸೇನೆ ಮತ್ತು ಕಾಂಗ್ರೆಸ್​ ಜೊತೆಗೂಡಿ ಸರ್ಕಾರ […]

ಮಹಾರಾಷ್ಟ್ರದಲ್ಲಿ ಇನ್ನೂ ಮುಗಿದಿಲ್ಲ ಆಟ: ಪಿಕ್ಚರ್​ ಅಭೀ ಬಾಕಿ ಹೈ!
ಶರದ್ ಪವಾರ್ (ಸಂಗ್ರಹ ಚಿತ್ರ)
Follow us on

ಮುಂಬೈ: ನಿನ್ನೆ ರಾತ್ರಿ ಬಿಜೆಪಿ ಹೈಕಮಾಂಡ್​ ನಡೆಸಿರುವ ಸರ್ಜಿಕಲ್​ ಸ್ಟ್ರೈಕ್​ ನಿಂದ ಎನ್​ಸಿಪಿ- ಶಿವಸೇನೆ ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದಿದೆ. ಈ ಮಧ್ಯೆ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ದೇವೇಂದ್ರ ಫಡ್ನವೀಸ್ ಅವ್ರು ಎನ್‌ಸಿಪಿ ಶಾಸಕರ ಬೆಂಬಲವಿರುವ ಸಹಿಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ.

ಶರದ್ ಪವಾರ್​ ಫ್ಯಾಮಿಲಿ, ಪಕ್ಷ ಇಬ್ಭಾಗ, ಶಾಸಕರ ಉಚ್ಛಾಟನೆಯಾದ್ರೆ ಮುಂದೇನು?
ಆದ್ರೆ ಅತ್ತ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಕೆಂಡಾಮಂಡಲಗೊಂಡಿದ್ದಾರೆ. ಹೊಸ ಸರ್ಕಾರಕ್ಕೆ ಸುತರಾಂ ಸಮ್ಮತಿಯಿಲ್ಲ ಎಂದು ಕಿಡಿಕಾರಿದ್ದಾರೆ. ಜೊತೆಗೆ, ಶಿವಸೇನೆ ಮತ್ತು ಕಾಂಗ್ರೆಸ್​ ಜೊತೆಗೂಡಿ ಸರ್ಕಾರ ರಚಿಸುವ ಈ ಹಿಂದಿನ ತೀರ್ಮಾನಕ್ಕೆ ವಿರುದ್ಧವಾಗಿ ಎನ್‌ಸಿಪಿ ಶಾಸಕರೇನಾದ್ರೂ ಬಿಜೆಪಿಗೆ ಬೆಂಬಲ ನೀಡಿದರೆ ಅಂತಹವರನ್ನು ಪಕ್ಷದಿಂದ ಉಚ್ಛಾಟಿಸುವ ಅಸ್ತ್ರ ಝಳಪಿಸಿದ್ದಾರೆ, ಶರದ್ ಪವಾರ್‌.

ಹಾಗಾಗಿ ಇಂದು ಸಂಜೆ 4.30ಕ್ಕೆ ಎನ್‌ಸಿಪಿ ಶಾಸಕರ ತುರ್ತು ಸಭೆ ಕರೆದಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯ ನಂತರ ಇಂದು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅಜಿತ್ ಪವಾರ್‌ ಅವರನ್ನ ಉಚ್ಚಾಟನೆ ಮಾಡುವ ಸಾಧ್ಯತೆಯಿದೆ.

ಅದಕ್ಕೂ ಮೊದಲು ಇನ್ನೇನು ಕೆಲವೇ ಕ್ಷಣಗಳಲ್ಲಿ ಶರದ್ ಪವಾರ್‌ ಮತ್ತು ಶಿವ ಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅದರಲ್ಲಿ ಪಕ್ಷದ ನಿಲುವುಗಳನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ. ಇದೇ ವೇಳೆ, ಕಾಂಗ್ರೆಸ್​ ಸಹ ತುರ್ತು ಸಭೆ ಕರೆದಿದ್ದು, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್​ ಅವರನ್ನು ಸಭೆಯಲ್ಲಿ ಹಾಜರಿರುವಂತೆ ಸೂಚಿಸಿದೆ.