ಹೈದರಾಬಾದ್: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಪಾರ್ಲು ಗ್ರಾಮದಲ್ಲಿ ತುಂಬು ಗರ್ಭಿಣಿಯೊಬ್ಬಳಿಗೆ ನಿನ್ನೆ ದಿಢೀರ್ ಅಂತ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಮುಂದಾಗಿದ್ದಾರೆ. ದುರದೃಷ್ಟ ಅಂದ್ರೆ ಊರಿಗೆ ಸರಿಯಾದ ರಸ್ತೆಯೇ ಇಲ್ಲ. ಹೀಗಾಗಿ, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸೇರಿ ಡೋಲಿ ತಯಾರಿಸಿದ್ದಾರೆ. ಬಳಿಕ ಅದರಲ್ಲಿ ಮಹಿಳೆಯನ್ನ ಕೂರಿಸಿ 8ರಿಂದ 10 ಕಿಲೋ ಮೀಟರ್ ನಡೆದುಕೊಂಡೇ ಸಾಗಿದ್ದಾರೆ. ಇಬ್ಬರು ಡೋಲಿಗೆ ಹೆಗಲು ಕೊಟ್ರೆ, ಒಂದಷ್ಟು ಜನ ಬಟ್ಟೆ ಸಾಮಗ್ರಿ ತೆಗೆದುಕೊಂಡು ಹಿಂದೆ ಬಂದಿದ್ದಾರೆ. ಮತ್ತೆ ಕೆಲವರು ಕಾಡಿನ ದಾರಿಯಲ್ಲಿ ಯಾವುದೇ ತೊಂದರೆಯಾಗದಂತೆ ಮಾರ್ಗ ಸರಿ ಮಾಡುತ್ತಾ ಸಾಗಿದ್ದಾರೆ.
ಮಾರ್ಗ ಮಧ್ಯೆಯೇ ಮುದ್ದಾದ ಮಗುವಿಗೆ ಜನ್ಮಕೊಟ್ಟ ತಾಯಿ:
ಹೌದು ತಗ್ಗು ಅಂಕು ಡೊಂಕಾದ ರಸ್ತೇಲಿ ಮಹಿಳೆಗೆ ಹೆರಿಗೆ ನೋವು ಜಾಸ್ತಿಯಾಗಿದೆ. ಌಂಬುಲೆನ್ಸ್ಗೆ ಫೋನ್ ಮಾಡಿದ್ರೂ, ಮಹಿಳೆಯಿದ್ದ ಸ್ಥಳಕ್ಕೆ ಌಂಬುಲೆನ್ಸ್ ಬರಲು ಸಾಧ್ಯವಾಗಿಲ್ಲ. ಕೊನೆಗೆ ಕಾಡಿನ ದಾರಿಯಲ್ಲೇ ಮಹಾತಾಯಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ನಲ್ಲಿ, ಅದೆಷ್ಟೇ ಸರ್ಕಾರ ಬಂದು ಹೋದ್ರೂ, ರಾಜಕಾರಣಿಗಳು ಉದ್ದುದ್ದ ಭಾಷಣ ಬೀಗಿದ್ರೂ ಗ್ರಾಮೀಣ ಪ್ರದೇಶದಲ್ಲಿ ಜನ ಇನ್ನೂ ನರಕದಲ್ಲೇ ದಿನ ದೂಡುತ್ತಿದ್ದಾರೆ.
Published On - 10:27 am, Thu, 2 January 20