AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dabaspet: ದಾಬಸ್ ಪೇಟೆಯ ವನಕಲ್ಲು ಮಠದಲ್ಲಿ 6ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಈ ಪ್ರಕರಣದಲ್ಲಿ ಪ್ರತಿಕ್ರಿಯಿಸಿದ ಮಠದ ಸ್ವಾಮೀಜಿಗಳಾದ ಬಸವ ರಮಾನಂದ ಸ್ವಾಮೀಜಿ ಅವರು ಎಲ್ಲಾ ಮಕ್ಕಳು ಮಠಗಳಲ್ಲಿ ಶ್ರಮದಾನ ಮಾಡೋದು ಸಾಮಾನ್ಯ. ಅಜಯ್ ಒಳ್ಳೆಯ ವಿದ್ಯಾರ್ಥಿ, ಆತನ ಸಾವಿಗೆ ನಿಖರ ಕಾರಣ ತಿಳಿದಿಲ್ಲ, ಆತನ ಸಾವು ನಮಗೂ ನೋವು ತಂದಿದೆ ಎಂದಿದ್ದಾರೆ.

Dabaspet: ದಾಬಸ್ ಪೇಟೆಯ ವನಕಲ್ಲು ಮಠದಲ್ಲಿ 6ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ದಾಬಸ್ ಪೇಟೆಯ ವನಕಲ್ಲು ಮಠದಲ್ಲಿ 6ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​|

Updated on:Nov 04, 2023 | 2:38 PM

Share

ಆತ ಬಾಲ್ಯದಿಂದಲೂ ಮಠದಲ್ಲೇ ಓದುತ್ತಿದ್ದ, ಆತನ ಅಣ್ಣ ಸಹ ಇದೇ ಮಠದಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದ.‌ ಆದ್ರೆ ಆತ ಮೊನ್ನೆ ಗುರುವಾರ ಶಾಲೆಗೆ ಹೋಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಫೋಟೋದಲ್ಲಿರುವ ಈ ಬಾಲಕನ ಹೆಸರು ಅಜಯ್ ಕುಮಾರ್, 12 ವರ್ಷ ವಯಸ್ಸಿನ ಅಜಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ( nelamangala) ತಾಲ್ಲೂಕಿನ ದಾಬಸ್ ಪೇಟೆಯ ವನಕಲ್ಲು ಮಲ್ಲೇಶ್ವರ ಮಠದಲ್ಲಿ (Vanakallu mata) 6ನೇ ತರಗತಿಯಲ್ಲಿ (student) ಓದುತ್ತಿದ್ದ ಅಜಯ್ ಮಠದ ಹಿಂಭಾಗದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾನೆ.

ನನ್ನ ಮಗನಿಗೆ ನವೆಂಬರ್ ಒಂದರಂದು ರಜೆ ನೀಡಿ ಮನೆಗೆ ಕಳಿಸಿರಲಿಲ್ಲ, ಮಠದಲ್ಲಿ ಹಸು ಮೇಯಿಸಲು ಕಳಿಸಿದ್ದಾರೆ. ಹೀಗಾಗಿ ನನ್ನ ಮಗ ಮನನೊಂದಿದ್ದ, ಅಷ್ಟೆ ಅಲ್ಲ ನನ್ನ ಮಗನನ್ನ ಯಾರೋ ಹೊಡೆದು ಸಾಯಿಸಿದ್ದಾರೆ ಎಂದು ಅಜಯ್ ತಾಯಿ ಆರೋಪಿಸಿದ್ದಾರೆ. ಆದ್ರೆ ಅದೇ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಜಯ್ ನ ಅಣ್ಣ ಮಂಜುನಾಥ್ ಆತನ ಬಗ್ಗೆ ಒಳ್ಳೆ ಮಾತುಗಳನ್ನ ಆಡಿದ್ದಾನೆ. ಎಂದಿನಂತೆ ಚೆನ್ನಾಗಿ ಓದುತ್ತಿದ್ದ, ಈ ಘಟನೆ ಹಿಂದೆ ಯಾವ್ದು ಕೈವಾಡ ಇಲ್ಲ, ಆದ್ರೆ ಆತ ಏನಕ್ಕೆ ಹೀಗೆ ಮಾಡ್ಕೊಂಡಿದ್ದಾನೆ ಅನ್ನೋದು ಗೊತ್ತಿಲ್ಲ ಎಂದಿದ್ದಾನೆ.

Also Read: ಟ್ರಾಕ್ಟರ್ ಉಳುಮೆ ಮಾಡುವಾಗ ತೋಟದಲ್ಲಿ ಪತ್ತೆಯಾಯ್ತು ಮೃತ ದೇಹ, ದಂಗಾದ ರೈತ, ಮುಂದೇನಾಯ್ತು?

ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನ ಮಠದ ಬಳಿಗೆ ತೆಗೆದುಕೊಂಡು ಹೋಗಲು ಒತ್ತಾಯಿಸಿದ್ದಾರೆ, ಆದ್ರೆ ಈ ವೇಳೆ ಮಠದ ಬಳಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಆಗುವ ನೆಪವೊಡ್ಡಿ ಡಾಬಸ್‌ಪೇಟೆ ಪೊಲೀಸರು ಮಠದ ಬಳಿಗೆ ಶವವನ್ನು ತೆಗೆದುಕೊಂಡು ಹೋಗದಂತೆ ತಡೆಹಿಡಿದಿದ್ದಾರೆ. ಈ ಪ್ರಕರಣದಲ್ಲಿ ಪ್ರತಿಕ್ರಿಯಿಸಿದ ಮಠದ ಸ್ವಾಮೀಜಿಗಳಾದ ಬಸವ ರಮಾನಂದ ಸ್ವಾಮೀಜಿ ಅವರು ಎಲ್ಲಾ ಮಕ್ಕಳು ಮಠಗಳಲ್ಲಿ ಶ್ರಮದಾನ ಮಾಡೋದು ಸಾಮಾನ್ಯ. ಅಜಯ್ ಒಳ್ಳೆಯ ವಿದ್ಯಾರ್ಥಿ, ಆತನ ಸಾವಿಗೆ ನಿಖರ ಕಾರಣ ತಿಳಿದಿಲ್ಲ, ಆತನ ಸಾವು ನಮಗೂ ನೋವು ತಂದಿದೆ ಎಂದಿದ್ದಾರೆ.

ಅಜಯನ ತಾಯಿಯು ಆತನ ತಂದೆ ಸತ್ತ ಮೇಲೆ ಬೇರೊಬ್ಬರ ಜೊತೆ ಇದಾರಂತೆ. ಇತ್ತ ಮಠದಲ್ಲಿ ಓದಿನ ಜೊತೆಯಲ್ಲಿ ಮಠದಲ್ಲಿ ಮೈಮುರಿಯೋ ಕೆಲಸ. ಹಾಗಾಗಿ ಬಾಲಕ ಖಿನ್ನತೆಗೊಳಗಾಗಿ ಸಾವನ್ನಪ್ಪಿರಬಹುದೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಸದ್ಯ ಘಟನೆಗೆ ಸಂಬಂಧಿಸಿದಂತೆ ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅದೇನೆ ಇರಲಿ ಮಠದಲ್ಲಿ ನಡೆದ ಸಾವಿನ ಬಗ್ಗೆ ಅನುಮಾನಗಳು ಸೃಷ್ಟಿಯಾಗಿದ್ದು, ಪೊಲೀಸರ ನೈಜ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬೀಳಬೇಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:36 pm, Sat, 4 November 23

ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ