ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ (Rajouri) ಇಂದು (ಸೋಮವಾರ) ನಡೆದ ಬಾಂಬ್ ಸ್ಫೋಟದಲ್ಲಿ (IED Blast) ಮಗುವೊಂದು ಸಾವನ್ನಪ್ಪಿದೆ. ಈ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ರಜೌರಿಯಲ್ಲಿ ಮನೆಗಳಿಗೆ ನುಗ್ಗಿದ ಉಗ್ರರು ನಾಲ್ವರು ನಾಗರಿಕರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ರಜೌರಿಯ ಡ್ಯಾಂಗ್ರಿ ಪ್ರದೇಶದಲ್ಲಿ 3 ಮನೆಗಳ ಒಳಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ನಾಲ್ವರು ನಾಗರಿಕರು ಸಾವನ್ನಪ್ಪಿದ 1 ದಿನದ ಬಳಿಕ ಈ ಘಟನೆ ನಡೆದಿದೆ. ಅದೇ ಸ್ಥಳದಲ್ಲಿ ಇಂದು ಬಾಂಬ್ ದಾಳಿ ನಡೆದಿದೆ. ಉಗ್ರರ ದಾಳಿಗೆ ನಾಗರಿಕರೊಬ್ಬರು ಬಲಿಯಾದ ಮನೆಯ ಬಳಿಯಲ್ಲೇ ಈ ಬಾಂಬ್ ದಾಳಿ ನಡೆದಿದೆ.
ಇದನ್ನೂ ಓದಿ: Jammu Encounter: ಜಮ್ಮು ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಎನ್ಕೌಂಟರ್; ಮೂವರು ಉಗ್ರರ ಹತ್ಯೆ
ಇಂದು ನಡೆದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ರಜೌರಿಯಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಜೌರಿಯಲ್ಲಿ ಉಗ್ರರ ದಾಳಿಯನ್ನು ವಿರೋಧಿಸಿ ಸಂಪೂರ್ಣ ಬಂದ್ ಮಾಡಲಾಗಿದೆ.
J&K | Two people injured in a suspected explosion in Rajouri’s Upper Dangri village; rushed to hospital. Further details awaited.
Yesterday, four civilians were killed by terrorists in the same village. pic.twitter.com/GsZH0g59yO
— ANI (@ANI) January 2, 2023
ಶಂಕಿತ ಭಯೋತ್ಪಾದಕರ ಹುಡುಕಾಟದಲ್ಲಿ ಸೇನೆ, ಪೊಲೀಸ್, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
J-K: Child killed, 5 injured in suspected IED blast in Rajouri
Read @ANI Story | https://t.co/OLZsQZ4qSN#JammuAndKashmir #IEDblast #Rajouri pic.twitter.com/P86XW3mhBG
— ANI Digital (@ani_digital) January 2, 2023
ಇದನ್ನೂ ಓದಿ: Rajouri Terror Attack: ರಜೌರಿಯಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 4ಕ್ಕೆ ಏರಿಕೆ, 9 ಮಂದಿಗೆ ಗಾಯ
ಭಾನುವಾರ ಉಗ್ರರು ಕಾರಿನಲ್ಲಿ ಬಂದು ಮನಬಂದಂತೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತರನ್ನು ದೀಪಕ್ ಕುಮಾರ್, ಸತೀಶ್ ಕುಮಾರ್, ಪ್ರೀತಮ್ ಲಾಲ್ ಮತ್ತು ಶಿವಪಾಲ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಪವನ್ ಕುಮಾರ್, ರೋಹಿತ್ ಪಂಡಿತ್, ಸರೋಜ್ ಬಾಲಾ, ಸುಶೀಲ್ ಕುಮಾರ್, ಶುಭ್ ಶರ್ಮಾ ಮತ್ತು ಊರ್ವಶಿ ಶರ್ಮಾ ಎಂದು ಗುರುತಿಸಲಾಗಿದೆ.