ಬಾಲಸೋರ್: ಒಡಿಶಾದಲ್ಲಿ ನಡೆದ ಭೀಕರ ರೈಲು (Odisha Train Accident) ದುರಂತದಿಂದ ಮತ್ತೆ ರೈಲ್ವೆ ಇಲಾಖೆ ಚೇತರಿಸಿಕೊಂಡಿದೆ, ರೈಲು ಅಪಘಾತದಿಂದ ಅಸ್ಥವ್ಯಸ್ಥವಾಗಿದ್ದ ರೈಲು ಹಳಿಗಳುನ್ನು ಮತ್ತೆ ಮರುಜೋಡಾನೆ ಮಾಡಲಾಗಿದೆ. ಇದೀಗ ಈ ಹಳಿಯಲ್ಲಿ ಮೊದಲ ಹೌರಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ 9:30 ರ ಸುಮಾರಿಗೆ ಬಹನಾಗಾ ಬಜಾರ್ ನಿಲ್ದಾಣವನ್ನು ದಾಟಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತ ಸ್ಥಳದಲ್ಲಿದ್ದು ವಂದೇ ಭಾರತ್ ಎಕ್ಸ್‌ಪ್ರೆಸ್ ಚಾಲಕರಿಗೆ ಕೈ ಬೀಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪ್ ಲೈನ್ ಮತ್ತು ಡೌನ್ ಲೈನ್ ಟ್ರ್ಯಾಕ್‌ಗಳ ಮರುಸ್ಥಾಪನೆ ಕಾರ್ಯವು ಭಾನುವಾರ ರಾತ್ರಿ ಪೂರ್ಣಗೊಂಡಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಭಾನುವಾರ ರಾತ್ರಿ 10.40ರ ಸುಮಾರಿಗೆ ವೈಜಾಗ್ ಬಂದರಿನಿಂದ ರೂರ್ಕೆಲಾ ಸ್ಟೀಲ್ ಪ್ಲಾಂಟ್‌ಗೆ ಕಲ್ಲಿದ್ದಲು ತುಂಬಿದ ಸರಕು ಸಾಗಣೆ ರೈಲು ಹಳಿ ಮೇಲೆ ಓಡಿದೆ. ಅದೇ ಹಳಿಯಲ್ಲಿ ಗೂಡ್ಸ್ ರೈಲು ಕೂಡ ಸಂಚಾರಿಸಿದೆ. ರೈಲುಗಳು ಅಪಘಾತ ನಡೆದ ಸ್ಥಳದಲ್ಲಿ ಎಲ್ಲ ರೈಲುಗಳು ನಿಧಾನ ವೇಗದಲ್ಲಿ ಹಾದು ಹೋಗುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Odisha Train Accident: ಒಡಿಶಾದ ರೈಲ್ವೆ ಟ್ರ್ಯಾಕ್‌ಗಳ ಮೇಲೆ ಜನರಂತೆಯೇ ಅನಾಥವಾಗಿ ಬಿದ್ದಿದ್ದವು, ಬೆಂಗಾಲಿ ಕವಿತೆಯ ಸಾಲುಗಳು
ಒಡಿಶಾದ ಬಾಲಸೋರ್ನಲ್ಲಿ ಜೂ.2 ನಡೆದ ರೈಲು ಅಪಘಾತವು ಒಂದು. ಈ ರೈಲು ದುರಂತದಲ್ಲಿ 233ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು. 900ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿತ್ತು. ಅಧಿಕಾರಿಗಳು, ಸೇನೆಗಳು, ಜನರು ಅನೇಕರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಅಲ್ಲಿ ಡಿಕ್ಕಿ ಹೊಡೆದ ರೈಲು ಭಾಗಗಳನ್ನು ತೆಗೆದು ಹೊಸ ಹಳಿಗಳನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಹಳಿಯಲ್ಲಿ ರೈಲುಗಳು ಸಂಚಾರ ಮಾಡುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Mon, 5 June 23