AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿಯಲ್ಲಿಯೂ ಮಂಗಳೂರು ರೀತಿಯ ಕೃತ್ಯ: ರೇಷನ್ ಕಾರ್ಡ್​​ಗೆ ಥಂಬ್ ಕೊಟ್ಟವರ ಖಾತೆಯಿಂದ ಹಣ ಮಾಯ

ಥಂಬ್ ಕೊಟ್ಟು ಬಂದವರ ಬ್ಯಾಂಕ್​ ಖಾತೆಗಳಿಂದ ಎರಡು ದಿನಗಳ ಬಳಿಕ ಹಣ ಮಾಯವಾಗಿದೆ. ಒಬ್ಬೊಬ್ಬರ ಬ್ಯಾಂಕ್ ಖಾತೆಯಿಂದ 10 ಸಾವಿರ ರೂಪಾಯಿ ಹಣ ಎಗರಿಸಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವನಹಳ್ಳಿ ಮತ್ತು ವಿಶ್ವನಾಥಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

ದೇವನಹಳ್ಳಿಯಲ್ಲಿಯೂ ಮಂಗಳೂರು ರೀತಿಯ ಕೃತ್ಯ: ರೇಷನ್ ಕಾರ್ಡ್​​ಗೆ ಥಂಬ್ ಕೊಟ್ಟವರ ಖಾತೆಯಿಂದ ಹಣ ಮಾಯ
ದೇವನಹಳ್ಳಿ: ರೇಷನ್ ಕಾರ್ಡ್​​ಗೆ ಥಂಬ್ ಕೊಟ್ಟವರ ಖಾತೆಯಿಂದ ಹಣ ಮಾಯ
ನವೀನ್ ಕುಮಾರ್ ಟಿ
| Edited By: |

Updated on: Nov 03, 2023 | 4:50 PM

Share

ದೇವನಹಳ್ಳಿ, ನವೆಂಬರ್ 3: ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡವರ ಆಧಾರ್ ಬಯೋಮೆಟ್ರಿಕ್​ಗೆ ಕನ್ನ ಹಾಕಿ ನಂತರ ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚಕರು (Cyber Fraudsters) ಹಣ ಎಗರಿಸಿದ ಪ್ರಕರಣ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ (Devanahalli) ಕೂಡ ಅಂಥದ್ದೇ ಘಟನೆ ವರದಿಯಾಗಿದೆ. ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ (Sub Registrar office) ಹಾಗೂ ರೇಷನ್ ಕಾರ್ಡ್​​ಗೆ ಥಂಬ್ ಕೊಟ್ಟು ಬಂದವರ ಬ್ಯಾಂಕ್ ಖಾತೆಗಳಿಂದ ಹಣಕ್ಕೆ ಕನ್ನ ಹಾಕಲಾಗಿದೆ.

ಥಂಬ್ ಕೊಟ್ಟು ಬಂದವರ ಬ್ಯಾಂಕ್​ ಖಾತೆಗಳಿಂದ ಎರಡು ದಿನಗಳ ಬಳಿಕ ಹಣ ಮಾಯವಾಗಿದೆ. ಒಬ್ಬೊಬ್ಬರ ಬ್ಯಾಂಕ್ ಖಾತೆಯಿಂದ 10 ಸಾವಿರ ರೂಪಾಯಿ ಹಣ ಎಗರಿಸಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವನಹಳ್ಳಿ ಮತ್ತು ವಿಶ್ವನಾಥಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

ಥಂಬ್ ಕೊಟ್ಟು ಬಂದಿದ್ದನ್ನು ದುರ್ಬಳಕೆ ಮಾಡಿಕೊಂಡು ಹಣ ಎಗರಿಸಿದ ಶಂಕೆ ವ್ಯಕ್ತವಾಗಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನಹಾಕಲಾಗಿದೆ. ಹಣ ಕಳೆದುಕೊಂಡು ಕಂಗಾಲಾದ ಜನರು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆಧಾರ್​​ ಫಿಂಗರ್​​ ಪ್ರಿಂಟ್​ಗೇ ಕನ್ನ, ಖಾತೆಯಿಂದ ಹಣ ವಿತ್​ಡ್ರಾ: ಮಂಗಳೂರಿನಲ್ಲಿ ಸೈಬರ್ ಚೋರರು ಹಣ ಎಗರಿಸುತ್ತಿದ್ದುದು ಹೀಗೆ

ಮಂಗಳೂರಿನಲ್ಲಿ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ನೋಂದಣಿ ಮಾಡಿ ಬಂದವರ ಫಿಂಗರ್ ಪ್ರಿಂಟ್ ಡೌನ್ ಲೋಡ್ ಮಾಡಿ ಸ್ಕ್ಯಾನ್ ಮಾಡುತ್ತಿದ್ದ ಸೈಬರ್ ವಂಚಕರು, ಅದನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳಿಗ್ಗೆ ಕನ್ನ ಹಾಕುತ್ತಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಬಿಹಾರ ಮೂಲದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಆರೋಪಿಗಳು ತೆಲಂಗಾಣ, ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಈ ರೀತಿಯ ಕೃತ್ಯ ಎಸಗಿದ್ದು ತನಿಖೆಯಿಂದ ತಿಳಿದುಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More