ಲೈಂಗಿಕ ಕಿರುಕುಳ ಸಾಬೀತುಪಡಿಸಲು ಸಂತ್ರಸ್ತೆಯ ದೈಹಿಕ ಗಾಯ ಮುಖ್ಯವಲ್ಲ: ಸುಪ್ರೀಂಕೋರ್ಟ್​

|

Updated on: Jan 19, 2025 | 8:59 AM

ಲೈಂಗಿಕ ಕಿರುಕುಳ ಪ್ರಕರಣ ಸಾಬೀತುಪಡಿಸಲು ಸಂತ್ರಸ್ತೆಯ ದೇಹದಲ್ಲಿ ಗಾಯಗಳಾಗಿರಬೇಕು, ಅಥವಾ ಆಕೆ ತನಗಾದ ನೋವನ್ನು ಎಲ್ಲರ ಮುಂದೆ ಕೂಗಿ ಕೂಗಿ ಹೇಳಬೇಕೆಂದೇನಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಪುರುಷನಿಂದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರಕ್ಕೆ ಮಹಿಳೆಯ ಪ್ರತಿಕ್ರಿಯೆಯು ಅವಳ ವೈಯಕ್ತಿಕ ಗುಣಲಕ್ಷಣಗಳನ್ನು ಅವಲಂಬಿಸಿ ಬದಲಾಗಬಹುದು. ಒಬ್ಬ ವ್ಯಕ್ತಿ ಪೋಷಕರ ಸಾವಿನಿಂದ ಸಾರ್ವಜನಿಕವಾಗಿ ಅಳಬಹುದು, ಆದರೆ ಅದೇ ಪರಿಸ್ಥಿತಿಯಲ್ಲಿರುವ ಇನ್ನೊಬ್ಬ ವ್ಯಕ್ತಿ ಸಾರ್ವಜನಿಕವಾಗಿ ಯಾವುದೇ ಭಾವನೆಯನ್ನು ಪ್ರದರ್ಶಿಸದೇ ಇರಬಹುದು ಆದರೆ ಅವರಿಗೆ ಪೋಷಕರ ಬಗ್ಗೆ ಪ್ರೀತಿ ಇಲ್ಲ ಎಂದರ್ಥವಲ್ಲ ಎಂದು ಹೇಳಿದ್ದಾರೆ.

ಲೈಂಗಿಕ ಕಿರುಕುಳ ಸಾಬೀತುಪಡಿಸಲು ಸಂತ್ರಸ್ತೆಯ ದೈಹಿಕ ಗಾಯ ಮುಖ್ಯವಲ್ಲ: ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​
Follow us on

ಲೈಂಗಿಕ ಕಿರುಕುಳ ಪ್ರಕರಣ ಸಾಬೀತುಪಡಿಸಲು ಸಂತ್ರಸ್ತೆಯ ದೈಹಿಕ ಗಾಯ ಮುಖ್ಯವಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಗಾಯಗಳಾಗುವುದು ಸಹಜ ಆದರೆ ಅದೇ ಮುಖ್ಯವಲ್ಲ ಎಂದು ಕೋರ್ಟ್​ ಹೇಳಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಈ ಅಭಿಪ್ರಾಯಪಟ್ಟಿದೆ.

ಭಯ, ಆಘಾತ, ಸಾಮಾಜಿಕ ಕಳಂಕ ಅಥವಾ ಅಸಹಾಯಕತೆಯ ಭಾವನೆಗಳಂತಹ ಅಂಶಗಳಿಂದ ಪ್ರಭಾವಿತವಾಗಿರುವವರು ಆಘಾತಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ . ಆದರೆ ಹೀಗೆಯೇ ಪ್ರತಿಕ್ರಿಯಿಸಬೇಕು ಎಂದು ಹೇಳುವುದು ತಪ್ಪು ಎಂದು ಕೋರ್ಟ್​ ಹೇಳಿದೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಳಂಕವು ಮಹಿಳೆಯರಿಗೆ ಗಮನಾರ್ಹ ಅಡೆತಡೆಗಳನ್ನು ಉಂಟುಮಾಡುತ್ತದೆ. ಘಟನೆಯನ್ನು ಇತರರಿಗೆ ಬಹಿರಂಗಪಡಿಸಲು ಅವರಿಗೆ ಕಷ್ಟವಾಗುತ್ತದೆ. ವಿವಿಧ ಜನರು ಆಘಾತಕಾರಿ ಘಟನೆಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ.

ಒಬ್ಬ ವ್ಯಕ್ತಿ ಪೋಷಕರ ಸಾವಿನಿಂದ ಸಾರ್ವಜನಿಕವಾಗಿ ಅಳಬಹುದು, ಆದರೆ ಅದೇ ಪರಿಸ್ಥಿತಿಯಲ್ಲಿರುವ ಇನ್ನೊಬ್ಬ ವ್ಯಕ್ತಿ ಸಾರ್ವಜನಿಕವಾಗಿ ಯಾವುದೇ ಭಾವನೆಯನ್ನು ಪ್ರದರ್ಶಿಸದೇ ಇರಬಹುದು ಆದರೆ ಅವರಿಗೆ ಪೋಷಕರ ಬಗ್ಗೆ ಪ್ರೀತಿ ಇಲ್ಲ ಎಂದರ್ಥವಲ್ಲ.

ಮತ್ತಷ್ಟು ಓದಿ:
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ

ಅದೇ ರೀತಿ, ಪುರುಷನಿಂದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರಕ್ಕೆ ಮಹಿಳೆಯ ಪ್ರತಿಕ್ರಿಯೆಯು ಅವಳ ವೈಯಕ್ತಿಕ ಗುಣಲಕ್ಷಣಗಳನ್ನು ಅವಲಂಬಿಸಿ ಬದಲಾಗಬಹುದು.ಉತ್ತರಾಖಂಡ ಹೈಕೋರ್ಟ್‌ನ ಆದೇಶದ ವಿರುದ್ಧ ದಲೀಪ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ಆದೇಶದಲ್ಲಿ ಉತ್ತರಾಖಂಡ ಹೈಕೋರ್ಟ್‌ ಅವರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದೆ.

ಮದುವೆಯ ಉದ್ದೇಶಕ್ಕಾಗಿ ಅಪ್ರಾಪ್ತ ವಯಸ್ಕಳನ್ನು ಅಪಹರಿಸಿದ ಆರೋಪದ ಮೇಲೆ ದಲೀಪ್ ದೋಷಿ ಎಂದು ಹೈಕೋರ್ಟ್ ತೀರ್ಪು ನೀಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಆತನನ್ನು ಖುಲಾಸೆಗೊಳಿಸಿದೆ. ಘಟನೆಯ ನಂತರ ತಕ್ಷಣವೇ ಸಂತ್ರಸ್ತೆಯನ್ನು ಪರೀಕ್ಷಿಸಿದ ವೈದ್ಯರಿಗೆ ಆಕೆಯ ದೇಹದಲ್ಲಿ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ ಎಂದು ಹೇಳಿದರು.

ಆಕೆ ಸಾಮಾನ್ಯವಾಗಿದ್ದಳು ಎಂದು ಹೇಳಿದ್ದಾರೆ. ಆಕೆಯ ದೇಹದಲ್ಲಿ ಯಾವುದೇ ಗಾಯಗಳು ಅಥವಾ ಊತ ಕಂಡುಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತೆಯ ಮೇಲಿನ ಲೈಂಗಿಕ ಕಿರುಕುಳದ ಆರೋಪವನ್ನು ವೈದ್ಯರು ಸಂಪೂರ್ಣವಾಗಿ ತಿರಸ್ಕರಿಸಿದ್ದರು.
ಬಾಲಕಿ ತಾನು ಸ್ವಯಂಪ್ರೇರಣೆಯಿಂದ ಹೋಗಿರುವುದಾಗಿ ತಪ್ಪೊಪ್ಪಿಕೊಂಡಿರುವುದನ್ನು ಪೀಠ ಗಮನಿಸಿದೆ. ಅದೇ ಸಮಯದಲ್ಲಿ, ಸಂತ್ರಸ್ತೆಯನ್ನು ಪರೀಕ್ಷಿಸಿದ ವೈದ್ಯರು ಆಕೆಯ ವಯಸ್ಸು 16 ರಿಂದ 18 ವರ್ಷಗಳು ಎಂದು ಅಂದಾಜಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ