ಶ್ರೀಹರಿಕೋಟಾ, ಫೆ.17: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಂದು (ಫೆ.17) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ ಎಫ್ 14 (ಜಿಎಸ್ಎಲ್ವಿ-ಎಫ್14) ನಲ್ಲಿ ಇನ್ಸಾಟ್-3DS ಹವಾಮಾನ ಉಪಗ್ರಹವನ್ನು ಉಡಾವಣೆ ಮಾಡಿದೆ. ಈ ಇನ್ಸಾಟ್-3DSನ್ನು ದೇಶದಲ್ಲಿ ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಯ ನಿರ್ವಹಣೆ ಮಾಡುವ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. 6-ಚಾನೆಲ್ ಇಮೇಜರ್ ಮತ್ತು 19-ಚಾನೆಲ್ ಸೌಂಡರ್ ಸೇರಿದಂತೆ ಅತ್ಯಾಧುನಿಕ ಪೇಲೋಡ್‌ಗಳೊಂದಿಗೆ ಇದನ್ನು ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ NSAT-3DS ಉನ್ನತ ಮಟ್ಟದಲ್ಲಿ ಹವಾಮಾನ ದತ್ತಾಂಶ ಸಂಗ್ರಹ ಮಾಡುತ್ತದೆ ಎಂದು ಇಸ್ರೋ ಹೇಳಿದೆ.
NSAT-3DS ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಅಧ್ಯಾಯನವನ್ನು ಬರೆಯಲಿದೆ. ಇದರ ನಿರ್ಮಾಣಕ್ಕೆ ಕೇಂದ್ರ ಭೂ ವಿಜ್ಞಾನ ಸಚಿವಾಲಯ ಪೂರ್ಣ ಮಟ್ಟದ ಹಣದ ಸಹಾಯವನ್ನು ಮಾಡಿದೆ ಎಂದು ಹೇಳಲಾಗಿದೆ. ಇದರ ಮೂಲಕ ನಮ್ಮ ದೇಶಕ್ಕೆ ಬರುವ ಹವಾಮಾನ ಮುನ್ಸೂಚನೆ ಮತ್ತು ವಿಪತ್ತುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಜತೆಗೆ ಇದು ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆ ಕೂಡ ಮಾಡುತ್ತದೆ.
ISRO launches INSAT-3DS meteorological satellite onboard a Geosynchronous Launch Vehicle F14 (GSLV-F14), from Satish Dhawan Space Centre in Sriharikota. pic.twitter.com/HHDdGVH7mO
— ANI (@ANI) February 17, 2024
ಭೂ ವಿಜ್ಞಾನ ಸಚಿವಾಲಯದ (MoES) ವಿವಿಧ ಇಲಾಖೆಗಳಾದ ಭಾರತ ಹವಾಮಾನ ಇಲಾಖೆ (IMD), ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ (NCMRWF), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ (IITM), ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT) , ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮತ್ತು ಹಲವಾರು ಇತರ ಏಜೆನ್ಸಿಗಳು ಮತ್ತು ಸಂಸ್ಥೆಗಳು ಸುಧಾರಿತ ಹವಾಮಾನ ಮುನ್ಸೂಚನೆಗಳು ಮತ್ತು ಹವಾಮಾನ ಸೇವೆಗಳನ್ನು ಒದಗಿಸಲು INSAT-3DS ಉಪಗ್ರಹ ಡೇಟಾವನ್ನು ಬಳಸುತ್ತವೆ.
ಇದನ್ನೂ ಓದಿ: ಇಸ್ರೋದಲ್ಲಿ ಉದ್ಯೋಗಾವಕಾಶಗಳು -ನಿಮ್ಮ ಕೆರಿಯರ್ ಲಾಂಚ್ ಮಾಡಲು ಇಲ್ಲಿದೆ ಸದವಕಾಶ
ಇನ್ಸಾಟ್-3DS ಉಪಗ್ರಹದೊಂದಿಗೆ ಉಡಾವಣೆಗೊಂಡಿರುವ ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನವನ್ನು (GSLV) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ಅಧ್ಯಕ್ಷರೊಬ್ಬರು ನಾಟಿ ಬಾಯ್ ಎಂದು ಕರೆದಿದ್ದಾರೆ. GSLV 15 ಹಾರಾಟಗಳನ್ನು ನಡೆಸಿದೆ. ಮೇ 29, 2023 ರಂದು ನಡೆಸಿದ ಹಾರಾಟದಲ್ಲಿ GSLV ಯಶಸ್ವಿಯಾಗಿತ್ತು. ಅದಕ್ಕೂ ಮೊದಲು ಅಂದರೆ ಆಗಸ್ಟ್ 12ರಂದು ನಡೆಸಿದ ಹಾರಾಟದಲ್ಲಿ ವಿಫಲಗೊಂಡಿತ್ತು ಇದಕ್ಕಾಗಿ ಇದನ್ನು ನಾಟಿ ಬಾಯ್ ಎಂದು ಕರೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Sat, 17 February 24