ವಾಮಾಚಾರದ ಶಂಕೆ: ಒಡಿಶಾದಲ್ಲಿ ದಂಪತಿಯ ಸುಟ್ಟ 17 ಮಂದಿಗೆ ಜೀವಾವಧಿ ಶಿಕ್ಷೆ
ಒಡಿಶಾದ ಜಾಜ್‌ಪುರ್ ಜಿಲ್ಲೆಯ ನ್ಯಾಯಾಲಯವು ಮೂರು ವರ್ಷಗಳ ಹಿಂದೆ ದಂಪತಿಯನ್ನು ಸುಟ್ಟು ಕೊಂದ ಪ್ರಕರಣದಲ್ಲಿ 17 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿದ ನಂತರ, ಜಾಜ್‌ಪುರ ರಸ್ತೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರುಶಿಕೇಶ್ ಆಚಾರ್ಯ ಅವರು 17 ಜನರಿಗೆ ತಲಾ 10,000 ರೂ. ದಂಡ ವಿಧಿಸಿದ್ದರು.

ಒಡಿಶಾದ ಜಾಜ್‌ಪುರ್ ಜಿಲ್ಲೆಯ ನ್ಯಾಯಾಲಯವು ಮೂರು ವರ್ಷಗಳ ಹಿಂದೆ ದಂಪತಿಯನ್ನು ಸುಟ್ಟು ಕೊಂದ ಪ್ರಕರಣದಲ್ಲಿ 17 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿದ ನಂತರ, ಜಾಜ್‌ಪುರ ರಸ್ತೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರುಶಿಕೇಶ್ ಆಚಾರ್ಯ ಅವರು 17 ಜನರಿಗೆ ತಲಾ 10,000 ರೂ. ದಂಡ ವಿಧಿಸಿದ್ದರು.
ಜುಲೈ 7, 2020 ರ ತಡರಾತ್ರಿಯಲ್ಲಿ ಕಳಿಂಗ ನಗರ ಪ್ರದೇಶದ ನಿಮಾಪಾಲಿ ಗ್ರಾಮದಲ್ಲಿ ಶೈಲಾ ಬಲ್ಮುಜ್ ಮತ್ತು ಸಾಂಬಾರಿ ಬಲ್ಮುಜ್ ಎಂದು ಗುರುತಿಸಲಾದ ದಂಪತಿಗಳ ಮನೆಗೆ ಹಲವಾರು ಗ್ರಾಮಸ್ಥರು ನುಗ್ಗಿದ್ದರು ಮತ್ತು ವಾಮಾಚಾರದ ಅನುಮಾನದ ಮೇಲೆ ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಅವರು ದಂಪತಿಯ ಮನೆಗೆ ಬೆಂಕಿ ಹಚ್ಚಿದರು, ಅದರಲ್ಲಿ ಪುರುಷ ಮತ್ತು ಅವರ ಪತ್ನಿ ಮೃತಪಟ್ಟಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ರಜತ್ ಕುಮಾರ್ ರೌತ್ ಅವರ ಪ್ರಕಾರ 20 ಸಾಕ್ಷಿಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಿತು.
ಮತ್ತಷ್ಟು ಓದಿ: ಆರೋಗ್ಯ ಸರಿಪಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ ತಾಂತ್ರಿಕ, ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಕಿ
ಆರೋಗ್ಯ ಸರಿಪಡಿಸುವುದಾಗಿ ಕರೆದೊಯ್ದು ತಂತ್ರಿಯಿಂದ ಅತ್ಯಾಚಾರ ಆರೋಗ್ಯ ಸರಿಪಡಿಸುತ್ತೇನೆ ಎಂದು ನಂಬಿಸಿ ತಾಂತ್ರಿಕನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಿಗಿದ್ದು, ಇದೀಗ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ರಾಜಸ್ಥಾನದ ಸಾಲುಂಬರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಕಿಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಜೂನ್ 6 ರಂದು ಸಂತ್ರಸ್ತೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಬಾಲಕಿ ಅಪ್ರಾಪ್ತೆ ಎನ್ನುವ ವಿಷಯ ತಿಳಿದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡರು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.
ಒಂದು ತಿಂಗಳ ನಂತರ, ಜುಲೈ 6 ರಂದು, ಅಪ್ರಾಪ್ತ ವಯಸ್ಕಳನ್ನು ಆಸ್ಪತ್ರೆಯ ಆವರಣದಲ್ಲಿ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿ ಕುಟುಂಬದ ಸದಸ್ಯರು ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದರು. ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ತಾಂತ್ರಿಕ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿದರು. ಅಪ್ರಾಪ್ತ ವಯಸ್ಕನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ