AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳು ಉಳಿವಿಗಾಗಿ ಹೆಣಗಾಡುತ್ತಿರುವುದೇಕೆ? ಪ್ರಾದೇಶಿಕ ವಾಯುಯಾನದ ಸವಾಲುಗಳು

ಉಡಾನ್ ಯೋಜನೆಯಲ್ಲಿ ಬಹಳ ಉತ್ಸಾಹದಿಂದ ಗರಿಗೆದರಿದ ಪ್ರಾದೇಶಿಕ ವೈಮಾನಿಕ ಕ್ಷೇತ್ರ ಈಗ ಅಸ್ತಿತ್ವಕ್ಕೆ ತಡಕಾಡುತ್ತಿದೆ. ದೇಶಾದ್ಯಂತ 26 ಪ್ರಾದೇಶಿಕ ಏರ್ಪೋರ್ಟ್​ಗಳು ವಿಮಾನ ಸಂಚಾರ ಇಲ್ಲದೇ ಕೈಕಟ್ಟಿ ಕೂತಿವೆ. ಸರ್ಕಾರಿ ಸಬ್ಸಿಡಿಗಳು ಮುಕ್ತಾಯಗೊಂಡ ಬಳಿಕ ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳು ಎದುರಿಸುತ್ತಿರುವ ಉಳಿವಿನ ಸಂಘರ್ಷದ ಕುರಿತ ವರದಿ ಇಲ್ಲಿದೆ.

ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳು ಉಳಿವಿಗಾಗಿ ಹೆಣಗಾಡುತ್ತಿರುವುದೇಕೆ? ಪ್ರಾದೇಶಿಕ ವಾಯುಯಾನದ ಸವಾಲುಗಳು
ಮಹಾರಾಷ್ಟ್ರದ ಗೋಂಡಿಯಾದಲ್ಲಿರುವ ಬಿರ್ಸಿ ಏರ್​ಪೋರ್ಟ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2026 | 2:28 PM

Share

ಬೆಂಗಳೂರು, ನವೆಂಬರ್ 13: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದ ಉಡಾನ್ ಯೋಜನೆಯಿಂದ ಸಣ್ಣ ಸಣ್ಣ ಪಟ್ಟಣಗಳಿಗೆ ವೈಮಾನಿಕ ಸಂಪರ್ಕ ಹೆಚ್ಚಬಹುದು ಎನ್ನುವ ನಿರೀಕ್ಷೆ ವಿಫಲಗೊಳ್ಳುತ್ತಿರುವಂತೆ ತೋರುತ್ತಿದೆ. ಕೆಲ ಮಾರ್ಗಗಳಲ್ಲಿ ಫ್ಲೈಟ್​ಗಳೇ ನಿಂತು ಹೋಗಿವೆ. ಎರಡು ವರ್ಷದ ಹಿಂದೆ ಸಾಕಷ್ಟು ವಿಮಾನಗಳು ಮತ್ತು ಪ್ರಯಾಣಿಕರನ್ನು ಕಾಣುತ್ತಿದ್ದ ಏರ್​ಪೋರ್ಟ್​ಗಳು ಈಗ ಬಹುತೇಕ ಬಣಗುಡುತ್ತಿವೆ. ಕರ್ನಾಟಕದ ಶಿವಮೊಗ್ಗ, ಕಲಬುರ್ಗಿ ವಿಮಾನ ನಿಲ್ದಾಣಗಳು ಸೇರಿದಂತೆ ದೇಶದ ಕೆಲ ಏರ್​ಪೋರ್ಟ್​ಗಳು ಮುಚ್ಚಿ ಹೋಗುವ ಪರಿಸ್ಥಿತಿ ಎದುರಾಗಿದೆ.

ಸರ್ಕಾರದಿಂದ ಸಬ್ಸಿಡಿ ಸಿಗುವವರೆಗೂ ಮಾತ್ರ ಏರ್​ಲೈನ್​ಗಳು ಚಾಲನೆಯಲ್ಲಿ ಇರುವಂತಹ ಸ್ಥಿತಿ ಇದೆ. ಸಂಸತ್​ನಲ್ಲಿ ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ ಉಡಾನ್ ಯೋಜನೆಯಲ್ಲಿ ಆರಂಭಗೊಂಡಿದ್ದ ಏರ್​ಪೋರ್ಟ್​ಗಳ ಪೈಕಿ 26 ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ನಿಂತಿದೆ. ಅದರಲ್ಲಿ ಕಲಬುರ್ಗಿ, ಶಿಮ್ಲಾ ಇತ್ಯಾದಿ ಪ್ರಮುಖ ಪಟ್ಟಣಗಳೂ ಒಳಗೊಂಡಿವೆ.

ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಸ್ಟಾರ್​ಏರ್ ಮಾತ್ರವೇ ಉಳಿದಿರುವುದು…

ಕರ್ನಾಟಕದ ಶಿವಮೊಗ್ಗ ವಿಮಾನ ನಿಲ್ದಾಣವು ಪ್ರಮುಖ ಸವಾಲನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ (UDAN) ಸಿಕ್ಕಿದ್ದ ಸಬ್ಸಿಡಿ (Viability Gap Funding) ಅವಧಿಯು ಮುಗಿಯುತ್ತಿರುವುದು ವಿಮಾನಯಾನ ಸೇವೆಗಳ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.

ಇದನ್ನೂ ಓದಿ: ‘2030ರ ವೇಳೆಗೆ 7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ’: ಸಿಎಂ ಡಿಕೆ ಶಿವಕುಮಾರ್​​

ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಂತಹ ಸಂಸ್ಥೆಗಳು ಈಗಾಗಲೇ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದು, ಪ್ರಸ್ತುತ ಸ್ಟಾರ್ ಏರ್ (Star Air) ಮಾತ್ರ ಏಕೈಕ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದೆ. ವಿಜಿಎಫ್ ಫಂಡಿಂಗ್ ನಿಂತರೆ ಇದು ವಿಮಾನ ಹಾರಾಟ ಮುಂದುವರಿಸುತ್ತದಾ ಎನ್ನುವುದು ಯಕ್ಷ ಪ್ರಶ್ನೆ.

ಸಬ್ಸಿಡಿ ನಿಂತರೆ ವಿಮಾನ ಹಾರಾಟ ನಿಲ್ಲುವ ಭೀತಿ

ಪಂಜಾಬ್‌ನ ಬಟಿಂಡಾ ವಿಮಾನ ನಿಲ್ದಾಣದಲ್ಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ಮೂರು ವರ್ಷಗಳ ಒಪ್ಪಂದ ಮುಗಿದ ಬಳಿಕ ಅಲಯನ್ಸ್ ಏರ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಒಮ್ಮೆ ಸರ್ಕಾರಿ ಧನಸಹಾಯ ಅಥವಾ ಸಬ್ಸಿಡಿ ನಿಂತರೆ, ಆ ಮಾರ್ಗಗಳು ಆರ್ಥಿಕವಾಗಿ ಲಾಭದಾಯಕವಾಗದಿದ್ದರೆ ವಿಮಾನಯಾನ ಸಂಸ್ಥೆಗಳು ಅಲ್ಲಿಂದ ನಿರ್ಗಮಿಸುವುದು ಸಾಮಾನ್ಯವಾಗಿದೆ.

ಕಲಬುರ್ಗಿಯಲ್ಲಿ ಮೂಲಸೌಕರ್ಯವಿದ್ದರೂ ಹೆಚ್ಚದ ಸಂಪರ್ಕ

ಕಲಬುರಗಿ ವಿಮಾನ ನಿಲ್ದಾಣದ ಉದಾಹರಣೆಯಂತೆ, ಪ್ರಯಾಣಿಕರ ದಟ್ಟಣೆ ಹಾಗೂ ಆಕ್ಯುಪೆನ್ಸಿ ಉತ್ತಮವಾಗಿದ್ದರೂ ಸಹ ವಿಮಾನಯಾನ ಕಂಪನಿಗಳು ಹೆಚ್ಚಿನ ವಿಮಾನಗಳನ್ನು ಅಥವಾ ಹೊಸ ಮಾರ್ಗಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿವೆ. ಸಣ್ಣ ವಿಮಾನಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ಕೊರತೆಯೇ ಇದಕ್ಕೆ ಮುಖ್ಯ ಕಾರಣ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ

ಮಾರ್ಪಡಿಸಿದ ‘ಉಡಾನ್’ ನಿರೀಕ್ಷೆಗಳು

ಸರ್ಕಾರವು ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ಉತ್ತೇಜಿಸಲು 2026ರ ಮಾರ್ಚ್‌ನಲ್ಲಿ ‘ಮಾರ್ಪಡಿಸಿದ ಉಡಾನ್’ (Modified UDAN) ಯೋಜನೆಗೆ ಅನುಮೋದನೆ ನೀಡಿದ್ದು, ಸಬ್ಸಿಡಿ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ವಿಸ್ತರಿಸಲು ಚಿಂತಿಸಲಾಗಿದೆ. ಆದರೆ, ಶಾಶ್ವತವಾದ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಪ್ರಾದೇಶಿಕ ವಲಯಕ್ಕೆ ದೊಡ್ಡ ಸವಾಲಾಗಿ ಉಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ