ನನ್ನನ್ನು ನೋಡಲು ಆಸ್ಪತ್ರೆಗೆ ಬರಬೇಡಿ: ಬೆಂಬಲಿಗರಿಗೆ, ಅನುಯಾಯಿಗಳಿಗೆ ಕೆಸಿಆರ್ ಮನವಿ

|

Updated on: Dec 12, 2023 | 5:54 PM

ನಾನು ಯಶೋದಾ ಆಸ್ಪತ್ರೆಯಲ್ಲಿರುವ ಕಾರಣ, ನನ್ನ ವೈದ್ಯಕೀಯ ತಂಡವು ಸೋಂಕು ತಗುಲುವ ಸಾಧ್ಯತೆಯಿದೆ, ಪರಿಸ್ಥಿತಿ ಹದಗೆಡುತ್ತದೆ ಎಂದು ಸಲಹೆ ನೀಡುತ್ತಿದೆ. ಎಲ್ಲರೂ ತಮ್ಮ ಮನೆಗಳಿಗೆ ಹಿಂತಿರುಗುವಂತೆ ವಿನಂತಿಸುತ್ತೇವೆ. ದಯವಿಟ್ಟು ನನ್ನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಬೇಡಿ ಎಂದು ವಿಡಿಯೊ ಮೂಲಕ ಕೆಸಿಆರ್ ಮನವಿ ಮಾಡಿದ್ದಾರೆ.

ನನ್ನನ್ನು ನೋಡಲು ಆಸ್ಪತ್ರೆಗೆ ಬರಬೇಡಿ: ಬೆಂಬಲಿಗರಿಗೆ, ಅನುಯಾಯಿಗಳಿಗೆ ಕೆಸಿಆರ್ ಮನವಿ
ಕೆಸಿಆರ್
Follow us on

ಹೈದರಾಬಾದ್ ಡಿಸೆಂಬರ್ 12: ಇಂದು ನನ್ನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಸಾವಿರಾರು ಜನರಿಗೆ ನಾನು ಕೃತಜ್ಞನಾಗಿದ್ದೇನೆ.  ಅಪಘಾತದ ನಂತರ ನಾನು ಯಶೋದಾ ಆಸ್ಪತ್ರೆಯಲ್ಲಿರುವ ಕಾರಣ, ನನ್ನ ವೈದ್ಯಕೀಯ ತಂಡವು ಸೋಂಕು ತಗುಲುವ ಸಾಧ್ಯತೆಯಿದೆ, ಪರಿಸ್ಥಿತಿ ಹದಗೆಡುತ್ತದೆ ಎಂದು ಸಲಹೆ ನೀಡುತ್ತಿದೆ. ಎಲ್ಲರೂ ತಮ್ಮ ಮನೆಗಳಿಗೆ ಹಿಂತಿರುಗುವಂತೆ ವಿನಂತಿಸುತ್ತೇವೆ. ದಯವಿಟ್ಟು ನನ್ನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡುವ ಕಷ್ಟ ತೆಗೆದುಕೊಳ್ಳಬೇಡಿ ಎಂದು ವಿನಂತಿಸುತ್ತೇವೆ. ತುಂಬಾ ಟ್ರಾಫಿಕ್ ತೊಂದರೆಯೂ ಇದೆ. ಜನರ ಮಧ್ಯೆ ಇರುವ ವ್ಯಕ್ತಿ ನಾನು. ನಾನು ಚೇತರಿಸಿಕೊಂಡ ನಂತರ ನಾವು ಎಲ್ಲರೂ ಶೀಘ್ರದಲ್ಲೇ ಭೇಟಿಯಾಗಬಹುದು ಎಂದು ತೆಲಂಗಾಣದ (Telangana)ಮಾಜಿ ಸಿಎಂ, ಬಿಆರ್​​ಎಸ್ (BRS) ಮುಖ್ಯಸ್ಥ  ಕೆಸಿಆರ್(K Chandrashekar rao) ವಿಡಿಯೊದಲ್ಲಿ ಹೇಳಿದ್ದಾರೆ.

ಕೆಸಿಆರ್ ಡಿಸೆಂಬರ್ 7 ರಂದು ಎರ್ರವಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಬಿದ್ದು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಒಟ್ಟು ಎಡ ಹಿಪ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಕೆಸಿಆರ್ ಆರೋಗ್ಯ ಸ್ಥಿತಿ

ಡಿಸೆಂಬರ್ 8 ರಂದು ವಾಶ್ ರೂಂನಲ್ಲಿ ಕಾಲು ಜಾರಿ ಬಿದ್ದ ಕೆಸಿಆರ್ ಹಿಪ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ, ಕೆಸಿಆರ್ ಅವರ ಸ್ಥಿತಿಯನ್ನು ವೈದ್ಯರ ತಂಡವು ನಿಕಟವಾಗಿ ಮೇಲ್ವಿಚಾರಣೆ ಮಾಡಿದೆ. ಅವರ ಚೇತರಿಕೆ ಪ್ರಕ್ರಿಯೆಯು ಉತ್ತಮವಾಗಿ ಸಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಯಶೋದಾ ವೈದ್ಯಕೀಯ ತಂಡದಿಂದ ಡಾ.ಪ್ರವೀಣ್ ರಾವ್, ಕೆಸಿಆರ್ ಅವರು ಚೇತರಿಸಿಕೊಳ್ಳುವ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ತೋರಿಸಿದ್ದಾರೆ  ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Tue, 12 December 23