ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ: ಮಡಿಲು ದತ್ತು ಕೇಂದ್ರದ ಮಕ್ಕಳನ್ನು ಬೆಂಗಳೂರು ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ

ಚಿತ್ರದುರ್ಗ ಮುರುಘಾಮಠದ ದತ್ತು ಕೇಂದ್ರದಲ್ಲಿರುವ ನಾಲ್ವರು ಬಾಲಕಿಯರು, ಐವರು ಬಾಲಕರು ಸೇರಿ 9ಜನ ಮಕ್ಕಳನ್ನು ಬೆಂಗಳೂರಿನ ಸರ್ಕಾರಿ ದತ್ತು ಕೇಂದ್ರಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.

ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ: ಮಡಿಲು ದತ್ತು ಕೇಂದ್ರದ ಮಕ್ಕಳನ್ನು ಬೆಂಗಳೂರು ಕೇಂದ್ರಕ್ಕೆ  ಸ್ಥಳಾಂತರಿಸಲು ಸಿದ್ಧತೆ
ಮುರುಘಾಮಠ
Follow us
| Updated By: ಆಯೇಷಾ ಬಾನು

Updated on:Oct 22, 2022 | 9:13 AM

ಚಿತ್ರದುರ್ಗ: ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾಶ್ರೀ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಮತ್ತೊಂದೆಡೆ ಚಿತ್ರದುರ್ಗ ಮುರುಘಾಮಠದ ಆವರಣದಲ್ಲಿನ ಮಡಿಲು ದತ್ತು ಕೇಂದ್ರದ ಮಕ್ಕಳನ್ನು ಸ್ಥಳಾಂತರಿಸುವುದಕ್ಕೆ ಸಿದ್ಧತೆ ನಡೆದಿದೆ.

ಚಿತ್ರದುರ್ಗ ಮುರುಘಾಮಠದ ದತ್ತು ಕೇಂದ್ರದಲ್ಲಿರುವ ನಾಲ್ವರು ಬಾಲಕಿಯರು, ಐವರು ಬಾಲಕರು ಸೇರಿ 9ಜನ ಮಕ್ಕಳನ್ನು ಬೆಂಗಳೂರಿನ ಸರ್ಕಾರಿ ದತ್ತು ಕೇಂದ್ರಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ. ಈ 9 ಮಕ್ಕಳು ಆರು ವರ್ಷದೊಳಗಿರುವವರಾಗಿದ್ದಾರೆ. ಮಡಿಲು ದತ್ತು ಕೇಂದ್ರದಲ್ಲಿ ಇಬ್ಬರು ಬಾಲಕಿಯರ ಮಾಹಿತಿ ದಾಖಲಿಸದ ಹಿನ್ನೆಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಲ್ಕೂವರೆ ವರ್ಷದ ಬಾಲಕಿ ಮತ್ತು 17ವರ್ಷದ ಬಾಲಕಿ ಮಾಹಿತಿಯನ್ನು ದಾಖಲಿಸಿರಲಿಲ್ಲ. ಪೊಲೀಸರ ತನಿಖೆ ವೇಳೆ ಬಾಲಕಿಯರು ಪತ್ತೆಯಾಗಿದ್ದರು. ಹೀಗಾಗಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಬಗ್ಗೆ ದೂರು ದಾಖಲಿಸಿದ್ದು ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ರದುರ್ಗದ ದತ್ತು ಕೇಂದ್ರದಲ್ಲಿರುವ ಮಕ್ಕಳನ್ನು ಸ್ಥಳಾಂತರಿಸಲು ಮುಂದಾಗಿದೆ. ಇದನ್ನೂ ಓದಿ: ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ ಎಲ್ಲ 103 ಮಕ್ಕಳ ಆಪ್ತಸಮಾಲೋಚನೆಗೆ ಸೂಚನೆ

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಪ್ರಕರಣ ದಾಖಲು

ಚಿತ್ರದುರ್ಗ: ಪೋಕ್ಸೋ ಕೇಸಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಚಿತ್ರದುರ್ಗದ ಮುರುಘಾಶ್ರೀ ಸೇರಿ ನಾಲ್ವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಾಗಿದೆ. A1 ಮುರುಘಾಶ್ರೀ, A2 ಮಠದ ಕಾರ್ಯದರ್ಶಿ ಪರಮಶಿವಯ್ಯ, 3ನೇ ಆರೋಪಿ ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್, A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಈಗಾಗಲೇ ಪೋಕ್ಸೋ ಕೇಸ್​ನಲ್ಲಿ ಎ1 ಮುರುಘಾಶ್ರೀ ಹಾಗೂ ಎ3 ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್ ಜೈಲಿನಲ್ಲಿದ್ದಾರೆ. ಹಾಸ್ಟೆಲ್​​ನಲ್ಲಿ ಅಕ್ರಮವಾಗಿ ಇಬ್ಬರು ಬಾಲಕಿಯರ ಪಾಲನೆ ಮಾಡಲಾಗುತ್ತಿದೆ. ಮುರುಘಾಶ್ರೀ ವಿರುದ್ಧ ಆ.26ರಂದು ಪೋಕ್ಸೋ ಕೇಸ್ ಹಿನ್ನೆಲೆ ಮಠದ ಹಾಸ್ಟೆಲ್​​​ಗೆ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಮುರುಘಾಮಠದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದರು. ಆಗ ಮಠದ ಹಾಸ್ಟೆಲ್​ನಲ್ಲಿದ್ದ ಮಕ್ಕಳನ್ನ ಸರ್ಕಾರಿ ಹಾಸ್ಟೆಲ್, ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗಿತ್ತು. CWC ಗಮನಕ್ಕೆ ತರದೆ ಇಬ್ಬರು ಮಕ್ಕಳ ಪಾಲನೆ ಮಾಡುತ್ತಿರುವ ಆರೋಪ ಹಿನ್ನೆಲೆ CWC ಅಧಿಕಾರಿಗಳು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಿಸಿದ್ದಾರೆ.

Published On - 9:13 am, Sat, 22 October 22

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’