ಹೂಕೋಸು ಕಿತ್ತಿದ್ದಕ್ಕೆ ವಿದ್ಯುತ್ ಕಂಬಕ್ಕೆ ತಾಯಿಯನ್ನು ಕಟ್ಟಿ ಥಳಿಸಿದ ಮಗ

ಕೃಷಿ ಭೂಮಿಯಲ್ಲಿ ಹೂಕೋಸು ಕಿತ್ತಿದ್ದಕ್ಕೆ ಮಗನೊಬ್ಬ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 70 ವರ್ಷದ ಮಹಿಳೆ ಸರಸಪಸಿ ಗ್ರಾಮದ ತನ್ನ ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ವಿವಾದ ಉಂಟಾಗಿದೆ. ವಾಗ್ವಾದ ಹೆಚ್ಚಾಗುತ್ತಿದ್ದಂತೆ ಆಕೆಯ ಮಗ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾನೆ.

ಹೂಕೋಸು ಕಿತ್ತಿದ್ದಕ್ಕೆ ವಿದ್ಯುತ್ ಕಂಬಕ್ಕೆ ತಾಯಿಯನ್ನು ಕಟ್ಟಿ ಥಳಿಸಿದ ಮಗ

Updated on: Dec 25, 2023 | 7:13 AM

ಕೃಷಿ ಭೂಮಿಯಲ್ಲಿ ಹೂಕೋಸು ಕಿತ್ತಿದ್ದಕ್ಕೆ ಮಗನೊಬ್ಬ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಹೃದಯ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ.
70 ವರ್ಷದ ಮಹಿಳೆ ಸರಸಪಸಿ ಗ್ರಾಮದ ತನ್ನ ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ವಿವಾದ ಉಂಟಾಗಿದೆ. ವಾಗ್ವಾದ ಹೆಚ್ಚಾಗುತ್ತಿದ್ದಂತೆ ಆಕೆಯ ಮಗ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾನೆ.

ಮಧ್ಯಪ್ರವೇಶಿಸಲು ಯತ್ನಿಸಿದ ಗ್ರಾಮಸ್ಥರಿಗೆ ಮಗ ಬೆದರಿಕೆಯೊಡ್ಡಿದ್ದ, ಮಹಿಳೆಯನ್ನು ರಕ್ಷಿಸಿ ಬಾಸುದೇವಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕೊಪ್ಪಳ: ಜೈ ಶ್ರೀರಾಮ್​ ಎಂದು ಹೇಳುವಂತೆ ಒತ್ತಾಯಿಸಿ ಮುಸ್ಲಿಂ ವೃದ್ಧನಿಗೆ ಥಳಿತ, ದೂರು ದಾಖಲು

ಬಳಿಕ ಪೊಲೀಸರು ಘಟನೆಯ ಬಗ್ಗೆ ಮಹಿಳೆಯನ್ನು ಕೇಳಿದರು ಮತ್ತು ಆಕೆಯ ಮಗನ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಐಐಸಿ ತ್ರಿನಾಥ್ ಸೇಥಿ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us