Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕ ಪೊಲೀಸ್​​​ ಒಡಿಶಾದಲ್ಲಿ ಅರೆಸ್ಟ್!

ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕದ ಪೊಲೀಸರು ಒಡಿಶಾದಲ್ಲಿ ಅರೆಸ್ಟ್​ ಆಗಿರುವಂತಹ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಠಾಣೆ ಕಾನ್ಸ್‌ಸ್ಟೇಬಲ್​ ಆನಂದ್​ರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಇನ್ಸ್‌ಪೆಕ್ಟರ್‌ ಮಂಜುನಾಥ್ ಒಡಿಶಾಗೆ ತೆರಳಿದ್ದು, ಆನಂದ್ ಬಿಡುಗಡೆಗೆ ಕಾನೂನು ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. 

ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕ ಪೊಲೀಸ್​​​ ಒಡಿಶಾದಲ್ಲಿ ಅರೆಸ್ಟ್!
ಪ್ರಾತಿನಿಧಿಕ ಚಿತ್ರ
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2023 | 4:50 PM

ಆನೇಕಲ್​​, ನವೆಂಬರ್​​​​ 03: ಗಾಂಜಾ (ganja) ಪ್ರಕರಣ ಬೇಧಿಸಲು ಹೋದ ಕರ್ನಾಟಕದ ಪೊಲೀಸರು ಒಡಿಶಾದಲ್ಲಿ ಅರೆಸ್ಟ್​ ಆಗಿರುವಂತಹ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಠಾಣೆ ಕಾನ್ಸ್‌ಸ್ಟೇಬಲ್​ ಆನಂದ್​ರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ASI ಅಪ್ಪಾಜಿಗೌಡ, ಸಿಬ್ಬಂದಿ ಆನಂದ್, ಚನ್ನಬಸಪ್ಪ ಮತ್ತು ದೀಪು ತೆರಳಿದ್ದರು. ಫಾರೆಸ್ಟ್ ಒಳಗೆ ಮೊದಲು ತೆರಳಿದ್ದ ಜಿಗಣಿ ಕಾನ್ಸ್‌ಟೇಬಲ್ ಆನಂದ್​​, ಗಾಂಜಾ ಹಿಡಿದು ಹೊರಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ನಾವು ಪೊಲೀಸರು ಎಂದು ಹೇಳಿದರೂ ಒಡಿಶಾ ಪೊಲೀಸರು ಕೇಳಿಲ್ಲ. ಕಾನ್ಸ್‌ಟೇಬಲ್ ಆನಂದ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಬಂಧನ ಹಿನ್ನೆಲೆ ಜಿಗಣಿ ಇನ್ಸ್‌ಪೆಕ್ಟರ್‌ ಮಂಜುನಾಥ್ ಒಡಿಶಾಗೆ ತೆರಳಿದ್ದಾರೆ. ಆನಂದ್ ಬಿಡುಗಡೆಗೆ ಕಾನೂನು ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಡಿಡಿಪಿಐ ಕಚೇರಿಯಲ್ಲಿ 10 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗುತ್ತಿಗೆದಾರರ 

ಚಿಕ್ಕಮಗಳೂರು: ಗುತ್ತಿಗೆದಾರರ ಬಳಿ 2% ಕಮಿಷನ್​ಗೆ ಬೇಡಿಕೆ ಇಟ್ಟಿದ್ದ ಡಿಡಿಪಿಐ ಲೋಕಾಯುಕ್ತ ಬಲೆಗೆ ಬಿದಿರುವಂತಹ ಘಟನೆ ನಡೆದಿದೆ. ಲೋಕಾಯುಕ್ತ DYSP ತಿರುಮಲೇಶ್ ನೇತೃತ್ವದ ತಂಡದಿಂದ ದಾಳಿ ಮಾಡಿದ್ದು, ಡಿಡಿಪಿಐ ರಂಗನಾಥ್ ಸ್ವಾಮಿ, ದ್ವಿತೀಯ ದರ್ಜೆ ನೌಕರ ಅಸ್ರರ್ ಅಹ್ಮದ್ ಬಂಧನ ಮಾಡಲಾಗಿದೆ.

ಇದನ್ನೂ ಓದಿ: ದಾಂಪತ್ಯದಲ್ಲಿ ಕಲಹ: ಪೊಲೀಸರ ಸಂಧಾನಕ್ಕೆ ಒಪ್ಪದೆ ಆತ್ಮಹತ್ಯೆ ಮಾಡಿಕೊಂಡ ಪತಿ

ಡಿಡಿಪಿಐ ಕಚೇರಿಯಲ್ಲಿ 10,000 ರೂ. ಹಣ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಮೂಡಿಗೆರೆ ತಾಲೂಕಿನ ಹೆಸಗಲ್, ಕೊಲ್ಲಿಬೈಲ್, ಕಡೆಮಡ್ಕಲ್ ಸರ್ಕಾರಿ ಕಿರಿಯ ಶಾಲೆಯ ಶೌಚಾಲಯ ನಿರ್ಮಾಣದ ಹಣ ಬಿಡುಗಡೆಗಾಗಿ ಕಮಿಷನ್​​​ ಕೇಳಿದ್ದು, ಮೂಡಿಗೆರೆ ತಾಲೂಕಿನ ಗುತ್ತಿಗೆದಾರ ಸಲ್ಲಾವುದ್ದೀನ್​ನಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಮಂದಿರದಲ್ಲಿ ಕಳ್ಳತನಕ್ಕೆ ಯತ್ನ

ಉಡುಪಿ: ಶ್ರೀರಾಮ ಮಂದಿರಕ್ಕೆ ಕಳ್ಳತನಕ್ಕೆ ಬಂದ ಕಳ್ಳ ಬರಿಗೈಯಲ್ಲಿ ವಾಪಸ್ಸಾಗಿರುವಂತಹ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆದಿದೆ. ನಿನ್ನೆ ರಾತ್ರಿ 1:45 ರ ಸುಮಾರಿಗೆ ಬಾಗಿಲು ಒಡೆಯಲು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಹಣ ವಾಪಸ್ ಕೊಟ್ಟಿಲ್ಲವೆಂದು ಬೆಸ್ಕಾಂ ಗುತ್ತಿಗೆ ನೌಕರನ ಕಿಡ್ನಾಪ್

ಮಂದಿರದ ಬಾಗಿಲು ಒಡೆಯಲಾಗದೆ ಬರಿಗೈಯಲ್ಲಿ ವಾಪಸ್ಸಾಗಿದ್ದಾನೆ. ತಲೆಗೆ ಹೆಲ್ಮೆಟ್ ಧರಿಸಿ ಕಳ್ಳತನಕ್ಕೆ ಯತ್ನಿಸಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.