ನೊಯ್ಡಾ: ತನ್ನ ಮನೆಯಲ್ಲಿ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ನಡೆಸಿದ 28 ವರ್ಷದ ಯುವಕನೊಬ್ಬ ಆ ನಾಯಿಗೆ ಇನ್ನಿಲ್ಲದಂತೆ ಚಿತ್ರಹಿಂಸೆ ನೀಡಿದ್ದಾನೆ. ಮನೆಯ ಬಾಲ್ಕನಿಯಲ್ಲಿ ನಾಯಿಯನ್ನು ಲೈಂಗಿಕವಾಗಿ ಹಿಂಸಿಸುತ್ತಿದ್ದ ಆತನನ್ನು ನೋಡಿದ ಪಕ್ಕದ ಮನೆಯವರು ಜೋರಾಗಿ ಕಿರುಚಾಡಿ, ಗಲಾಟೆ ಮಾಡಿದ್ದಾರೆ. ಆಗ ತಾನು ಸಿಕ್ಕಿಬೀಳುತ್ತೇನೆಂಬ ಭಯದಲ್ಲಿ ಆ ವ್ಯಕ್ತಿ ತನ್ನ 3ನೇ ಮಹಡಿಯ ಮನೆಯ ಬಾಲ್ಕನಿಯಿಂದ ನಾಯಿಯನ್ನು ಕೆಳಗೆ ಬಿಸಾಡಿದ್ದಾನೆ.
3ನೇ ಮಹಡಿಯಿಂದ ಕೆಳಗೆ ಬಿದ್ದ ಕಾರಣ ನಾಯಿಗೆ ಗಾಯಗಳಾಗಿದ್ದು, ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಯಾರಿಗೂ ಗೊತ್ತಾಗುವುದಿಲ್ಲವೆಂದು ಆ ವ್ಯಕ್ತಿ ನಡುರಾತ್ರಿ ತನ್ನ ಮನೆಯ ಬಾಲ್ಕನಿಗೆ ನಾಯಿಯನ್ನು ಎಳೆದುಕೊಂಡು ಬಂದು ಅತ್ಯಾಚಾರಕ್ಕೆ ಪ್ರಯತ್ನಿಸುತ್ತಿದ್ದ. ಆಗ ಪಕ್ಕದ ಮನೆಯ ವ್ಯಕ್ತಿ ಬಾಲ್ಕನಿಯಿಂದ ಈ ದೃಶ್ಯವನ್ನು ನೋಡಿ ಅನುಮಾನಗೊಂಡಿದ್ದಾರೆ. ಏನು ಮಾಡುತ್ತಿದ್ದೀಯ? ಎಂದು ಜೋರಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಮಾಡಿದ ಅವಮಾನ; ನಾಯಿಮರಿಗೆ ನೂರಿ ಎಂದು ಹೆಸರಿಟ್ಟ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ
ಇದರಿಂದ ಭಯಭೀತನಾದ ಆ ವ್ಯಕ್ತಿ ನಾಯಿಯನ್ನು ತಕ್ಷಣ ಬಾಲ್ಕನಿಯಿಂದ ಎಸೆದಿದ್ದಾನೆ. ನಂತರ ನೆರೆಹೊರೆಯುವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 (ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಅನೈಸರ್ಗಿಕವಾಗಿ ದೈಹಿಕ ಸಂಭೋಗ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಹಾಗೇ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಅಡಿಯಲ್ಲಿ ಆರೋಪಗಳನ್ನು ಸಹ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ, ಕುಡಿತದ ಅಮಲಿನಲ್ಲಿ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ