ಇತ್ತೀಚಿನ ದಿನಗಳಲ್ಲಿ ನಾಣ್ಯಗಳ ಮೇಲೆ ಖ್ಯಾತ ನಾಮರ (ಸೆಲೆಬ್ರಿಟಿಗಳ) ಭಾವಚಿತ್ರಗಳನ್ನು ಮುದ್ರಿಸುವುದು ಟ್ರೆಂಡಿಂಗ್ ಆಗಿದೆ. ಆರ್‌ಬಿಐ ಇಂತಹ ವಿಷಯಗಳನ್ನು ಸಾರ್ವಜನಿಕರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಮೊದಲು ಅವುಗಳಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಅವುಗಳನ್ನು ಗಣ್ಯರಿಗೆ ಉಡುಗೊರೆಯಾಗಿ ಅಥವಾ ಆರ್‌ಬಿಐ ಅಧಿಕೃತ ವೆಬ್ ಸೈಟ್ ಮೂಲಕ ಮಾರಾಟಕ್ಕೆ ಇರಿಸಲಾಗುತ್ತಿದೆ. ಆದರೆ, ಇದುವರೆಗೆ ಮುದ್ರಿಸಲಾದ ಎಲ್ಲ ನಾಣ್ಯಗಳ ಪೈಕಿ ಎನ್ ಟಿಆರ್ ನಾಣ್ಯ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದು ಹೈದರಾಬಾದ್ ಮಿಂಟ್ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿಎನ್ ಆರ್ ನಾಯ್ಡು ಹೇಳಿದ್ದಾರೆ.
ಈ ಹಿಂದೆ ಮುದ್ರಿತ ನಾಣ್ಯಗಳ ಪೈಕಿ ಕೇವಲ 12,000 ಮಾತ್ರ ಮಾರಾಟವಾಗಿತ್ತು. ಆ ದಾಖಲೆಯನ್ನು ಎನ್ ಟಿಆರ್ ನಾಣ್ಯ ಅಳಿಸಿ ಹಾಕಿದೆ ಎಂದಿದ್ದಾರೆ. ಮುದ್ರಣವಾದ ಎರಡು ತಿಂಗಳೊಳಗೆ ಸುಮಾರು 25,000 ನಾಣ್ಯಗಳು ಮಾರಾಟವಾಗಿವೆ. ಇದು ದೇಶದ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.
ಹೈದರಾಬಾದ್ ಟಂಕಸಾಲೆಯಲ್ಲಿ ಎನ್ ಟಿಆರ್ ಅವರ ಸ್ಮರಣಾರ್ಥ ನಾಣ್ಯ ತಯಾರಿಸಿರುವುದು ಸಂತಸದ ಸಂಗತಿ ಎಂದು ಎನ್ ಟಿಆರ್ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಟಿ.ಡಿ. ಜನಾರ್ದನ್ ತಿಳಿಸಿದ್ದಾರೆ. ದೇಶದಲ್ಲಿ ಈವರೆಗೆ 200 ಖ್ಯಾತನಾಮರಿಗೆ ಸಂಬಂಧಿಸಿದ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದ್ದು, ದಾಖಲೆ ಮಟ್ಟದಲ್ಲಿ ಮಾರಾಟವಾದ ಕೀರ್ತಿ ಎನ್ ಟಿಆರ್ ಸ್ಮರಣಾರ್ಥ ನಾಣ್ಯಕ್ಕೆ ಸಲ್ಲುತ್ತದೆ ಎಂದರು. ಅದು ಪ್ರಸ್ತುತ ಪ್ರಥಮ ಸ್ಥಾನದಲ್ಲಿದೆ ಎಂದರು. ಬೆಳ್ಳಿ, ಹಿತ್ತಾಳೆ ಮತ್ತು ಚಿನ್ನದ ಒಟ್ಟಿಗೆ ತಯಾರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಮೂರು ರೀತಿಯ ಪ್ಯಾಕಿಂಗ್‌ನಲ್ಲಿ ನಾಣ್ಯಗಳು ಲಭ್ಯವಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Mon, 20 November 23