ಟಿವಿ9 ನೆಟ್ವರ್ಕ್ನಲ್ಲಿ TV9 ಬಾಂಗ್ಲಾ ವರದಿಗಾರ ಸ್ವರ್ಣೇಂದು ದಾಸ್ ಇಂದು ನಮ್ಮನ್ನಗಲಿದ್ದಾರೆ. ಸಮರ್ಪಣಾ ಭಾವದಿಂದ ಟಿವಿ9 ಬಾಂಗ್ಲಾ ಜತೆ ಕೆಲಸ ಮಾಡುತ್ತಿದ್ದ ಸ್ವರ್ಣೇಂದು ದಾಸ್ ಅವರಿಗೆ 2014 ರಲ್ಲಿ ಮಾರಣಾಂತಿಕ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ ಅವರು TV9 ಬಾಂಗ್ಲಾದ ಜೊತೆಗಿನ ಸಂಪರ್ಕ ಮತ್ತು ಕೆಲಸವನ್ನು ಎಂದಿಗೂ ನಿಲ್ಲಿಸಲಿಲ್ಲ. ತನಗೆ ಮಾರಣಾಂತಿಕ ಕ್ಯಾನ್ಸರ್ ಇದ್ದರೂ ಅದರ ಬಗ್ಗೆ ಯಾವುದೇ ಚಿಂತೆ ಮಾಡದೆ ಅವರು ವರದಿಗಾರಿಕೆ ಮಾಡುತ್ತಿದ್ದರು. ದಾಸ್ ಅವರು ಜನವರಿ, 2021 ರಲ್ಲಿ TV9 ಬಾಂಗ್ಲಾ ಸೇರಿದ್ದರು. ನಾವು ಮತ್ತು ನಮ್ಮ ವೀಕ್ಷಕರು ರೈಲ್ವೆ, ನಗರ ಸಾರಿಗೆ, ದೇಶೀಯ ರಾಜಕೀಯ ಮತ್ತು ವಾಯುಯಾನದ ಕುರಿತು ಅವರ ಅದ್ಭುತ ವರದಿಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಅವರ ಸುದ್ದಿಗಳನ್ನು ಬೆನ್ನಟ್ಟುವ ರೀತಿ, ಸುದ್ದಿಗಳನ್ನು ಪ್ರಕಟಿಸುವ ರೀತಿ ಎಲ್ಲವನ್ನು ಜನರು ಮೆಚ್ಚುಕೊಳ್ಳುತ್ತಿದ್ದರು. ನಮ್ಮ ಬಳಗ ಅವರಲ್ಲಿ ಯಾವ ಹೊತ್ತಿಗೂ ಆನ್-ಸ್ಕ್ರೀನ್ ಲೈವ್ ವರದಿ ಮಾಡಬೇಕು ಎಂದು ಕೇಳಿದಾಗಲೆಲ್ಲಾ ಅವರು ಸದಾ ಸಿದ್ಧರಾಗಿದ್ದರು. ಅವರು ದಣಿವರಿಯದ ವ್ಯಕ್ತಿ ಎಂದೇ ಹೇಳಬಹುದು. ಅವರು ಸದಾ ಉತ್ಸಾಹದಿಂದ ಇರುತ್ತಿದ್ದ ಹಸನ್ಮುಖಿ.
ಸ್ವರ್ಣೇಂದು ಯಾವಾಗಲೂ ನಿಷ್ಠುರತೆ ಮತ್ತು ಬದ್ಧತೆಗೆ ಉದಾಹರಣೆಯಾಗಿದರು. ಪ್ರತಿ ಸುದ್ದಿಯಲ್ಲೂ ಅವರು ನಿಜವಾದ ಹೋರಾಟಗಾರರಾಗಿದ್ದರು. ಸಿಂಗೂರಿನ ಹೂಗ್ಲಿಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರಿಗೆ ಕನಸು ಕಾಣುವುದು, ಕನಸನ್ನು ನನಸು ಮಾಡಿಕೊಳ್ಳಲು ಹೆಣಗಾಡುವುದು ಗೊತ್ತಿತ್ತು. ಕೋಲ್ಕತ್ತಾ ನಗರದ ವಾಣಿಜ್ಯ ವಿದ್ಯಾಲಯದಲ್ಲಿಇವರು ಪದವಿ ಪಡೆದಿದ್ದಾರೆ. ನಂತರ ಅವರು ಸುದ್ದಿ ವಾಹಿನಿಗೆ ಸೇರಿದರು, ಅಲ್ಲಿ ಅವರು ಪ್ರತಿಯೊಂದರ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲಿಯುತ್ತಾ, ಬೆಳೆಯುತ್ತಾ ಮಿಂಚುತ್ತಿದ್ದರು. ಸ್ವರ್ಣೇಂದು ಇಂದು ನಮ್ಮ ಸಂಸ್ಥೆಯನ್ನು, ಅವರ ಪೋಷಕರು, ಪತ್ನಿ ಮತ್ತು ಅವರ 3 ವರ್ಷದ ಮಗಳನ್ನು ಅಗಲಿದ್ದಾರೆ. ಅವರ ಸಾಧನೆಗಳು, ದೃಢತೆ, ಚೈತನ್ಯ ಮತ್ತು ಸಕಾರಾತ್ಮಕತೆಯು ನಮಗೆ ಸ್ಫೂರ್ತಿ ನೀಡುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.
It is always painful to bid adieu to our friends who are no longer with us in this world, specially when their demise is untimely..
Always wearing a smile but critical when asking questions, Swarnendu will be missed.. Indeed the world of journalism lost a sharp mind today https://t.co/6hNwYFt49g pic.twitter.com/mgrdFVwLhS— FIRHAD HAKIM (@FirhadHakim) August 23, 2022
Published On - 6:08 pm, Tue, 23 August 22