
ನವದೆಹಲಿ, ನವೆಂಬರ್ 13: ಗ್ರಾಹಕರು ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಎಫ್‌ಎಸ್‌ಎಸ್‌ಎಐ (FSSAI) ಹೊಸ ಏಕರೂಪದ ಗುರುತಿನ ಲೋಗೋವನ್ನು ಪರಿಚಯಿಸಿದೆ. ಈ ಹೊಸ ಲೋಗೋವು ನೀಲಿ ಬಣ್ಣದ ಚೌಕಾಕಾರದ ಹಿನ್ನೆಲೆಯಲ್ಲಿ ಬಿಳಿ ಬಣ್ಣದ ಹನಿ (White droplet on a blue square background) ವಿನ್ಯಾಸವನ್ನು ಹೊಂದಿದೆ ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ.
‘ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ (ಲೇಬಲಿಂಗ್ ಮತ್ತು ಡಿಸ್ಪ್ಲೇ) ಎರಡನೇ ತಿದ್ದುಪಡಿ ನಿಯಮಗಳು, 2026’ ರ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಎಲ್ಲಾ ರೀತಿಯ ಹಾಲು, ಹಾಲಿನ ಉತ್ಪನ್ನಗಳು, ಮೊಸರು, ಪನ್ನೀರ್ ಹಾಗೂ ಇತರೆ ಡೈರಿ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಈ ಲೋಗೋ ಮುದ್ರಿಸುವುದು 2028ರ ಜುಲೈ 1ರಿಂದ ಕಡ್ಡಾಯವಾಗಲಿದೆ. ತಯಾರಕರಿಗೆ ತಮ್ಮ ಪ್ಯಾಕೇಜಿಂಗ್ ಬದಲಾಯಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ.
ವಿವಿಧ ಉತ್ಪನ್ನಗಳ ಮಧ್ಯೆ ಡೈರಿ ಉತ್ಪನ್ನಗಳನ್ನು ಗುರುತಿಸಲು ಈ ಲೋಗೊ ನೆರವಾಗುತ್ತದೆ. ವಿವಿಧ ಬ್ರ್ಯಾಂಡ್‌ಗಳ ನಡುವೆ ಡೈರಿ ಉತ್ಪನ್ನಗಳ ಗುಣಮಟ್ಟ ಹಾಗೂ ನಿಯಂತ್ರಕ ಗುರುತನ್ನು ಗ್ರಾಹಕರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಪ್ಯಾಕೆಟ್‌ಗಳ ಗಾತ್ರಕ್ಕೆ ಅನುಗುಣವಾಗಿ ಲೋಗೋದ ಕನಿಷ್ಠ ಅಳತೆಗಳನ್ನು ಪ್ರಾಧಿಕಾರವು ನಿಗದಿಪಡಿಸಿದೆ. ಉದಾಹರಣೆಗೆ ಪ್ಯಾಕೆಟ್ ಗಾತ್ರದ ಆಧಾರದ ಮೇಲೆ 6 ಮಿಮೀ ನಿಂದ 16 ಮಿಮೀ ವರೆಗೆ ಲೋಗೋ ಗಾತ್ರ ಇರುತ್ತದೆ.
ಇದನ್ನೂ ಓದಿ: ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳು ಉಳಿವಿಗಾಗಿ ಹೆಣಗಾಡುತ್ತಿರುವುದೇಕೆ? ಪ್ರಾದೇಶಿಕ ವಾಯುಯಾನದ ಸವಾಲುಗಳು
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ