ನವದೆಹಲಿ: ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ದೇಶದ ಬಡ ಜನರಿಗೆ ಹೊಸ ವರ್ಷದ ಉಡುಗೊರೆ(New year gift) ನೀಡಿದೆ. ದೇಶದ ಬಡ ಜನರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆ ಮುಂದುವರಿಸಲು ಇಂದು(ಡಿಸೆಂಬರ್ 23) ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದ ವರ್ಷಕ್ಕೆ 81.3 ಕೋಟಿ ಜನರು ಉಚಿತ ಆಹಾರಧಾನ್ಯ (free foodgrains) ಪಡೆಯಲಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81.3 ಕೋಟಿ ಬಡವರಿಗೆ ಒಂದು ವರ್ಷ ಉಚಿತವಾಗಿ ಪಡಿತರ ವಿತರಣೆ ವಿಸ್ತರಿಸಲು ಇಂದು(ಶುಕ್ರವಾರ) ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದು, ಮುಂದಿನ ವರ್ಷ ಅಂದ್ರೆ ಡಿಸೆಂಬರ್ 2023 ರವರೆಗೆ ವಿತರಿಸಲಾಗುತ್ತದೆ. ಇದಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ವೆಚ್ಚದ ಹೊರೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ.
ಇನ್ನು ಸಚಿವ ಸಂಪುಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರಧಾನ್ಯ ಸಿಗಲಿದೆ. ಅವರು ಡಿಸೆಂಬರ್ 2023 ರವರೆಗೆ ಆಹಾರ ಧಾನ್ಯಗಳನ್ನು ಪಡೆಯಲು ಒಂದು ರೂಪಾಯಿಯನ್ನು ಪಾವತಿಸಬೇಕಾಗಿಲ್ಲ. ಇದಕ್ಕಾಗಿ ಸರ್ಕಾರವು ವರ್ಷಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಎಂದು ಮಾಹಿತಿ ನೀಡಿದರು.
More than 80 crore people will now get free foodgrains under National Food Security Act. They will not have to pay a single rupee to get food grains til Dec 2023. Govt will spend around Rs 2 lakh crores per year on this: Union Minister Piyush Goyal pic.twitter.com/ze89jBIB6u
— ANI (@ANI) December 23, 2022
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:44 pm, Fri, 23 December 22