5 ತಿಂಗಳ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ

ದೆಹಲಿ: ಜಮ್ಮು-ಕಾಶ್ಮೀರ. ಒಂದು ಕಾಲದಲ್ಲಿ ಕಲ್ಲು ತೂರಾಟ, ಪ್ರತಿಭಟನೆ, ಸಂಘರ್ಷಗಳಿಂದಲೇ ಸುದ್ದಿಯಾಗ್ತಿದ್ದ ಕಣಿವೆ ಈಗ ಶಾಂತವಾಗಿದೆ. ಪ್ರತ್ಯೇಕತಾವಾದಿಗಳ ಬಾಲ ಕಟ್ ಆಗಿದೆ. ಕಿಡಿಗೇಡಿಗಳ ಕಾಟ ಕಮ್ಮಿ ಆಗಿದೆ. ಇದಕ್ಕೆಲ್ಲಾ ಕಾರಣ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ್ದು. ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ: ಯೆಸ್, ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಾಜಿ ಸಿಎಂಗಳು ಸೇರಿ ಹಲವು ರಾಜಕೀಯ ಮುಖಂಡರನ್ನ ಗೃಹಬಂಧನದಲ್ಲಿ ಇಡಲಾಗಿತ್ತು. […]

5 ತಿಂಗಳ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ
ಸಾಂದರ್ಭಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on: Jan 02, 2020 | 7:11 AM

ದೆಹಲಿ: ಜಮ್ಮು-ಕಾಶ್ಮೀರ. ಒಂದು ಕಾಲದಲ್ಲಿ ಕಲ್ಲು ತೂರಾಟ, ಪ್ರತಿಭಟನೆ, ಸಂಘರ್ಷಗಳಿಂದಲೇ ಸುದ್ದಿಯಾಗ್ತಿದ್ದ ಕಣಿವೆ ಈಗ ಶಾಂತವಾಗಿದೆ. ಪ್ರತ್ಯೇಕತಾವಾದಿಗಳ ಬಾಲ ಕಟ್ ಆಗಿದೆ. ಕಿಡಿಗೇಡಿಗಳ ಕಾಟ ಕಮ್ಮಿ ಆಗಿದೆ. ಇದಕ್ಕೆಲ್ಲಾ ಕಾರಣ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ್ದು.

ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ: ಯೆಸ್, ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಾಜಿ ಸಿಎಂಗಳು ಸೇರಿ ಹಲವು ರಾಜಕೀಯ ಮುಖಂಡರನ್ನ ಗೃಹಬಂಧನದಲ್ಲಿ ಇಡಲಾಗಿತ್ತು. ಇಂಟರ್​ನೆಟ್​, ಎಸ್​ಎಂಎಸ್​ ಸೇವೆಗಳು ಸ್ಥಗಿತಗೊಂಡಿದ್ದವು.

ಇದೆಲ್ಲಾ ಆಗಿ ಬರೋಬ್ಬರಿ 5 ತಿಂಗಳ ಬಳಿಕ ಕಣಿವೆಯಲ್ಲೀಗ ಒಂದೊಂದೇ ಸೇವೆಗಳು ಪುನಾರಂಭಗೊಳ್ತಿವೆ. ಹೊಸ ವರ್ಷದ ಮೊದಲ ದಿನವಾದ ನಿನ್ನೆ ಎಸ್​ಎಂಎಸ್​ ಮತ್ತು ಇಂಟರ್​​ನೆಟ್ ಸರ್ವಿಸ್ ಮತ್ತೆ ಆರಂಭವಾಗಿದೆ. ಹೌಸ್ ಅರೆಸ್ಟ್​ನಲ್ಲಿದ್ದ ಕೆಲ ಮುಖಂಡರನ್ನ ಬಿಡುಗಡೆ ಮಾಡಲಾಗಿದೆ. ಆದ್ರೆ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಒಮರ್​ ಅಬ್ದುಲ್ಲಾಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸಧ್ಯದಲ್ಲೇ ಇವರೂ ಕೂಡ ಗೃಹಬಂಧನದಿಂದ ಮುಕ್ತವಾಗುವ ಸಾಧ್ಯತೆ ಇದೆ.

ಇನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್​ನ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇದ್ದ 33 ನಾನ್​ ಗೆಜೆಟೆಡ್​ ಹುದ್ದೆಗಳನ್ನ ಇಡೀ ಭಾರತೀಯರಿಗೆ ಮುಕ್ತಗೊಳಿಸಿ ಹೊರಡಿಸಿದ್ದ ನೇಮಕಾತಿ ಆದೇಶವನ್ನ ಹೈಕೋರ್ಟ್​ ಹಿಂಪಡೆದಿದೆ. ಡಿಸೆಂಬರ್ 26ರಂದು ಜಮ್ಮು-ಕಾಶ್ಮೀರ ಹೈಕೋರ್ಟ್ ಈ ಜಾಹೀರಾತು ಪ್ರಕಟಿಸಿತ್ತು. ಹೈಕೋರ್ಟ್ ನಡೆಗೆ ದೇಶದ ಜನ ಪ್ರಶಂಸೆ ವ್ಯಕ್ತಪಡಿಸಿದ್ರು. ಆದ್ರೀಗ ಇದ್ದಕ್ಕಿದ್ದಂತೆ ಅದನ್ನ ಹಿಂಪಡೆದುಕೊಂಡಿದೆ. ಒಟ್ನಲ್ಲಿ, ಅದೇನೇ ಇದ್ರೂ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಒಂದ್​ ರೀತಿ ಬಂಧನದಲ್ಲಿದ್ದ ಕಣಿವೆ ನಿಧಾನವಾಗಿ ಮುಕ್ತವಾಗ್ತಿದೆ. ಸ್ಥಗಿತಕೊಂಡಿದ್ದ ವಿವಿಧ ಸೇವೆಗಳು ಒಂದೊಂದಾಗಿ ಪುನಾರಂಭಗೊಳ್ಳುತ್ತಿವೆ.