ದೆಹಲಿ, ಅ.14: ಇಸ್ರೇಲ್ (Israel) ಮತ್ತು ಹಮಾಸ್ (Hamas) ಭಯೋತ್ಪಾದಕ ನಡುವೆ ಭೀಕರ ಯುದ್ಧಗಳು ನಡೆಯುತ್ತಿದೆ. ಈಗಾಗಲೇ ಇಸ್ರೇಲ್ ಹಮಾಸ್ ಉಗ್ರರನ್ನು ನಾಶ ಮಾಡಲು ಗಾಜಾ ಪಟ್ಟಿಯ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರ ಮಧ್ಯೆ ಭಾರತ ಸರ್ಕಾರ ಇಸ್ರೇಲ್ನಲ್ಲಿರುವ ಭಾರತೀಯರನ್ನು ತವರು ದೇಶಕ್ಕೆ ಕರೆಸಿಕೊಳ್ಳುವ ಕೆಲಸ ಮಾಡುತ್ತಿದೆ. ಆಪರೇಷನ್ ಅಜಯ್ (Operation Ajay) ಮೂಲಕ ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿದೆ. ಈಗಾಗಲೇ ಆಪರೇಷನ್ ಅಜಯ್ ಮೂಲಕ ಮೊದಲ ಹಂತದಲ್ಲಿ 212 ನಾಗರಿಕರು ಭಾರತಕ್ಕೆ ಬಂದಿದ್ದಾರೆ. ಇದೀಗ ಎರಡನೇ ಹಂತದ ಏರ್ಲಿಫ್ಟ್ನಲ್ಲಿ 235 ಭಾರತೀಯರು ಭಾರತಕ್ಕೆ ತಲುಪಿದ್ದಾರೆ. ಇದರಲ್ಲಿ 9 ಕನ್ನಡಿಗರು ಸೇರಿದ್ದಾರೆ.
235 ಭಾರತೀಯರು ಹೊತ್ತ AI 506 ವಿಮಾನವು ದೆಹಲಿಗೆ ತಲುಪಿದೆ. 9 ಕನ್ನಡಿಗರು ದೆಹಲಿಯಿಂದ 10 ಗಂಟೆಗೆ ಬೆಂಗಳೂರಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ. ಮೈಸೂರಿನ ಐವರು, ಬೆಂಗಳೂರಿನ ಬಸವನಗುಡಿಯ ನಾಲ್ವರು ನಿವಾಸಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ Xನಲ್ಲಿ (ಈ ಹಿಂದಿನ ಟ್ವಿಟರ್) ತಿಳಿಸಿದ್ದಾರೆ. ಈಗಾಗಲೇ ಮೊದಲ ಹಂತ ಏರ್ಲಿಫ್ಟ್ನಲ್ಲಿ 212 ಮಂದಿ ಭಾರತೀಯರನ್ನು ನಮ್ಮ ದೇಶಕ್ಕೆ ಕರೆಸಿಕೊಳ್ಳಲಾಗಿದೆ. ಗುರುವಾರ ಸಂಜೆ ಇಸ್ರೇಲ್ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟು ಶುಕ್ರವಾರ ಬೆಳಿಗ್ಗೆ ನವದೆಹಲಿ ತಲುಪಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ‘ಆಪರೇಷನ್ ಅಜಯ್’, ಹೇಗಿದೆ ಕಾರ್ಯಾಚರಣೆ?
ಇಸ್ರೇಲ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರ ಅಕ್ಟೋಬರ್ 7ರಂದು ಆಪರೇಷನ್ ಅಜಯ್ ಆರಂಭಿಸಿಲಾಗಿತ್ತು. ಇದರ ಜತೆಗೆ ಇಸ್ರೇಲ್ ಪರಿಸ್ಥಿತಿ ಬಗ್ಗೆ ಮತ್ತು ಅಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಮೇಲ್ವಿಚಾರಣೆ ಮಾಡಲು ದೆಹಲಿಯಲ್ಲಿ 24 ಗಂಟೆಗಳ ಕಂಟ್ರೋಲ್ ರೂಮ್ನ್ನು (ನಿಯಂತ್ರಣ ಕೊಠಡಿ) ಸ್ಥಾಪಿಸಲಾಗಿದೆ. ಯಾವುದೇ ರೀತಿಯ ತೊಂದರೆಯಾದರೂ ಅಥವಾ ಸಹಾಯಕ್ಕಾಗಿ ಈ ನಂಬರ್ಗಳಿಗೆ ಫೋನ್ ಅಥವಾ ಮೆಸೇಜ್ ಮಾಡಬಹುದು, 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988, ಇದರ ಜತೆಗೆ ಭಾರತೀಯ ರಾಯಭಾರಿ ಕಚೇರಿಯ 24-ಗಂಟೆಗಳ ತುರ್ತು ಸಹಾಯವಾಣಿಯನ್ನು ನೀಡಿದೆ. +972-35226748 ಮತ್ತು +972-543278392, ಮತ್ತು ಇಮೇಲ್ ಮೂಲಕವು ತಿಳಿಸಬಹುದು cons1.telaviv@mea.gov.in.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ