ಆಧಾರ್​​ ಫಿಂಗರ್​​ ಪ್ರಿಂಟ್​ಗೇ ಕನ್ನ, ಖಾತೆಯಿಂದ ಹಣ ವಿತ್​ಡ್ರಾ: ಮಂಗಳೂರಿನಲ್ಲಿ ಸೈಬರ್ ಚೋರರು ಹಣ ಎಗರಿಸುತ್ತಿದ್ದುದು ಹೀಗೆ

ಆರೋಪಿಗಳು ತೆಲಂಗಾಣ, ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲು ಸಾಕಷ್ಟು ಕಡೆ ಈ ರೀತಿ ಮಾಡಿದ್ದಾರೆ. ಒಂದು ತಿಂಗಳಲ್ಲಿ ಆರು ಜನರ ತಂಡ 20 ಲಕ್ಷ ರೂ. ಹಣ ಲಪಟಾಯಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಆಧಾರ್​​ ಫಿಂಗರ್​​ ಪ್ರಿಂಟ್​ಗೇ ಕನ್ನ, ಖಾತೆಯಿಂದ ಹಣ ವಿತ್​ಡ್ರಾ: ಮಂಗಳೂರಿನಲ್ಲಿ ಸೈಬರ್ ಚೋರರು ಹಣ ಎಗರಿಸುತ್ತಿದ್ದುದು ಹೀಗೆ
ಮಂಗಳೂರು ತಾಲೂಕು ಆಡಳಿತಸೌಧ
Follow us
| Updated By: ಗಣಪತಿ ಶರ್ಮ

Updated on: Oct 30, 2023 | 3:32 PM

ಮಂಗಳೂರು, ಅಕ್ಟೋಬರ್ 30: ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (Aadhaar Enabled Payment System) ಮೂಲಕ ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಬಿಹಾರ ಮೂಲದ ಮೂವರನ್ನು ಮಂಗಳೂರು ಪೊಲೀಸರು (Mangaluru Police) ಭಾನುವಾರ ಬಂಧಿಸಿದ್ದರು. ಇದೀಗ ಈ ಖದೀಮರು ಸಂತ್ರಸ್ತರ ಖಾತೆಯಿಂದ ಹೇಗೆ ಹಣ ವರ್ಗಾಯಿಸಿಕೊಂಡಿದ್ದರು ಎಂಬ ಆತಂಕಕಾರಿ ಮಾಹಿತಿ ಕೂಡ ಹೊರಬಿದ್ದಿದೆ. ಬಂಧಿತರ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದು, ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ ಮೂಲಕ ಈ ಕೃತ್ಯ ನಡೆಯುತ್ತಿತ್ತು. ಸಂತ್ರಸ್ತರ ಆಧಾರ್, ಥಂಬ್ ಬಳಸಿಕೊಂಡು ಹಣ ವಿತ್​​ಡ್ರಾ ಮಾಡುತ್ತಿದ್ದರು. ಫಿಂಗರ್ ಪ್ರಿಂಟ್ ಡೌನ್ ಲೋಡ್ ಮಾಡಿ ಸ್ಕ್ಯಾನ್ ಮಾಡ್ತಿದ್ದರು. ಪಿಒಎಸ್ ಮಷಿನ್ ಮೂಲಕ ಆಧಾರ್ ನಂಬರ್ ಫಿಂಗರ್ ಪ್ರಿಂಟ್ ಯೂಸ್ ಮಾಡಿ ಹಣ ವಿತ್​ಡ್ರಾ ಮಾಡುತ್ತಿದ್ದರು. ಎಲ್ಲಾ ದೂರಿನಲ್ಲೂ ಬಿಹಾರದ ಪೂಣ್ಯ ಎಂಬ ಜಾಗಕ್ಕೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳು ತೆಲಂಗಾಣ, ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲು ಸಾಕಷ್ಟು ಕಡೆ ಈ ರೀತಿ ಮಾಡಿದ್ದಾರೆ. ಒಂದು ತಿಂಗಳಲ್ಲಿ ಆರು ಜನರ ತಂಡ 20 ಲಕ್ಷ ರೂ. ಹಣ ಲಪಟಾಯಿಸಿದೆ. ನಮ್ಮ ಜಿಲ್ಲೆಯ 10 ಜನ ಸಂತ್ರಸ್ತರಿಗೆ 4 ಲಕ್ಷ ರೂ. ವಂಚನೆಯಾಗಿದೆ. ಆರೋಪಿಗಳ ಬ್ಯಾಂಕ್ ಅಕೌಂಟ್ ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಅದರಲ್ಲಿ ಮೂರು ಲಕ್ಷ ರೂಪಾಯಿಗೂ ಹೆಚ್ಚು ಹಣ ಇದೆ. ಮತ್ತೆ ನಮ್ಮ ತಂಡ ಬಿಹಾರಕ್ಕೆ ತೆರಳಲಿದೆ. ಈ ರೀತಿ ಹಣ ಕಳೆದುಕೊಂಡವರಿದ್ರೆ ಸೈಬರ್ ಕ್ರೈಂ ಠಾಣೆಗೆ ಬಂದು ದೂರು ನೀಡಬಹುದು. ಬಂಧಿತ ಆರೋಪಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲ. ಆದ್ರೆ ಕಡಿಮೆ ಅವಧಿಯಲ್ಲಿ ಈ ಎಲ್ಲಾ ಪ್ರಕ್ರಿಯೆ ತಿಳಿದುಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸೈಬರ್ ಚೋರರ ಕರಾಮತ್ತು: ನೋಂದಣಿದಾರರು ಬೇಸ್ತು

ಅಲ್ಲಿ ಆಸ್ತಿ ನೋಂದಣಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರೋ ಜನರ ಬ್ಯಾಂಕ್ ಖಾತೆಯಿಂದ ಹಣ ಮಂಗ ಮಾಯ ಆಗ್ತಿತ್ತು. ಆಸ್ತಿ ನೊಂದಣಿಗಾಗಿ ಇರುವ ಕಾವೇರಿ 2 ಸಾಫ್ಟ್​ವೇರ್​ಗೆ ಬಯೋ ಮೆಟ್ರಿಕ್ ಥಂಬ್ ನೀಡೋ ಜನರೇ ಟಾರ್ಗೆಟ್ ಆಗ್ತಿದ್ರು. ಹೀಗಾಗಿ ಹ್ಯಾಕರ್‌ಗಳು ಸರ್ಕಾರದ ಸರ್ವರ್‌ಗೇ ಕನ್ನ ಹಾಕಿ ಜನರ ಹಣ ಹೊಡೆಯುತ್ತಾ ಇದ್ದಾರಾ ಎಂಬ ಅನುಮಾನ ದಟ್ಟವಾಗಿ ಕಾಡಿತ್ತು. ಇದೀಗ ಆ ಅನುಮಾನ ನಿಜವಾಗಿದ್ದು ಹಣ ಲಪಟಾಯಿಸುತ್ತಿದ್ದ ಮೂವರು ಸೈಬರ್ ವಂಚಕರು ಪೊಲೀಸರ ಅತಿಥಿಯಾಗಿದ್ದಾರೆ.

ಕಳೆದ 6 ತಿಂಗಳ ಅವಧಿಯಲ್ಲಿ ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೋಂದಣಿ ಮಾಡಿದ್ದ ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಇದ್ದಕ್ಕಿದ್ದಂತೆ ಮಂಗಮಾಯವಾಗ್ತಿತ್ತು. ಅದರಲ್ಲೂ ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿದ್ದವು. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಚಾರಿಸಿದರೆ ಮುದ್ರಾಂಕ ಶುಲ್ಕ ಹೊರತುಪಡಿಸಿ ಬೇರೆ ಯಾವುದಕ್ಕೂ ಹಣ ಕಟ್ ಮಾಡ್ತಿಲ್ಲ ಎಂಬ ಉತ್ತರ ಬರ್ತಿತ್ತು. ಹೀಗಾಗಿ ಸಂತ್ರಸ್ತರು ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇಲೇರಿದ್ರು. ಪೊಲೀಸರು ಹಲವು ದೂರು ಸ್ವೀಕರಿಸಿ ಒಟ್ಟು 10 ಎಫ್.ಐ.ಆರ್ ಕೂಡಾ ದಾಖಲಿಸಿದ್ರು. ಈ ಪ್ರಕರಣದ ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಇದೀಗ ಇದರ ಹಿಂದಿರುವ ಖತರ್ನಾಕ್ ವಂಚಕರನ್ನು ಖೆಡ್ಡಾಕ್ಕೆ ಕೆಡವಿದೆ.

ವೆಬ್‌ಸೈಟ್‌ನ್ನೇ ಹ್ಯಾಕ್ ಮಾಡಿದ್ದ ಖದೀಮರು

ಆಸ್ತಿ ನೊಂದಣಿ ಮಾಡಬೇಕಾದ್ರೆ 2 ಬಾರಿ ಥಂಬ್​ ನೀಡಬೇಕಾಗುತ್ತೆ. ಒಮ್ಮೆ ಕಾವೇರಿ 2.0 ನಲ್ಲಿ ಹಾಗೂ ಮತ್ತೊಮ್ಮೆ ಮುದ್ರಾಂಕ ಶುಲ್ಕ ಕಟ್ಟಲು ಬಯೋ ಮೆಟ್ರಿಕ್ ಬಳಸಲಾಗುತ್ತೆ. ಇದೇ ಅವಕಾಶವನ್ನು ಬಳಸಿಕೊಂಡ ಈ ಸೈಬರ್ ಖದೀಮರು ಕಾವೇರಿ-2.0 ವೆಬ್‌ಸೈಟ್‌ನ್ನೆ ಹ್ಯಾಕ್ ಮಾಡಿದ್ದರು. ವೆಬ್‌ಸೈಟ್‌ನಿಂದ ಅಕ್ರಮವಾಗಿ ದಾಖಲಾತಿಗಳನ್ನು ಎಗರಿಸಿ, ತಮ್ಮ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ತಿದ್ರು. ಆಂಧ್ರಪ್ರದೇಶ ಸೇರಿ ಕೆಲ ರಾಜ್ಯಗಳ 300ಕ್ಕೂ ಹೆಚ್ಚು ಪತ್ರಗಳ ಪಿಡಿಎಫ್ ಪ್ರತಿ ಸಂಗ್ರಹಿಸಿಟ್ಟಿರುವುದು ಸಹ ಗೊತ್ತಾಗಿದೆ.

ಇದನ್ನೂ ಓದಿ: ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಮೂವರ ಸೆರೆ

ಆಸ್ತಿ ನೋಂದಣಿಯಲ್ಲಿ ಕ್ರಾಂತಿಕಾರಕ ಬದಲಾವಣೆಯ ಆಶಯದೊಂದಿಗೆ ಬಂದ ಕಾವೇರಿ 2.0 ವೆಬ್‌ಸೈಟ್‌ನ್ನೇ ಹ್ಯಾಕ್‌ ಮಾಡಿರೋದು ಸರ್ಕಾರಕ್ಕೆ ಸವಾಲು ಎಸೆದಂತಾಗಿದೆ. ಇನ್ನಾದ್ರೂ ಸೈಬರ್ ಚೋರರ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಿದೆ. ಸಾರ್ವಜನಿಕರು ಕೂಡ ಬಹಳಷ್ಟು ಎಚ್ಚರ ವಹಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’