Budget 2021 ಬಜೆಟ್​ ಸಿದ್ಧತೆಯಲ್ಲಿದ್ದಾರೆ ಮೇಡಂ ನಿರ್ಮಲಾ; ನಾಳೆ ಮೊದಲ ಹಂತದ ಪೂರ್ವಭಾವಿ ಸಮಾಲೋಚನೆ

| Updated By: guruganesh bhat

Updated on: Jan 30, 2021 | 1:05 PM

ಬಜೆಟ್​ಗೂ ಮೊದಲು ಪೂರ್ವಭಾವಿಯಾಗಿ ವಿವಿಧ ರೈತ ಸಂಘಟನೆಗಳು, ಅರ್ಥಶಾಸ್ತ್ರಜ್ಞರು, ನಾಗರಿಕ ವರ್ಗ ಮತ್ತು ಕೈಗಾರಿಕಾ ಸಂಸ್ಥೆಗಳು ಸೇರಿ, ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸುವುದು ಒಂದು ಸಾಮಾನ್ಯ ಪದ್ಧತಿ.

Budget 2021 ಬಜೆಟ್​ ಸಿದ್ಧತೆಯಲ್ಲಿದ್ದಾರೆ ಮೇಡಂ ನಿರ್ಮಲಾ; ನಾಳೆ ಮೊದಲ ಹಂತದ ಪೂರ್ವಭಾವಿ ಸಮಾಲೋಚನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
Follow us on

ದೆಹಲಿ: 2021-22ರ ಆರ್ಥಿಕ ವರ್ಷದ ಬಜೆಟ್​ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ಮಾಡುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನಾಳೆ (ಡಿ.14) ಉನ್ನತ ಕೈಗಾರಿಕೋದ್ಯಮಿಗಳ ಜತೆ ಮೊದಲ ಹಂತದ ಬಜೆಟ್ ಪೂರ್ವಭಾವಿ ಸಮಾಲೋಚನೆ ನಡೆಸಲಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್​ 2021ರ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದು, ಇದು ಅವರ ಎರಡನೇ ಆಯವ್ಯಯ ಮಂಡನೆ. ಹಣಕಾಸು ಸಚಿವರು ಬಜೆಟ್​ಗೂ ಮೊದಲು ಪೂರ್ವಭಾವಿಯಾಗಿ ವಿವಿಧ ರೈತ ಸಂಘಟನೆಗಳು, ಅರ್ಥಶಾಸ್ತ್ರಜ್ಞರು, ನಾಗರಿಕ ವರ್ಗ ಮತ್ತು ಕೈಗಾರಿಕಾ ಸಂಸ್ಥೆಗಳು ಸೇರಿ, ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸುವುದು ಒಂದು ಸಾಮಾನ್ಯ ಪದ್ಧತಿಯಾಗಿದ್ದು, ನಾಳೆ ನಿರ್ಮಲಾ ಸೀತಾರಾಮನ್​ ದೆಹಲಿಯಲ್ಲಿ ವರ್ಚ್ಯುವಲ್ ಆಗಿ ಚರ್ಚೆ ನಡೆಸಲಿದ್ದಾರೆ ಎಂದು ವಿತ್ತೀಯ ಇಲಾಖೆ ತಿಳಿಸಿದೆ.

ಪೂರ್ವಭಾವಿ ಸಮಾಲೋಚನೆಗಳ ನಂತರ ಹಣಕಾಸು ಸಚಿವರು ಕೊನೆಯದಾಗಿ ತೆರಿಗೆ ಪ್ರಸ್ತಾಪಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ. ಆದರೆ ಬಜೆಟ್​ ಅಂತಿಮಗೊಳ್ಳುವುದಕ್ಕೂ ಮೊದಲು ಈ ಪ್ರಸ್ತಾಪಗಳನ್ನು ಪ್ರಧಾನಿ ಜತೆ ಚರ್ಚಿಸಲಾಗುತ್ತದೆ.

ಫೋರ್ಬ್ಸ್ ಶಕ್ತಿಶಾಲಿ ಮಹಿಳಾ ಪಟ್ಟಿಯಲ್ಲಿ 41ನೇ ಸ್ಥಾನ ಪಡೆದ ನಿರ್ಮಲಾ ಸೀತಾರಾಮನ್!

Published On - 6:46 pm, Sun, 13 December 20