ಹೊಲಗಳನ್ನು ಸ್ಮಶಾನವಾಗಿಸುವ ಕಾನೂನು ಬೇಡ: ಸಂಜಯ್ ರಾವುತ್

ಅಮೆರಿಕಾದಂತಹ ಬಂಡವಾಳಶಾಹಿ ದೇಶವು ತಮ್ಮ ರೈತರ ಬಗ್ಗೆ ಗಮನ ಹರಿಸುತ್ತದೆ ಆದರೆ ಭಾರತೀಯ ಸರ್ಕಾರದ ಉದಾಸೀನತೆಗೆ ಕಾರಣವೇನು ಎಂದು ಅಂಕಣದಲ್ಲಿ ಪ್ರಶ್ನಿಸಿದ್ದಾರೆ.

ಹೊಲಗಳನ್ನು ಸ್ಮಶಾನವಾಗಿಸುವ ಕಾನೂನು ಬೇಡ: ಸಂಜಯ್ ರಾವುತ್
ಶಿವಸೇನೆ ಮುಖಂಡ ಸಂಜಯ್ ರಾವುತ್
sandhya thejappa

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 13, 2020 | 8:16 PM

ಮುಂಬೈ: ಶರದ್​ ಪವಾರ್ ಕೇಂದ್ರ ಕೃಷಿ ಸಚಿವರಾಗಿದ್ದ ಅವಧಿಯಲ್ಲಿ​ ರೈತರ ಹಿತಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದರು ಎಂದು ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.

ಯುಪಿಎ-2 ಸರ್ಕಾರದಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಗಳ ಮೇಲೆ ಒತ್ತಡ ಹೇರಿದ್ದರು ಎಂಬ ಬಿಜೆಪಿ ಆರೋಪನ್ನು ಶಿವಸೇನೆಯ ಮುಖವಾಗಿ ಸಾಮ್ನಾದ ತಮ್ಮ ಅಂಕಣ ರೋಖ್​ಥೋಕ್​ನಲ್ಲಿ ಪ್ರಸ್ತಾಪಿಸಿರುವ ಅವರು, ರೈತರ ಹಿತದೃಷ್ಟಿಯಿಂದ ಶರದ್​ ಪವಾರ್ ಅಂದಿನ ದಿನಗಳಲ್ಲಿ ಅಂಥ ನಿಲುವು ತಳೆದಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರವು ಹೊಸದಾಗಿ ಜಾರಿ ಮಾಡಿರುವ ಕೃಷಿ ಸುಧಾರಣಾ ಕಾನೂನುಗಳು ಹೊಲಗಳನ್ನು ಸ್ಮಶಾನಗಳಾಗಿ ಪರಿವರ್ತಿಸುತ್ತವೆ, ರೈತರ ದುರಂತ ಅಂತ್ಯಕ್ಕೆ ಕಾರಣವಾಗಲಿವೆ. ಕೃಷಿ ಕ್ಷೇತ್ರದಲ್ಲಿ ಕುಸಿತ ಕಂಡರೆ ದೇಶದ ಆರ್ಥಿಕತೆ ಕುಸಿದು ಕೆಟ್ಟ ಪರಿಣಾಮಕ್ಕೆ ಕಾರಣವಾಗುತ್ತದೆ. ಮಂತ್ರಿಗಳು ಬಂದು ಹೋಗುತ್ತಾರೆ ಆದರೆ ಹೊಲಗಳು ನಾಶವಾದರೆ ದೇಶವು ನರಳುತ್ತದೆ. ಚೀನಾದಂತಹ ಕಮ್ಯುನಿಸ್ಟ್ ದೇಶ ಮತ್ತು ಅಮೆರಿಕಾದಂತಹ ಬಂಡವಾಳಶಾಹಿ ದೇಶವು ತಮ್ಮ ರೈತರ ಬಗ್ಗೆ ಗಮನ ಹರಿಸುತ್ತದೆ ಆದರೆ ಭಾರತೀಯ ಸರ್ಕಾರದ ಉದಾಸೀನತೆಗೆ ಕಾರಣವೇನು ಎಂದು ಅಂಕಣದಲ್ಲಿ ಪ್ರಶ್ನಿಸಿದ್ದಾರೆ.

Delhi Chalo: ದೆಹಲಿ-ಜೈಪುರ ಹೆದ್ದಾರಿ ತಡೆಗೆ ರೈತರ ಸಿದ್ಧತೆ; ಪಂಜಾಬ್-ಹರ್ಯಾಣ ಗಡಿಯಲ್ಲಿ ಖಾಲಿಸ್ತಾನಿ ಕರಿನೆರಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada