ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ 2,381 ಕೋಟಿ ಮೌಲ್ಯದ 1.44 ಲಕ್ಷ ಕೆಜಿ ಡ್ರಗ್ಸ್ ನಾಶ

|

Updated on: Jul 17, 2023 | 1:32 PM

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹೈದರಾಬಾದ್ ಘಟಕವು ವಶಪಡಿಸಿಕೊಂಡ 6,590 ಕೆಜಿ, ಇಂದೋರ್ ಘಟಕದಿಂದ 822 ಕೆಜಿ ಮತ್ತು ಜಮ್ಮು ಘಟಕದಿಂದ ವಶ ಪಡಿಸಿಕೊಂಡ 356 ಕೆಜಿ ಮಾದಕವಸ್ತುಗಳನ್ನು ನಾಶ ಮಾಡಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ 2,381 ಕೋಟಿ ಮೌಲ್ಯದ 1.44 ಲಕ್ಷ ಕೆಜಿ ಡ್ರಗ್ಸ್ ನಾಶ
ಅಮಿತ್ ಶಾ
Follow us on

ದೆಹಲಿ ಜುಲೈ 17: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ 2,381 ಕೋಟಿ ರೂಪಾಯಿ ಮೌಲ್ಯದ 1.40 ಲಕ್ಷ ಕೆಜಿಗೂ ಹೆಚ್ಚು ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ವಿವಿಧ ಪ್ರದೇಶಗಳಿಂದ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು (Drugs) ಸುಟ್ಟು ನಾಶ ಮಾಡಲಾಗಿದೆ. ‘ಡ್ರಗ್ಸ್ ಸ್ಮಗ್ಲಿಂಗ್ ಮತ್ತು ನ್ಯಾಷನಲ್ ಸೆಕ್ಯುರಿಟಿ’ ಕುರಿತ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಇದನ್ನು ವೀಕ್ಷಿಸಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹೈದರಾಬಾದ್ ಘಟಕವು ವಶಪಡಿಸಿಕೊಂಡ 6,590 ಕೆಜಿ, ಇಂದೋರ್ ಘಟಕದಿಂದ 822 ಕೆಜಿ ಮತ್ತು ಜಮ್ಮು ಘಟಕದಿಂದ ವಶ ಪಡಿಸಿಕೊಂಡ 356 ಕೆಜಿ ಮಾದಕವಸ್ತುಗಳನ್ನು ನಾಶ ಮಾಡಲಾಗಿದೆ.

ವಿವಿಧ ರಾಜ್ಯಗಳ ವಿವಿಧ ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡಿರುವ ಮಾದಕ ದ್ರವ್ಯಗಳನ್ನು ನಾಶಪಡಿಸಿವೆ. ಮಧ್ಯಪ್ರದೇಶದಲ್ಲಿ 1,03,884 (1.03 ಲಕ್ಷ) ಕೆಜಿ, ಅಸ್ಸಾಂನಲ್ಲಿ 1,486 ಕೆಜಿ, ಚಂಡೀಗಢದಲ್ಲಿ 229 ಕೆಜಿ, ಗೋವಾದಲ್ಲಿ 25 ಕೆಜಿ, ಗುಜರಾತ್‌ನಲ್ಲಿ 4,277 ಕೆಜಿ, ಹರ್ಯಾಣದಲ್ಲಿ 2,458 ಕೆಜಿ, ಜಮ್ಮು ಮತ್ತು ಕಾಶ್ಮೀರದಲ್ಲಿ 4,069 ಕೆಜಿ, ಮಹಾರಾಷ್ಟ್ರದಲ್ಲಿ 159 ಕೆಜಿ, ತ್ರಿಪುರಾದಲ್ಲಿ 1,803 ಕೆಜಿ ಮತ್ತು ಉತ್ತರ ಪ್ರದೇಶದಲ್ಲಿ 4,049 ಕೆಜಿ ಡ್ರಗ್ಸ್ ಸುಡಲಾಗಿದೆ.


ಕೇವಲ ಒಂದು ವರ್ಷದಲ್ಲಿ ನಾಶವಾದ ಡ್ರಗ್ಸ್ ನ ಒಟ್ಟು ಪ್ರಮಾಣವು ಸುಮಾರು 10 ಲಕ್ಷ ಕಿಲೋಗ್ರಾಂಗೆ ತಲುಪಿದ್ದು, ಇದರ ಮೌಲ್ಯ 12,000 ಕೋಟಿ ರೂ ಆಗಿದೆ.

ಇದನ್ನೂ ಓದಿ: ಬಿಹಾರದ ಲೋಕ ಜನಶಕ್ತಿ ಪಕ್ಷದಲ್ಲಿ ಪಾರಸ್ vs ಚಿರಾಗ್; ಬಣ ವಿಲೀನಕ್ಕೆ ಬಿಜೆಪಿ ಪ್ರಯತ್ನ

ಜೂನ್ 1, 2022 ರಿಂದ ಜುಲೈ 15, 2023 ರವರೆಗೆ ಎನ್ ಸಿಬಿಯ ಪ್ರಾದೇಶಿಕ ಘಟಕಗಳು ಮತ್ತು ರಾಜ್ಯಗಳ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳು ಒಟ್ಟಾರೆಯಾಗಿ ಸುಮಾರು 8,76,554 (8.76 ಲಕ್ಷ) ಕೆಜಿಯಷ್ಟು ಡ್ರಗ್ಸ್ ವಶ ಪಡಿಸಿದ್ದು, ಇದರ ಮೌಲ್ಯ ಸುಮಾರು 9,580 ಕೋಟಿ. ಇದು ನಿಗದಿತ ಗುರಿಗಿಂತ 11 ಪಟ್ಟು ಹೆಚ್ಚು!

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ