ವಿದ್ಯಾರ್ಥಿಯ ಬದಲು ಬೇರೊಬ್ಬರು ನೀಟ್ ಪರೀಕ್ಷೆ ಬರೆದು ಸೀಟು ಗಿಟ್ಟಿಸುವ ದಂಧೆ; ಒಂದು ಸೀಟ್ ಪಡೆಯಲು ₹20 ಲಕ್ಷ: ಸಿಬಿಐ

NEET ವಿದ್ಯಾರ್ಥಿಗಳ ಸೋಗಿನಲ್ಲಿ ಪರಿಣಿತರು ಬಂದು ಪರೀಕ್ಷೆ ಬರೆದು ಸೀಟುಗಿಟ್ಟಿಸಿಕೊಳ್ಳುವ ದೊಡ್ಡ ಪ್ರಮಾಣದ ದಂಧೆ ಇದಾಗಿದೆ. ಒಂದು ಸೀಟಿನ ಮೌಲ್ಯ ₹20 ಲಕ್ಷ, ಇದರಲ್ಲಿ ವಿದ್ಯಾರ್ಥಿ ಬದಲು ಪರೀಕ್ಷೆ ಬರೆಯುವ ವ್ಯಕ್ತಿಗೆ ₹ 5 ಲಕ್ಷ

ವಿದ್ಯಾರ್ಥಿಯ ಬದಲು ಬೇರೊಬ್ಬರು ನೀಟ್ ಪರೀಕ್ಷೆ ಬರೆದು ಸೀಟು ಗಿಟ್ಟಿಸುವ ದಂಧೆ; ಒಂದು ಸೀಟ್ ಪಡೆಯಲು ₹20 ಲಕ್ಷ: ಸಿಬಿಐ
ಪ್ರಾತಿನಿಧಿಕ ಚಿತ್ರ
Edited By:

Updated on: Jul 19, 2022 | 8:52 PM

ದೆಹಲಿ: ವೈದ್ಯಕೀಯ ಕೋರ್ಸ್‌ಗಳಲ್ಲಿ (medical course) ಸೀಟುಗಳನ್ನು ನೀಡುವ ದಂಧೆಯನ್ನು ಸೋಮವಾರ ಕೇಂದ್ರೀಯ ತನಿಖಾ ದಳ (CBI) ಪತ್ತೆ ಮಾಡಿದ್ದು, ಎಂಟು ಜನರನ್ನು ಬಂಧಿಸಿದೆ. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣದಾದ್ಯಂತ ಈ ದಂಧೆ ನಡೆಯುತ್ತಿದ್ದು, ಈ ಕಾರ್ಯಾಚರಣೆ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ “ಮುನ್ನಾಭಾಯಿ MBBS” ನಲ್ಲಿ ತೋರಿಸಿದ ರೀತಿಯಲ್ಲೇ ಇದೆ. ವಿದ್ಯಾರ್ಥಿಗಳ ಸೋಗಿನಲ್ಲಿ ಪರಿಣಿತರು ಬಂದು ಪರೀಕ್ಷೆ ಬರೆದು ಸೀಟುಗಿಟ್ಟಿಸಿಕೊಳ್ಳುವ ದೊಡ್ಡ ಪ್ರಮಾಣದ ದಂಧೆ ಇದಾಗಿದೆ. ಒಂದು ಸೀಟಿನ ಮೌಲ್ಯ ₹20 ಲಕ್ಷ, ಇದರಲ್ಲಿ ವಿದ್ಯಾರ್ಥಿ ಬದಲು ಪರೀಕ್ಷೆ ಬರೆಯುವ ವ್ಯಕ್ತಿಗೆ ₹ 5 ಲಕ್ಷ ನೀಡಲಾಗುತ್ತದೆ. ಈ ವ್ಯಕ್ತಿ ಪರೀಕ್ಷೆಯಲ್ಲಿ ಹಾಜರಾಗಿ ನೀಟ್ ಪರೀಕ್ಷೆಗೆ ಉತ್ತರವನ್ನು ಬರೆಯುತ್ತಾನೆ ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಇನ್ನುಳಿದ ಹಣವನ್ನು ಮಧ್ಯವರ್ತಿ ಮತ್ತು ಇತರರು ಹಂಚಿಕೊಳ್ಳುತ್ತಾರೆ.  ಸೋಮವಾರ ಸಿಬಿಐ ಎಂಟು ಮಂದಿಯನ್ನು ಬಂಧಿಸಿದ್ದು ಈ ಪೈಕಿ ಆರು ಮಂದಿ ವಿದ್ಯಾರ್ಥಿಗಳ ಬದಲಿಗೆ ಪರೀಕ್ಷೆಗೆ ಹಾಜರಾಗುವವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಸ್ಟರ್ ಮೈಂಡ್ ಸಫ್ದರ್‌ಜಂಗ್‌ನ ಸುಶೀಲ್ ರಂಜನ್, ಅವರು “ಪೇಪರ್ ಸಾಲ್ವರ್‌ಗಳನ್ನು” ನಿಯೋಜಿಸಿದ್ದು, ಅದಕ್ಕಾಗಿ ಹಣ ಸ್ವೀಕರಿಸಿದ್ದಾರೆ. ಪ್ರಕರಣದಲ್ಲಿ 11 ಮಂದಿಯನ್ನು ಹೆಸರಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ.

ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು, ಸಿಬಿಐ ಈಗ ಅಭ್ಯರ್ಥಿಗಳೊಂದಿಗೆ ಮಾತನಾಡುತ್ತಿದೆ. ಇದರಲ್ಲಿ ಕೋಚಿಂಗ್ ಸಂಸ್ಥೆಗಳ ಪಾತ್ರವೂ ಪ್ರಶ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಚೀಟಿಂಗ್ ತಡೆಯುವುದಕ್ಕಾಗಿ ಅಧಿಕಾರಿಗಳು ನೀಟ್ ಪರೀಕ್ಷೆಯಲ್ಲಿನ ಭದ್ರತಾ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಪರೀಕ್ಷಾ ಹಾಲ್‌ನಲ್ಲಿ ವ್ಯಾಲೆಟ್‌ಗಳು, ಗ್ಲೌಸ್, ಬೆಲ್ಟ್‌, ಕ್ಯಾಪ್‌, ಆಭರಣ, ಶೂ ಮತ್ತು ಹೀಲ್ಸ್ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಲೇಖನ ಸಾಮಗ್ರಿಗಳನ್ನು ಕೊಂಡೊಯ್ಯಲು  ಅನುಮತಿಸಲಾಗುವುದಿಲ್ಲ.

ಇದನ್ನೂ ಓದಿ
Rishi Sunak: ಬ್ರಿಟನ್ ಪ್ರಧಾನಿ ರೇಸ್​ನಲ್ಲಿ ಅಂತಿಮ ಸುತ್ತಿನಲ್ಲಿ ರಿಷಿ ಸುನಕ್​ಗೆ 118 ಶಾಸಕರ ಬೆಂಬಲ
NEET 2022: ನೀಟ್ ಪರೀಕ್ಷೆ ಬರೆಯುವ ಯುವತಿಯರಿಗೆ ಒಳಉಡುಪು ತೆಗೆಯಲು ಒತ್ತಾಯ; ಕೇರಳದಲ್ಲಿ ಕೇಸ್ ದಾಖಲು
NEET 2022: ಹಿಜಾಬ್ ಧರಿಸಿದ್ದಕ್ಕೆ ನೀಟ್ ಪರೀಕ್ಷೆ ವೇಳೆ ಹಲವೆಡೆ ತೊಂದರೆ ಅನುಭವಿಸಿದ ಮುಸ್ಲಿಂ ಯುವತಿಯರು

ಆದರೆ ಈ ದಂಧೆ ನೀಟ್ ಐಡಿ ಕಾರ್ಡ್ ಗಳಲ್ಲಿರುವ ಫೋಟೊವನ್ನೇ ಬದಲಿಸಿ ಪರೀಕ್ಷೆ ಹಾಲ್ ಗೆ ವಿದ್ಯಾರ್ಥಿ ಬದಲು ಬೇರೊಬ್ಬರು ಪ್ರವೇಶಿಸುವಂತೆ ಮಾಡುತ್ತದೆ. ಆರೋಪಿಯು ಅಭ್ಯರ್ಥಿಯ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆದು ತಾನು ಬಯಸುವ ಪರೀಕ್ಷಾ ಕೇಂದ್ರವನ್ನು ಪಡೆದುಕೊಳ್ಳತ್ತಾನೆ.

ನೀಟ್ ಪದವಿ ಪರೀಕ್ಷೆ ಜುಲೈ 17ರಂದು ನಡೆದಿದ್ದು ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಗಳಿಗೆ ಪ್ರವೇಶ ಗಿಟ್ಟಿಸಲು ಈ ಪರೀಕ್ಷೆ ಪಾಸಾಗಬೇಕಿದೆ. ಆಯುರ್ವೇದ, ಸಿದ್ದ, ಯುನಾನಿ, ಹೋಮಿಯೋಪಥಿಕ್ ಮೆಡಿಸಿಲ್ ಮತ್ತು ನರ್ಸಿಂಗ್ ಕೋರ್ಸ್ ಪ್ರವೇಶ ಪರೀಕ್ಷೆಯೂ ಇದಾಗಿದೆ.

Published On - 8:26 pm, Tue, 19 July 22