ಮಕ್ಕಳ ಭಾಗ್ಯ ಕರುಣಿಸುವ ಈ ದತ್ತು ಕೇಂದ್ರದಲ್ಲಿ, ಮಕ್ಕಳನ್ನು ನಡೆಸಿಕೊಳ್ಳುವ ರೀತಿಗೆ ಬೆಚ್ಚಿ ಬಿದ್ದ ಜನ
ಸಂತಾನ ಭಾಗ್ಯವಿಲ್ಲದವರಿಗೆ ಮಕ್ಕಳನ್ನು ಕರುಣಿಸುವ ದತ್ತು ಕೇಂದ್ರ(ಅನಾಥ ಮಕ್ಕಳ ಆಶ್ರಯ ಧಾಮ)ದಲ್ಲಿ ಮಕ್ಕಳ ಜತೆ ಕ್ರೂರ ಪ್ರಾಣಿಯಂತೆ ವರ್ತಿಸಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಅಲ್ಲಿಯ ನಿರ್ವಾಹಕಿ ಸೀಮಾ ದ್ವಿವೇದಿ ಮಗುವೊಂದನ್ನು ಥಳಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಜನರು ಛೀಮಾರಿ ಹಾಕುತ್ತಿದ್ದಾರೆ
ಸಂತಾನ ಭಾಗ್ಯವಿಲ್ಲದವರಿಗೆ ಮಕ್ಕಳನ್ನು ಕರುಣಿಸುವ ದತ್ತು ಕೇಂದ್ರ(ಅನಾಥ ಮಕ್ಕಳ ಆಶ್ರಯ ಧಾಮ)ದಲ್ಲಿ ಮಕ್ಕಳ ಜತೆ ಕ್ರೂರ ಪ್ರಾಣಿಯಂತೆ ವರ್ತಿಸಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಅಲ್ಲಿಯ ನಿರ್ವಾಹಕಿ ಸೀಮಾ ದ್ವಿವೇದಿ ಮಗುವೊಂದನ್ನು ಥಳಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಜನರು ಛೀಮಾರಿ ಹಾಕುತ್ತಿದ್ದಾರೆ. ಎಷ್ಟೋ ಮಂದಿ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದಾರೆ, ಇದರ ನಡುವೆ ಏನೂ ಅರಿಯದ ಮುಗ್ಧ ಜೀವಕ್ಕೆ ಥಳಿಸಿ ಚಿತ್ರಹಿಂಸೆ ನೀಡುವುದು ವಿಡಿಯೋದಲ್ಲಿ ನೋಡಬಹುದು. ಆಕೆ ಮಗುವಿನ ಕೂದಲನ್ನು ಹಿಡಿದು ಎತ್ತಿ ನೆಲದ ಮೇಲೆ ಎಸೆಯುತ್ತಾಳೆ. ಇದೀಗ ಸೀಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ಮಗುವನ್ನು ನೆಲಕ್ಕೆ ಎಸೆದು ಬಳಿಕ ಕೈ ಹಿಡಿದು ಮೇಲಕ್ಕೆತ್ತಿ ಹಾಸಿಗೆಯ ಮೇಲೆ ಎಸೆದಿದ್ದಾಳೆ, ಎರಡು ಆಯಾಗಳು ಅಲ್ಲಿ ಇದ್ದರೂ ಕೂಡ ತಡೆಯುವ ಧೈರ್ಯವನ್ನು ಯಾರೂ ಮಾಡಿಲ್ಲ. ಈ ರೀತಿಯ ದತ್ತು ಕೇಂದ್ರಗಳಲ್ಲಿ ಮಕ್ಕಳು ಜೀವವನ್ನು ಬಿಗಿ ಹಿಡಿದುಕೊಂಡು ಬದುಕಬೇಕಾಗುತ್ತದೆ. 6 ವರ್ಷದೊಳಗಿನ ಮಕ್ಕಳನ್ನು ಈ ದತ್ತು ಕೇಂದ್ರದಲ್ಲಿ ಇರಿಸಲಾಗಿದೆ. ಆ ಮ್ಯಾನೇಜರ್ಗೆ ಓರ್ವ ಗೆಳಯನಿದ್ದು ನಿತ್ಯವೂ ಆತನ ಅಲಲ್ಇಗೆ ಬರುತ್ತಾನೆ, ಆತನ ಜತೆಗೆ ಜಗಳವಾಡಿದಾಗಲೆಲ್ಲಾ ಆಕೆ ಕೋಪವನ್ನು ಮಕ್ಕಳ ಮೇಲೆ ತೀರಿಸಿಕೊಳ್ಳುತ್ತಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಮಕ್ಕಳಿಗೆ ಸಿಹಿತಿಂಡಿ, ಆಹಾರ, ಹಣ್ಣು, ಒಣ ಹಣ್ಣು, ನಗದು ನೀಡಿ ಹಲವು ಸಾಮಾಜಿಕ ಸಂಘಟನೆಗಳು ದತ್ತು ಸ್ವೀಕಾರ ಕೇಂದ್ರಕ್ಕೆ ತೆರಳುತ್ತವೆ. ಇದರಲ್ಲಿ ಶೇ.50ರಷ್ಟನ್ನು ಅವರೇ ಇಟ್ಟುಕೊಳ್ಳುತ್ತಾರೆ, ಮಕ್ಕಳ ವರೆಗೆ ತಲುಪುವುದೇ ಇಲ್ಲ. ಭಾವೀ ದತ್ತು ತಂದೆ-ತಾಯಂದಿರು ಕಾನೂನುಬದ್ಧವಾಗಿ ಒಂದು ಮಗುವಿನ ಜವಾಬ್ದಾರಿ, ಆ ಮಗುವಿನ ಹಕ್ಕುಗಳು, ಸವಲತ್ತುಗಳು, ಮತ್ತು ಜವಾಬ್ದಾರಿಗಳ ಸಹಿತ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ದತ್ತು ಸ್ವೀಕಾರ ಎನ್ನುತ್ತಾರೆ. ಕಾನೂನಿನ ಔಪಚಾರಿಕತೆಗಳು ಮುಗಿದ ಮೇಲೆ ಆ ಮಗು ಶಾಶ್ವತವಾಗಿ ತನ್ನ ಜೈವಿಕ ತಂದೆ-ತಾಯಂದಿರಿಂದ ಬೇರೆಗೊಂಡು, ತನ್ನ ದತ್ತು ತಂದೆ-ತಾಯಂದಿರ ಮಗು ಎಂದು ಕರೆಯಲ್ಪಡುತ್ತದೆ.
कांकेर की इस जल्लाद महिला को देखिये
कांकेर के प्रतिज्ञा विकास संस्थान की यह तस्वीर आपको विचलित कर देगी। महिला का नाम सीमा द्विवेदी है, जो अनाथ बच्चों के साथ इस तरह का बर्ताव कर रही है। :@ranutiwari_17 pic.twitter.com/y48ZXKN2wV
— Bastar Talkies (@BastarTalkies) June 5, 2023
ನೀವು ಹಿಂದೂ, ಬೌದ್ಧ, ಜೈನ, ಅಥವಾ ಸಿಖ್ ಆಗಿದ್ದಲ್ಲಿ (ಸಾಮೂಹಿಕವಾಗಿ ಈ ಸಮುದಾಯಗಳನ್ನು ಕಾನೂನು “ಹಿಂದೂ” ಎಂದು ಪರಿಗಣಿಸುತ್ತದೆ), ಹಿಂದೂ ದತ್ತು ಸ್ವೀಕಾರ ಕಾನೂನು ಎಂದು ಕರೆಯಲ್ಪಡುವ “ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, 1956 ನಿಮಗೆ ಅನ್ವಯಿಸುತ್ತದೆ. ಈ ಕಾಯಿದೆ, ಹಿಂದೂ ಮಕ್ಕಳ ದತ್ತು ಸ್ವೀಕಾರವನ್ನು ನಿರ್ವಹಿಸುತ್ತದೆ. ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಯಹೂದಿ, ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಲ್ಲಿ, ಈ ಕಾನೂನಿನಡಿ ದತ್ತು ಸ್ವೀಕಾರ ಮಾಡುವಂತಿಲ್ಲ.
ನೀವು ಧಾರ್ಮಿಕ ಕಾನೂನಿನಡಿ ದತ್ತು ಸ್ವೀಕಾರ ಮಾಡಲು ಇಚ್ಛಿಸದಿದ್ದಲ್ಲಿ/ಆಗದಿದ್ದಲ್ಲಿ, ಸಾರ್ವತ್ರಿಕ ದತ್ತು ಸ್ವೀಕಾರ ಕಾನೂನಾದ “ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫” ರ ಅಡಿಯಲ್ಲಿ ದತ್ತು ಸ್ವೀಕಾರ ಮಾಡಬಹುದು. ಈ ಕಾನೂನಿನಡಿ ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ (ಹಿಂದೂ, ಪರಿಶಿಷ್ಟ ಪಂಗಡಗಳು, ಇತ್ಯಾದಿ ಸೇರಿದಂತೆ) ದತ್ತು ಸ್ವೀಕಾರ ಮಾಡಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Mon, 5 June 23