2 ಲಸಿಕೆ ಹಾಕಿಸಿಕೊಂಡ್ರೆ ಕೊರೊನಾ ತಡೆಗಟ್ಟಬಹುದು ಅಂದ್ಕೋಬೇಡಿ; ಬೂಸ್ಟರ್​​ ಡೋಸ್​ ಸಹ ಬೇಕು ಅನ್ನುತ್ತಿದೆ ಅಧ್ಯಯನ: ಏನಿದರ ಲೆಕ್ಕಾಚಾರ?

|

Updated on: May 28, 2021 | 4:05 PM

Booster Dose: ಪ್ರತಿಯೊಬ್ಬರಿಗೂ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಮೂಲಕ ರಕ್ಷಣೆ ಒದಗಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಅದನ್ನು ಮಾಡುತ್ತಿದ್ದೇವೆ. ಈ ಮಧ್ಯೆ, ಲಸಿಕೆ ಪಡೆದ 6 ತಿಂಗಳ ತರುವಾಯ ಮತ್ತೆ ಬೂಸ್ಟರ್​ ಡೋಸ್ ಅನ್ನೂ ತೆಗೆದುಕೊಳ್ಳುವ ಅಗತ್ಯವಿದೆಯೇ ಎಂಬುದರ ಬಗ್ಗೆ ವ್ಯಾಕ್ಸಿನ್ ಪ್ರಯೋಗಗಳು ನಡೆಯುತ್ತಿವೆ ಎಂದೂ ಡಾ. ವಿ ಕೆ ಪಾಲ್ ಸ್ಪಷ್ಟಪಡಿಸಿದ್ದಾರೆ.

2 ಲಸಿಕೆ ಹಾಕಿಸಿಕೊಂಡ್ರೆ ಕೊರೊನಾ ತಡೆಗಟ್ಟಬಹುದು ಅಂದ್ಕೋಬೇಡಿ; ಬೂಸ್ಟರ್​​ ಡೋಸ್​ ಸಹ ಬೇಕು ಅನ್ನುತ್ತಿದೆ ಅಧ್ಯಯನ: ಏನಿದರ ಲೆಕ್ಕಾಚಾರ?
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಒಂದು ಕಡೆ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಲಸಿಕೆ ಹಾಕಿಸಿಕೊಂಡರೆ ಸಾಕು ಎಂಬ ಜನಜನಿತ ನಂಬಿಕೆ ದೃಢವಾಗುತ್ತಿರುವಾಗಲೇ ಕೇಂದ್ರ ಸರ್ಕಾರದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಅಧ್ಯಕ್ಷ ಜೋ ಬೈಡನ್​ ಸೇರಿದಂತೆ ಅಮೆರಿಕದಲ್ಲಿ ಎಲ್ಲರೂ ಎರಡು ಬಾರಿ ಲಸಿಕೆ ಹಾಕಿಸಿಕೊಂಡು ನಮಗಿನ್ನು ಕೊರೊನಾ ಬರಾಕಿಲ್ಲ ಎಂದು ಮೂತಿಗೆ ಹಾಕಿಕೊಂಡಿದ್ದ ಮಾಸ್ಕ್​ ಅನ್ನು ಕಿತ್ತೆಸೆದು, ಎದುರಿಗೆ ಬಂದವರನ್ನೆಲ್ಲ ಅಪ್ಪಿಕೊಳ್ಳುತ್ತಿದ್ದಾರೆ. ನೋಡಿ ನಾವು ಕೊರೊನಾದಿಂದ ಮುಕ್ತ ಮುಕ್ತ ಎಂದು ಸಾರುತ್ತಿದ್ದಾರೆ. ಆದರೆ ಈ ಮಧ್ಯೆ, ಕೇಂದ್ರ ಸರ್ಕಾರ ನಿರ್ದೇಶಿತ ಅಧ್ಯಯನ ಪ್ರಕಾರ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೊಂಡರೆ ಅದೂ ಎರಡು ಬಾರಿ ಹಾಕಿಸಿಕೊಂಡರೂ ಕೊರೊನಾ ಬರುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಎರಡು ಬಾರಿ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಅದಕ್ಕೆ ಪೂರಕವಾಗಿ ಬೂಸ್ಟರ್​ ಲಸಿಕೆಯನ್ನೂ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಕೊರೊನಾ ಸೋಂಕಿನ ವಿರುದ್ಧ ಯಾವುದೇ ಲಸಿಕೆ ಶೇ. 100ರಷ್ಟು ಗ್ಯಾರಂಟಿ ಕೊಡುವುದಿಲ್ಲ. ಆ ತರಹದ ಲಸಿಕೆ ಇದುವರೆಗೂ ಬಂದಿಲ್ಲ ಎಂಬುದು ಕೇಂದ್ರದ ವಾದವಾಗಿದೆ. ಇದಕ್ಕೆ ಪೂರಕವಾಗಿ ಬೂಸ್ಟರ್​ ಡೋಸ್​ ಹಾಕಿಸಿಕೊಳ್ಳುವ ಅಗತ್ಯವಿದೆಯೇ ಎಂಬುದುರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಬೂಸ್ಟರ್​ ಡೋಸ್​ ಹಾಕಿಸಿಕೊಳ್ಳುವ ಅಗತ್ಯವಿದೆ ಎಂದು ಒಂದು ವೇಳೆ ಅಧ್ಯಯನದಿಂದ ದೃಢಪಟ್ಟರೆ ಆ ಬಗ್ಗೆ ಜನರಿಗೆ ತಕ್ಷಣ ಮಾಹಿತಿ ನೀಡಿ, ಅದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಎಂದು ನೀತಿ ಆಯೋಗದ ಸದಸ್ಯ ಡಾ. ವಿ ಕೆ ಪಾಲ್​ ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಮೂಲಕ ರಕ್ಷಣೆ ಒದಗಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಅದನ್ನು ಮಾಡುತ್ತಿದ್ದೇವೆ. ಈ ಮಧ್ಯೆ, ಲಸಿಕೆ ಪಡೆದ 6 ತಿಂಗಳ ತರುವಾಯ ಮತ್ತೆ ಬೂಸ್ಟರ್​ ಡೋಸ್ ಅನ್ನೂ ತೆಗೆದುಕೊಳ್ಳುವ ಅಗತ್ಯವಿದೆಯೇ ಎಂಬುದರ ಬಗ್ಗೆ ವ್ಯಾಕ್ಸಿನ್ ಪ್ರಯೋಗಗಳು ನಡೆಯುತ್ತಿವೆ ಎಂದೂ ಡಾ. ವಿ ಕೆ ಪಾಲ್ ಸ್ಪಷ್ಟಪಡಿಸಿದ್ದಾರೆ.

(Not just 2 corona vaccine enough booster dose is needed in experimental studies says niti aayog member vk paul)