ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸ್ಪರ್ಧೆ?

Jyotiraditya Scindia: ರಾಜಕೀಯ ಭವಿಷ್ಯವು ಅನಿಶ್ಚಿತವಾಗಿ ಉಳಿದಿರುವವರಲ್ಲಿ ಒಂಬತ್ತು ಮಂತ್ರಿಗಳು, ಅವರಲ್ಲಿ ಮಹೇಂದ್ರ ಸಿಂಗ್ ಸಿಸೋಡಿಯಾ, ಒಪಿಎಸ್ ಭಡೋರಿಯಾ, ಬ್ರಿಜೇಂದ್ರ ಸಿಂಗ್ ಯಾದವ್ ಮತ್ತು ಸುರೇಶ್ ಧಕಡ್ ಸೇರಿದ್ದಾರೆ, ಇವರೆಲ್ಲರೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿದ್ದಾರೆ ಮತ್ತು 2020 ರಲ್ಲಿ ಕಾಂಗ್ರೆಸ್‌ನಿಂದ ಹೊರನಡೆದಿದ್ದರು.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸ್ಪರ್ಧೆ?
ಜ್ಯೋತಿರಾದಿತ್ಯ ಸಿಂಧಿಯಾ
Follow us
ರಶ್ಮಿ ಕಲ್ಲಕಟ್ಟ
|

Updated on:Oct 12, 2023 | 5:31 PM

ದೆಹಲಿ ಅಕ್ಟೋಬರ್ 12: ಮುಂದಿನ ತಿಂಗಳು ನಡೆಯಲಿರುವ ಮಧ್ಯಪ್ರದೇಶ (Madhya Pradesh) ವಿಧಾನಸಭಾ ಚುನಾವಣೆಗೆ ಬಿಜೆಪಿಯ (BJP) ಅಭ್ಯರ್ಥಿಗಳ ಐದನೇ ಪಟ್ಟಿಯು ಅತ್ಯಂತ “ಸ್ಫೋಟಕ”ವಾಗಿರಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ ಪಟ್ಟಿಯ ಬಗ್ಗೆ ಕೇಳಿದಾಗ, ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra), “ಪಟ್ಟಿ ಧಮಾಕೇದಾರ್ ಹೀ ಹೋಗಿ. ಆಗೇ ಧಮಾಕೇ ಹೀ ಧಮಾಕೇ ಹೋನೇ ವಾಲೇ ಹೈ, ದೀಪಾವಳಿ ಕಾ ತ್ಯೋಹರ್ ಆನೇ ವಾಲಾ ಹೈ, (ಪಟ್ಟಿ ಸ್ಫೋಟಕವಾಗಲಿದೆ… ಪಟಾಕಿ ನಿರೀಕ್ಷಿಸಿ… ದೀಪಾವಳಿ ಬರುತ್ತಿದೆ) ಎಂದಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, 24 ಸಚಿವರು ಮತ್ತು 57 ಹಾಲಿ ಶಾಸಕರ ಚುನಾವಣಾ ಭವಿಷ್ಯದ ಬಗ್ಗೆ ಆಡಳಿತ ಪಕ್ಷವು ಸೋಮವಾರ ಸಸ್ಪೆನ್ಸ್ ಅನ್ನು ಕೊನೆಗೊಳಿಸಿದೆ, ಅವರೆಲ್ಲರನ್ನೂ ನಾಲ್ಕನೇ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಪಕ್ಷವು 136 ಅಭ್ಯರ್ಥಿಗಳನ್ನು ಹೆಸರಿಸಿದೆ. ವಿಧಾನಸಭೆಯು 230 ಸ್ಥಾನಗಳನ್ನು ಹೊಂದಿದೆ, ಅಂದರೆ ಬಿಜೆಪಿ ಇನ್ನೂ 94 ಸ್ಥಾನಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೇಂದ್ರ ಚುನಾವಣಾ ಸಮಿತಿಯ ಭಾನುವಾರದ ಸಭೆಯಲ್ಲಿ ಇದು ನಿರ್ಧಾರವಾಗಬಹುದು ಎಂದು ಹೇಳಲಾಗುತ್ತಿದೆ.

ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ 25 ರಿಂದ 30 ಶಾಸಕರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಪಕ್ಷದ ರಾಜ್ಯ ಘಟಕದ ಮೂಲಗಳು ತಿಳಿಸಿವೆ. ಭಾನುವಾರದಿಂದ ಪ್ರಾರಂಭವಾಗುವ ನವರಾತ್ರಿ ಋತುವಿನಲ್ಲಿ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

ರಾಜಕೀಯ ಭವಿಷ್ಯವು ಅನಿಶ್ಚಿತವಾಗಿ ಉಳಿದಿರುವವರಲ್ಲಿ ಒಂಬತ್ತು ಮಂತ್ರಿಗಳು, ಅವರಲ್ಲಿ ಮಹೇಂದ್ರ ಸಿಂಗ್ ಸಿಸೋಡಿಯಾ, ಒಪಿಎಸ್ ಭಡೋರಿಯಾ, ಬ್ರಿಜೇಂದ್ರ ಸಿಂಗ್ ಯಾದವ್ ಮತ್ತು ಸುರೇಶ್ ಧಕಡ್ ಸೇರಿದ್ದಾರೆ, ಇವರೆಲ್ಲರೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿದ್ದಾರೆ ಮತ್ತು 2020 ರಲ್ಲಿ ಕಾಂಗ್ರೆಸ್‌ನಿಂದ ಹೊರನಡೆದಿದ್ದರು.

ಒಂಬತ್ತು ಮಂದಿಯ ಭವಿಷ್ಯವನ್ನು ಬದಿಗಿಟ್ಟು, ಬಿಜೆಪಿ ಸಿಂಧಿಯಾಗೆ ಮಣೆ ಹಾಕಲಿದೆ ಎಂಬ ಊಹಾಪೋಹಗಳು ಇವೆ.

ನಾಗರಿಕ ವಿಮಾನಯಾನ ಸಚಿವರು ರಾಜ್ಯಸಭಾ ಸಂಸದರಾಗಿದ್ದರೂ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆದಾಗ್ಯೂ, ಅವರ ಸಂಭಾವ್ಯ ಉಮೇದುವಾರಿಕೆಯು ಈ ಸುತ್ತಿನ ಚುನಾವಣೆಗೆ ಬಿಜೆಪಿಯ ತಂತ್ರಕ್ಕೆ ಅನುಗುಣವಾಗಿದೆ. ಪ್ರತಿ ರಾಜ್ಯದಲ್ಲಿಯೂ ಕೆಲವು ದೊಡ್ಡ-ಹೆಸರಿನ ಅಭ್ಯರ್ಥಿಗಳನ್ನು, ಕೇಂದ್ರ ಸಚಿವರು ಮತ್ತು ಸಂಸದರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಇದನ್ನೂ ಓದಿ: ಮಧ್ಯಪ್ರದೇಶ ಚುನಾವಣೆ: 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಮಧ್ಯಪ್ರದೇಶದಲ್ಲಿ ಪಕ್ಷವು ಈಗಾಗಲೇ ನಾಲ್ವರು ಸಂಸದರು ಮತ್ತು ಮೂವರು ಕೇಂದ್ರ ಸಚಿವರನ್ನು ಹೆಸರಿಸಿದೆ.

ಸಿಂಧಿಯಾ, ಮೊದಲ ಆಯ್ಕೆಯಾಗಿಲ್ಲ, ಆದರೆ ಯಶೋಧರ ರಾಜೇ ಸಿಂಧಿಯಾ ಅವರು ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಈ ಚುನಾವಣೆಯಿಂದ ಹೊರಗುಳಿದ ನಂತರವೇ ಅವರ ಬಗ್ಗೆ ಜ್ಯೋತಿರಾದಿತ್ಯ ಸಿಂಧಿಯಾ ಸ್ಪರ್ಧೆಗಿಳಿಯುವ ವದಂತಿ ಹುಟ್ಟಿಕೊಂಡಿತು. ಮಧ್ಯಪ್ರದೇಶದ ಕ್ರೀಡಾ ಸಚಿವರಾಗಿರುವ 69 ವರ್ಷದ ಶ್ರೀಮತಿ ಸಿಂಧಿಯಾ ಅವರು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ನಾಲ್ಕು ಬಾರಿ ಕೋವಿಡ್ -19ಗೆ ಒಳಗಾಗಿದ್ದಾರೆ

ಆಕೆಯ ಸೋದರಳಿಯ ತನ್ನ ಚಿಕ್ಕಮ್ಮನ ಶಿವಪುರಿ ಸ್ಥಾನದಿಂದ ಅಥವಾ ಬಮೋರಿ ಅಥವಾ ಕೋಲಾರಸ್‌ನಿಂದ ಸ್ಪರ್ಧಿಸಬಹುದು. ಕಾಂಗ್ರೆಸ್ ಬಿಜೆಪಿಯೊಳಗಿನ ಸಂಭಾವ್ಯ ಬಿರುಕುಗಳನ್ನು ಉಲ್ಲೇಖಿಸಿದ ನಂತರ ಮಿಶ್ರಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಕಾಂಗ್ರೆಸ್‌ಗೆ ನಮ್ಮ ಪಟ್ಟಿಯನ್ನು ಪ್ರಶ್ನಿಸುವ ಹಕ್ಕಿಲ್ಲ. ಅವರದೇ ಕುರುಹು ಇಲ್ಲ…ಹಾಗಾಗಿ ಅವರು ಏನನ್ನೂ ಹೇಳದೇ ಇದ್ದರೆ ಒಳ್ಳೆಯದು” ಎಂದಿದ್ದಾರೆ.

Published On - 5:28 pm, Thu, 12 October 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್