
ಒಡಿಶಾ ನವೆಂಬರ್ 22: ಒಡಿಶಾದ (Odisha) ಜಾಜ್‌ಪುರ (Jajpur) ಜಿಲ್ಲೆಯ ಸರ್ಕಾರಿ ಶಾಲೆಯೊಂದರ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕರು ಮಂಗಳವಾರ ಸಿಟ್‌ಅಪ್ ಮಾಡುವಂತೆ ಒತ್ತಾಯಿಸಿದ್ದು ಬಾಲಕ ಮೃತಪಟ್ಟ ಘಟನೆ ವರದಿ ಆಗಿದೆ. ಓರಲಿಯ ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ ಮೃತ ಬಾಲಕ ರುದ್ರ ನಾರಾಯಣ ಸೇಠಿ. ಹತ್ತರ ಹರೆಯದ ವಿದ್ಯಾರ್ಥಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಶಾಲಾ ಆವರಣದಲ್ಲಿ ನಾಲ್ವರು ಸಹ ವಿದ್ಯಾರ್ಥಿಗಳೊಂದಿಗೆ ಆಟವಾಡುತ್ತಿದ್ದನು. ಶಿಕ್ಷಕರೊಬ್ಬರು ಬಾಲಕನನ್ನು ನೋಡಿದ್ದು ಆತನಿಗೆ ಶಿಕ್ಷೆಯಾಗಿ ಸಿಟ್-ಅಪ್ ಮಾಡಲು ಆದೇಶಿಸಿದರು.
ಈ ವೇಳೆ ರುದ್ರ ಕುಸಿದು ಬಿದ್ದಿದ್ದಾನೆ.ಸಮೀಪದ ರಸೂಲ್‌ಪುರ ಬ್ಲಾಕ್‌ನ ಓರಲಿ ಗ್ರಾಮದ ನಿವಾಸಿಗಳಾಗಿರುವ ಆತನ ಪೋಷಕರಿಗೆ ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಲಾಗಿದೆ. ಅವರು ಮತ್ತು ಶಿಕ್ಷಕರು ಅವರನ್ನು ಹತ್ತಿರದ ಸಮುದಾಯ ಕೇಂದ್ರಕ್ಕೆ ಮತ್ತು ಅಲ್ಲಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ, ಅಲ್ಲಿಂದಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಬಾಲಕ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಈ ಬಗ್ಗೆ ರಸುಲ್‌ಪುರ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ನೀಲಾಂಬರ್ ಮಿಶ್ರಾ ಅವರು ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕ ಪೊಲೀಸ್ ಒಡಿಶಾದಲ್ಲಿ ಅರೆಸ್ಟ್!
ನಮಗೆ ಔಪಚಾರಿಕ ದೂರು ಬಂದರೆ ನಾವು ತನಿಖೆಯನ್ನು ಪ್ರಾರಂಭಿಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ರಸೂಲ್‌ಪುರ ಸಹಾಯಕ ಬ್ಲಾಕ್ ಶಿಕ್ಷಣಾಧಿಕಾರಿ ಪ್ರವಂಜನ್ ಪಾಟಿ ಶಾಲೆಗೆ ಭೇಟಿ ನೀಡಿ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Wed, 22 November 23