ನವದೆಹಲಿ: ಹಲವು ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಕುಲ್ವಿಂದರ್ಜಿತ್ ಸಿಂಗ್ ಅಲಿಯಾಸ್ ಖಾನ್‌ಪುರಿನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಬಂಧಿಸಿದೆ. 2019ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಈ ಕುಖ್ಯಾತ ಖಲಿಸ್ತಾನಿ ಭಯೋತ್ಪಾದಕ ಬ್ಯಾಂಕಾಕ್‌ನಿಂದ ದೆಹಲಿಗೆ ಬಂದಾಗ ಎನ್‌ಐಎ ಅಧಿಕಾರಿಗಳ ಬಲೆ ಬಿದ್ದಿದ್ದಾನೆ.
ಪಂಜಾಬ್‌ನಲ್ಲಿ ಹಲವು ಟಾರ್ಗೆಟ್ ಹತ್ಯೆಗಳ ಹಿಂದಿನ ಸಂಚುಕೋರನಾಗಿದ್ದ ಬಬ್ಬರ್ ಖಾಲ್ಸಾ ಎನ್ನುವ ಇಂಟರ್‌ನ್ಯಾಷನಲ್ ಸಂಘಟನೆಯ ಭಯೋತ್ಪಾದಕ ಖಲಿಸ್ತಾನಿಯ ಕುಲ್ವಿಂದರ್ಜಿತ್ ಸಿಂಗ್ ಅಲಿಯಾಸ್ ಖಾನ್‌ಪುರಿ, 2019ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.
ಆದ್ರೆ, ನವೆಂಬರ್ 18ರಂದು ಬ್ಯಾಂಕಾಕ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಇದನ್ನು ಈ ಹಿನ್ನೆಲೆಯಲ್ಲಿ ಕುಲ್ವಿಂದರ್ಜಿತ್ ಸಿಂಗ್ ಬರುವುದನ್ನೇ ಕಾಯುತ್ತಿದ್ದ ಎನ್‌ಐಎ ಅಧಿಕಾರಿಗಳು, ಕೊನೆಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಲೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಖಲಿಸ್ತಾನ್ ಲಿಬರೇಷನ್ ಫೋರ್ಸ್(ಕೆಎಲ್‌ಎಫ್), ಬಬ್ಬರ್ ಖಲ್ಸಾ ಇಂಟರ್‌ನ್ಯಾಷನಲ್(ಬಿಕೆಐ)ನಂತಹ ಭಯೋತ್ಪಾದಕ ಗುಂಪುಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.