ಆಪರೇಷನ್ ಅಜಯ್: ಇಸ್ರೇಲ್​​ನಿಂದ ಭಾರತಕ್ಕೆ ಬರಲಿದ್ದಾರೆ 230 ಭಾರತೀಯರು

operation ajay: ಆಪರೇಷನ್ ಅಜಯ್ ಮೂಲಕ ಇಂದು ರಾತ್ರಿ ಇಸ್ರೇಲ್​​​ನಿಂದ 230 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿದೆ. ವಿಮಾನವು ಇಸ್ರೇಲ್‌ನಿಂದ ರಾತ್ರಿ 9 ಗಂಟೆಗೆ ಹೊರಡಲಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಅವರ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಿದೆ.

ಆಪರೇಷನ್ ಅಜಯ್: ಇಸ್ರೇಲ್​​ನಿಂದ ಭಾರತಕ್ಕೆ ಬರಲಿದ್ದಾರೆ 230 ಭಾರತೀಯರು
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 12, 2023 | 5:39 PM

ದೆಹಲಿ, ಅ.12:  ಆಪರೇಷನ್ ಅಜಯ್ (operation ajay) ಮೂಲಕ ಇಂದು ರಾತ್ರಿ ಇಸ್ರೇಲ್​​​ನಿಂದ 230 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿದೆ. ಇಸ್ರೇಲ್ ಮೇಲೆ ಹಮಾಸ್​​​ ಭಯೋತ್ಪಾದಕರು ದಾಳಿ ನಡೆಸಿದ ನಂತರ ಇಸ್ರೇಲ್​ ಮತ್ತು ಗಾಜಾ ಪಟ್ಟಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್​​ ನಿರಂತರ ದಾಳಿ ನಡೆಸುತ್ತಿದ್ದು ಹಮಾಸ್ ಉಗ್ರ ನೆಲೆಯನ್ನು ನಾಶ ಮಾಡುತ್ತಿದೆ. ಇತ್ತ ಇಸ್ರೇಲ್​​ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ. ಅದರೂ ಯಾರೆಲ್ಲ ಭಾರತಕ್ಕೆ ಬರಲು ಇಚ್ಛಿಸುತ್ತಾರೆ. ಅವರು ಬರಬಹುದು ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿತ್ತು. ಇದಕ್ಕಾಗಿ ಆಪರೇಷನ್ ಅಜಯ್ ಮೂಲಕ ಭಾರತೀಯರನ್ನು ತವರು ದೇಶಕ್ಕೆ ಕರೆದುಕೊಂಡು ಬರುವ ಕೆಲಸ ನಡೆಯುತ್ತಿದೆ. ಮೂಲಗಳ ಪ್ರಕಾರ ಆಪರೇಷನ್ ಅಜಯ್ ಮೂಲಕ 230 ಭಾರತೀಯರು ಇಂದು ರಾತ್ರಿ ಭಾರತಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.

ವಿಮಾನವು ಇಸ್ರೇಲ್‌ನಿಂದ ರಾತ್ರಿ 9 ಗಂಟೆಗೆ ಹೊರಡಲಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಅವರ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಿದೆ. ಯುದ್ಧ ಕಾರಣದಿಂದ ಭಾರತವು ಅಕ್ಟೋಬರ್​​ 7ರಿಂದ ಎಲ್ಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಈಗ ಅವರನ್ನು ಭಾರತಕ್ಕೆ ಕರೆದುಕೊಂಡ ಬರುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಹಮಾಸ್​​ ಉಗ್ರರ ದಾಳಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಇದೀಗ ಇಸ್ರೇಲ್​​ನಿಂದ ಆಪರೇಷನ್ ಅಜಯ್​​ನ ಮೊದಲ ಭಾಗವಾಗಿ ಭಾರತೀಯರನ್ನು ಭಾರತಕ್ಕೆ ಕರೆದುಕೊಂಡು ಬರುವ ಪ್ರಯತ್ನ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್​​ ಜೈಶಂಕರ್​ ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್​​ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ‘ಆಪರೇಷನ್ ಅಜಯ್’, ಹೇಗಿದೆ ಕಾರ್ಯಾಚರಣೆ?

ಎಸ್​​ ಜೈಶಂಕರ್ ಇಂದು ಬೆಳಿಗ್ಗೆ ಭಾರತದಿಂದ ಇಸ್ರೇಲ್‌ಗೆ ಹೊರಡುವ ಮೊದಲ ಚಾರ್ಟರ್ ಫ್ಲೈಟ್‌ನ ಸಿದ್ಧತೆಗಳನ್ನು ಪರಿಶೀಲಿಸುವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಗೂ ಮೊದಲು ಇಸ್ರೇಲ್​​ನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಹಾಯದ ಅಗತ್ಯವಿರುವ ಭಾರತೀಯರಿಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸಲು ಟೆಲ್ ಅವಿವ್ ಮತ್ತು ರಾಮಲ್ಲಾದಲ್ಲಿ ಪ್ರತ್ಯೇಕ ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಿದರು.

ಇನ್ನು ಇಸ್ರೇಲ್​​ನಲ್ಲಿರುವ ಭಾರತೀಯರಿಗೆ ಆಪರೇಷನ್ ಅಜಯ್ ಬಗ್ಗೆ ಮೇಲ್​​ ಸಂದೇಶವನ್ನು ಕಳುಹಿಸಲಾಗಿದೆ. ಇಸ್ರೇಲ್​​ನಲ್ಲಿ 20 ಸಾವಿರ ಭಾರತೀಯರು ನೆಲೆಸಿದ್ದಾರೆ ಎಂದು ಮುಂಬೈನಲ್ಲಿರುವ ಇಸ್ರೇಲ್‌ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಪಿಟಿಐಗೆ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Thu, 12 October 23