ದೆಹಲಿಯ ಮದರಸಾದಲ್ಲಿ ಅಗ್ನಿ ಅವಘಡ, 3 ಸಿಲಿಂಡರ್ ಸ್ಫೋಟ, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಾಯದಿಂದ ಪಾರು
ದೆಹಲಿಯ ಜಗತ್ಪುರಿ ಪ್ರದೇಶದ ನ್ಯೂ ಬ್ರಿಜ್‌ಪುರಿಯಲ್ಲಿರುವ ಮದರಸಾದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ಮೀಟರ್ ಬೋರ್ಡ್ನಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದ್ದು, ಬಳಿಕ ಕಟ್ಟಡಕ್ಕೆ ಬೆಂಕಿ ಹೊತ್ತಿ 3 ಸಿಲಿಂಡರ್‌ಗಳು ಸ್ಫೋಟಗೊಂಡಿವೆ.
ದೆಹಲಿಯ ಜಗತ್ಪುರಿ ಪ್ರದೇಶದ ನ್ಯೂ ಬ್ರಿಜ್‌ಪುರಿಯಲ್ಲಿರುವ ಮದರಸಾದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ಮೀಟರ್ ಬೋರ್ಡ್ನಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದ್ದು, ಬಳಿಕ ಕಟ್ಟಡಕ್ಕೆ ಬೆಂಕಿ ಹೊತ್ತಿ 3 ಸಿಲಿಂಡರ್‌ಗಳು ಸ್ಫೋಟಗೊಂಡಿವೆ. 17 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪಿದವು. ಇಕ್ಕಟ್ಟಾದ ರಸ್ತೆಯಿಂದಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಲು ಪರದಾಡಬೇಕಾಯಿತು. ಸಿಲಿಂಡರ್ ಸ್ಫೋಟದಿಂದಾಗಿ ಅಗ್ನಿಶಾಮಕ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಈ ಮದರಸಾದಲ್ಲಿ ಹಾಸ್ಟೆಲ್ ಕೂಡ ಇತ್ತು ಎಂದು ಅಗ್ನಿಶಾಮಕ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ. ಸುಮಾರು 100 ಹುಡುಗಿಯರು ಮತ್ತು ಶಿಕ್ಷಕರು ಇಲ್ಲಿ ಉಪಸ್ಥಿತರಿದ್ದರು. ಎಲ್ಲರನ್ನು ರಕ್ಷಿಸಿ ಅಲ್ಲಿಂದ ಹೊರ ತೆಗೆಯಲಾಯಿತು. ಇಲ್ಲಿಯವರೆಗೆ 3 ಸಿಲಿಂಡರ್ ಸ್ಫೋಟಗಳು ವರದಿಯಾಗಿವೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಆ ಪ್ರದೇಶದ ಕಾರ್ಪೊರೇಟರ್ ರಾಜು ಸಾಯಿ ತಿಳಿಸಿದ್ದಾರೆ. ಮದರಸಾದಲ್ಲಿ ಓದುತ್ತಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಸ್ಥಳೀಯ ನದೀಮ್ ಎಂಬುವರು ತಮ್ಮ ಮನೆ ಮದರಸಾದ ಪಕ್ಕದಲ್ಲಿದೆ ಎಂದು ಹೇಳಿದರು. ಬೆಂಕಿಯನ್ನು ನಂದಿಸುವಾಗ ಎರಡು ದೊಡ್ಡ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರದೀಪ್ ಮತ್ತು ರಿಯಾಜುದ್ದೀನ್ ಅವರಿಗೆ ಸುಟ್ಟ ಗಾಯಗಳಾಗಿವೆ.
ಮತ್ತಷ್ಟು ಓದಿ: ಖಾಲಿ ಜಮೀನಿನಲ್ಲಿ ಕಾಣಿಸಿಕೊಂಡ ಅಗ್ನಿ, ಆವಲಹಳ್ಳಿ ಪೊಲೀಸ್ ಠಾಣೆ ಕೊಠಡಿಗೆ ಆವರಿಸಿದ ಬೆಂಕಿಯ ಕೆನ್ನಾಲಿಗೆ
ಇಬ್ಬರನ್ನೂ ಚಿಕಿತ್ಸೆಗಾಗಿ ಹೆಡಗೇವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಎರಡೂವರೆ ಗಂಟೆಗಳ ಹೋರಾಟದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಸದ್ಯ ತಡರಾತ್ರಿವರೆಗೂ ಕೂಲಿಂಗ್ ಕೆಲಸ ನಡೆದಿದೆ.
ಮದರಸಾದ ಮಾಲೀಕ ಮೊಹಮ್ಮದ್ ಇರ್ಫಾನ್ ಮಾತನಾಡಿ, ಅಧ್ಯಯನದ ಹೊರತಾಗಿ, ದೆಹಲಿಯ ವಿವಿಧ ಪ್ರದೇಶಗಳ ಸುಮಾರು 100 ಹೆಣ್ಣುಮಕ್ಕಳು ಸಹ ಇಲ್ಲಿ ವಾಸಿಸುತ್ತಿದ್ದಾರೆ. ಅವರ ಊಟ-ತಿಂಡಿಗಳ ವ್ಯವಸ್ಥೆಯನ್ನೂ ಮದರಸಾದಲ್ಲಿಯೇ ಮಾಡಲಾಗುತ್ತದೆ. ಮದರಸದ ನೆಲ ಮಹಡಿಯಲ್ಲಿ ಅಡುಗೆ ಮನೆ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ