ಭಾರತದಲ್ಲಿ 10 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, ಇವತ್ತೊಂದೇ ದಿನ 687 ಸಾವು
ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ ಹತ್ತು ಲಕ್ಷ ದಾಟಿದೆ. ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿರುವ ಮಹಾಮಾರಿ ಭಾರತದಲ್ಲಂತೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಸಧ್ಯ ಭಾರತ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಇಂದು ಮಧ್ಯಾಹ್ನದವರೆಗೆ ಪತ್ತೆಯಾದ ಸೋಂಕಿತರ ಸಂಖ್ಯೆ 34,956 ರಷ್ಟಿದೆ. ಹಾಗೇನೆ 687 ಜನರು ಇಂದು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 25,602 ಕ್ಕೇರಿದೆ. ವಿಶ್ವದ ಕೊರೊನಾ ಸೋಂಕಿತರಲ್ಲಿ ಭಾರತದ ಪಾಲು ಶೇ. 7.14ರಷ್ಟಿದೆ. ಹಾಗೇನೆ ವಿಶ್ವದ ಕೊರೊನಾ […]
Follow us on
ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ ಹತ್ತು ಲಕ್ಷ ದಾಟಿದೆ. ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿರುವ ಮಹಾಮಾರಿ ಭಾರತದಲ್ಲಂತೂ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಸಧ್ಯ ಭಾರತ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಭಾರತದಲ್ಲಿ ಇಂದು ಮಧ್ಯಾಹ್ನದವರೆಗೆ ಪತ್ತೆಯಾದ ಸೋಂಕಿತರ ಸಂಖ್ಯೆ 34,956 ರಷ್ಟಿದೆ. ಹಾಗೇನೆ 687 ಜನರು ಇಂದು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 25,602 ಕ್ಕೇರಿದೆ.
ವಿಶ್ವದ ಕೊರೊನಾ ಸೋಂಕಿತರಲ್ಲಿ ಭಾರತದ ಪಾಲು ಶೇ. 7.14ರಷ್ಟಿದೆ. ಹಾಗೇನೆ ವಿಶ್ವದ ಕೊರೊನಾ ಸಾವುಗಳ ಪೈಕಿ ಭಾರತದಲ್ಲಿ ಶೇ 4.26ರಷ್ಟು ಸಾವು ಸಂಭವಿಸುತ್ತಿದೆ.