ದೆಹಲಿ: ಏಪ್ರಿಲ್ 18ರಂದು ನಡೆಯಬೇಕಿದ್ದ ವೈದ್ಯಕೀಯ ಸ್ನಾತಕೋತ್ತರ ಪದವಿಯ ಅರ್ಹತಾ ಪರೀಕ್ಷೆ NEET 2021ನ್ನು ಮುಂದೂಡಲಾಗಿದೆ. ದೇಶದಲ್ಲಿ ಕೊರೊನಾ ಸೋಂಕಿನ ಹೆಚ್ಚಳದಿಂದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರೀಕ್ಷೆ ನಡೆಯಲಿರುವ ಮುಂದಿನ ದಿನಾಂಕವನ್ನು ತಿಳಿಸಲಾಗಿಲ್ಲ. ನೀಟ್ 2021ನ್ನು ಮುಂದೂಡಿರುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹಿತರಕ್ಷಣೆಗೋಸ್ಕರವೇ ನೀಟ್ 2021ರ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
In light of the surge in #COVID19 cases,GoI has decided to postpone #NEETPG2021 exam which was earlier scheduled to be held on Apr 18
Next date to be decided laterDecision has been taken keeping wellbeing of our young medical students in mind.@PMOIndia @MoHFW_INDIA #NEETPG
— Dr Harsh Vardhan (@drharshvardhan) April 15, 2021
Published On - 7:27 pm, Thu, 15 April 21