ದೆಹಲಿಯಲ್ಲಿ 4 ದಿನಗಳಿಂದ ಕೊರೊನಾದಿಂದ ಒಬ್ಬರೂ ಮೃತಪಟ್ಟಿಲ್ಲ; 24 ಗಂಟೆಯಲ್ಲಿ 55 ಕೇಸ್​ ದಾಖಲು

| Updated By: Lakshmi Hegde

Updated on: Sep 04, 2021 | 5:51 PM

Covid 19: ದೆಹಲಿಯಲ್ಲಿ ಸದ್ಯ ಪಾಸಿಟಿವಿಟಿ ರೇಟ್​ ಶೇ.0.08ಗಳಷ್ಟಿದ್ದು, ಮಂಗಳವಾರ 28, ಬುಧವಾರ 36, ಗುರುವಾರ 39 ಮತ್ತು ಶುಕ್ರವಾರ 35 ಕೊರೊನಾ ಕೇಸ್​ಗಳು ದಾಖಲಾಗಿದ್ದವು.

ದೆಹಲಿಯಲ್ಲಿ 4 ದಿನಗಳಿಂದ ಕೊರೊನಾದಿಂದ ಒಬ್ಬರೂ ಮೃತಪಟ್ಟಿಲ್ಲ; 24 ಗಂಟೆಯಲ್ಲಿ 55 ಕೇಸ್​ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಕೊವಿಡ್​ 19 ಸೋಂಕಿ (Covid 19 Virus)ನಿಂದ ಒಬ್ಬರೂ ಮೃತಪಟ್ಟಿಲ್ಲ. ಈ ಬಗ್ಗೆ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕೊವಿಡ್​ 19 ವೈರಸ್​ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 25,082ರಲ್ಲೇ ನಿಂತಿದೆ. ಸತತ ನಾಲ್ಕು ದಿನಗಳಿಂದ ಸೋಂಕಿಗೆ ಯಾರೂ ಬಲಿಯಾಗಿಲ್ಲ ಎಂದು ಹೇಳಿದೆ. ಇನ್ನೂ ಒಂದು ಸಮಾಧಾನಕರ ಸಂಗತಿಯೆಂದರೆ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಕೇವಲ 55 ಹೊಸ ಕೊರೊನಾ ಕೇಸ್​ಗಳು ದಾಖಲಾಗಿದ್ದು, 63 ಮಂದಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಅಲ್ಲಿಗೆ ರಾಷ್ಟ್ರರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,37,929ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಸದ್ಯ ಪಾಸಿಟಿವಿಟಿ ರೇಟ್​ ಶೇ.0.08ಗಳಷ್ಟಿದ್ದು, ಮಂಗಳವಾರ 28, ಬುಧವಾರ 36, ಗುರುವಾರ 39 ಮತ್ತು ಶುಕ್ರವಾರ 35 ಕೊರೊನಾ ಕೇಸ್​ಗಳು ದಾಖಲಾಗಿದ್ದವು. ಆದರೆ ಒಂದೂ ಸಾವಿನ ವರದಿಯಾಗಿರಲಿಲ್ಲ. ಇಷ್ಟು ದಿನಕ್ಕೆ ಹೋಲಿಸಿದರೆ ಇಂದು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಾಗೇ, 80ಕ್ಕೂ ಹೆಚ್ಚು ಸೋಂಕಿತರು ಮನೆಯಲ್ಲೇ ಐಸೋಲೇಟ್​ ಆಗಿದ್ದಾರೆ. ಅಲ್ಲೀಗ ಚೇತರಿಕೆ ಪ್ರಮಾಣ ಶೇ. 98.23ರಷ್ಟಿದೆ.

ಕೊವಿಡ್​19 ಸಂಭವನೀಯ ಮೂರನೇ ಅಲೆ ವಿರುದ್ಧ ಯುದ್ಧ ಶುರುಮಾಡಿದ್ದಾಗಿ ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್​ ಹೇಳಿದ್ದರು.  ಅದರಲ್ಲಿ ಯಶಸ್ವಿ ಕೂಡ ಆಗುತ್ತಿದೆ. ಅಲ್ಲಿ ಈಗಾಗಲೇ 9-12 ನೇ ತರಗತಿವರೆಗೆ ಶಾಲೆಗಳೂ ತೆರೆದಿವೆ.   ಮಕ್ಕಳ ಸುರಕ್ಷತೆ ಮತ್ತು ಆರೋಗ್ಯದ ವಿಚಾರದಲ್ಲಿ ಎಲ್ಲರೀತಿಯ ಅಗತ್ಯ ಕ್ರಮಗಳನ್ನೂ ಕೈಗೊಳ್ಳುವುದಾಗಿ ದೆಹಲಿ ಸರ್ಕಾರ ಭರವಸೆ ನೀಡಿದೆ.

ಇದನ್ನೂ ಓದಿ: Crop Relief Fund: ಬೆಳೆಹಾನಿಯಾದ 45,586 ರೈತರಿಗೆ 38.64 ಕೋಟಿ ಬೆಳೆ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್ ಘೋಷಣೆ

ಬೆಂಗಳೂರಿನ ಜನ ಎಷ್ಟು ಭಾಷೆ ಮಾತಾಡುತ್ತಾರೆ ಗೊತ್ತಾ?; ಭಾರತದಲ್ಲೇ ಅತಿ ಹೆಚ್ಚು ಭಾಷಿಗರಿರುವ ನಗರ ಬೆಂಗಳೂರು

(No Covid 19 Related Death For 4th Straight Day In Delhi)