Odisha Train Accident: ಒಡಿಶಾದ ರೈಲ್ವೆ ಟ್ರ್ಯಾಕ್​ಗಳ​ ಮೇಲೆ ಜನರಂತೆಯೇ ಅನಾಥವಾಗಿ ಬಿದ್ದಿದ್ದವು, ಬೆಂಗಾಲಿ ಕವಿತೆಯ ಸಾಲುಗಳು

ಅಪಘಾತಗಳು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಮರೆಯಲಾಗದ ಕೆಲವು ಕಥೆಗಳನ್ನು ಉಳಿಸಿಬಿಡುತ್ತದೆ. ಒಡಿಶಾದ ಬಾಲಸೋರ್​ನಲ್ಲಿ ನಡೆದ ತ್ರಿವಳಿ ರೈಲು ಅಪಘಾತಗಳು ಇಂತಹ ನೂರಾರು ನೆನಪುಗಳು ಬೀಡುಬಿಡುವಂತೆ ಮಾಡಿದೆ.

Odisha Train Accident: ಒಡಿಶಾದ ರೈಲ್ವೆ ಟ್ರ್ಯಾಕ್​ಗಳ​ ಮೇಲೆ ಜನರಂತೆಯೇ ಅನಾಥವಾಗಿ ಬಿದ್ದಿದ್ದವು, ಬೆಂಗಾಲಿ ಕವಿತೆಯ ಸಾಲುಗಳು
ಬೆಂಗಾಲಿ ಕವಿತೆಗಳು
Follow us
ನಯನಾ ರಾಜೀವ್
|

Updated on: Jun 05, 2023 | 11:01 AM

ಅಪಘಾತಗಳು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಮರೆಯಲಾಗದ ಕೆಲವು ಕಥೆಗಳನ್ನು ಉಳಿಸಿಬಿಡುತ್ತದೆ. ಒಡಿಶಾದ ಬಾಲಸೋರ್​ನಲ್ಲಿ ನಡೆದ ತ್ರಿವಳಿ ರೈಲು ಅಪಘಾತಗಳು ಇಂತಹ ನೂರಾರು ನೆನಪುಗಳು ಬೀಡುಬಿಡುವಂತೆ ಮಾಡಿದೆ. ಅಪಘಾತದ ದೃಶ್ಯಗಳು ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ, ಎಲ್ಲಿ ನೋಡಿದರೂ ಪ್ರಯಾಣಿಕರ ಮೃತದೇಹಗಳೇ ಕಾಣುತ್ತಿದ್ದವು. ಅಳುತ್ತಿದ್ದ ಪ್ರಯಾಣಿಕರ ಕಣ್ಣುಗಳು ತಮ್ಮ ಜನರನ್ನು ನೋಡಲು ಹಾತೊರೆಯುತ್ತಿದ್ದವು. ಇದರ ನಡುವೆ ಟ್ರ್ಯಾಕ್​ಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬೆಂಗಾಲಿ ಭಾಷೆಯ ಕವನಗಳು ಗಮನ ಸೆಳೆದಿವೆ. ರೈಲ್ವೆ ಟ್ರ್ಯಾಕ್​ಗಳಲ್ಲಿ ಬೆಂಗಾಲಿ ಭಾಷೆಯ ಕವಿತೆಗಳು ಸಿಕ್ಕಿವೆ. ಖಂಡಿತವಾಗಿಯೂ ಕವನ ಪ್ರೇಮಿ ಅದನ್ನು ಓದುತ್ತಾ ಪ್ರಯಾಣಿಸುತ್ತಿದ್ದ ಎಂದೆನಿಸುತ್ತದೆ.

ಹಳಿಗಳ ಮೇಲೆ ಬಿದ್ದಿರುವ ಪುಟಗಳಲ್ಲಿ ಮೀನುಗಳು ಮತ್ತು ಆನೆಗಳ ಚಿತ್ರಗಳು ಕಂಡುಬಂದಿವೆ. ಒಂದು ಪುಟದಲ್ಲಿ ನವಿಲಿನ ಚಿತ್ರವೂ ಇತ್ತು. ಪ್ರತಿ ಚಿತ್ರದ ಮುಂದೆ ಒಂದು ಕವಿತೆ ಬರೆಯಲಾಗಿತ್ತು. ಒಂದು ಪುಟದಲ್ಲಿ ಗುಲಾಬಿ ಹೂವೊಂದು ಬಿಡಿಸಿರುವುದು ಕಂಡು ಬಂತು. ಟ್ರ್ಯಾಕ್‌ಗಳಲ್ಲಿ ಅಲ್ಲಲ್ಲಿ ಕಂಡುಬರುವ ಈ ಪುಟಗಳು ಈಗ ಯಾವುದೇ ಪ್ರಾಮುಖ್ಯತೆಯನ್ನು ಹೊಂದಿಲ್ಲವಾದರೂ, ಅವು ಖಂಡಿತವಾಗಿಯೂ ಪ್ರಯಾಣವನ್ನು ವಿವರಿಸುತ್ತಿವೆ.

ಮತ್ತಷ್ಟು ಓದಿ: Odisha Train Accident: ಆಸ್ಪತ್ರೆಯಲ್ಲಿ ಹೆಣಗಳ ರಾಶಿ, ಮೃತರ ಗುರುತು ಪತ್ತೆ ಹಚ್ಚಲು ಸಂಬಂಧಿಕರ ಹರಸಾಹಸ

ಬೆಂಗಾಲಿ ಭಾಷೆಯಲ್ಲಿ ಬರೆದ ಕೆಲವು ಕವಿತೆಗಳು ಹೀಗಿವೆ, ಆಲ್ಪೋ ಅಲ್ಪೋ ಮೇಘ್ ಥೇಕೆ ಹಲ್ಕಾ ಬ್ರಿಸ್ಟಿ ಹೋಯ್, ಛೋಟೋ ಚೋಟೋ ಗೋಲ್ಪೋ ಥೇಕೆ ಭಲೋಬಾಸ ಸೃಷ್ಟಿ ಹೋಯ್. ಡೈರಿಯಲ್ಲಿ ಬರೆದ ಕವನಗಳ ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕವನಗಳ ಸಾಲುಗಳೇನೋ ಪೂರ್ಣವಾಗಿವೆ, ಆದರೆ ಅವುಗಳನ್ನು ಓದುವ ವ್ಯಕ್ತಿಯ ಪ್ರಯಾಣವು ಅಪೂರ್ಣವಾಗಿ ಉಳಿದಿರಬಹುದು. ಆಗ ಪೊಲೀಸ್ ಅಧಿಕಾರಿಗಳು ಯಾರಾದರೂ ಹಿಂತಿರುಗಿ ಬಂದು ನನ್ನ ಡೈರಿ ನಿಮಗೆ ಸಿಕ್ಕಿದೆಯೇ ಎಂದು ಕೇಳಬಹುದು ಎಂಬ ಭರವಸೆಯಿಂದ ಅದನ್ನು ಇರಿಸಿಕೊಂಡಿದ್ದಾರೆ.

ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ 275 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವೇಗವಾಗಿ ಬರುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ಹಳಿತಪ್ಪಿ ಅದರ ಬೋಗಿಗಳು ಲೂಪ್ ಲೈನ್ ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ರೈಲಿನ ಹಿಂಬದಿ ಹಾದು ಹೋಗುತ್ತಿದ್ದ ಯಶವಂತಪುರ ಎಕ್ಸ್ ಪ್ರೆಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್