AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದ ಲೋಕ ಜನಶಕ್ತಿ ಪಕ್ಷದಲ್ಲಿ ಪಾರಸ್ vs ಚಿರಾಗ್; ಬಣ ವಿಲೀನಕ್ಕೆ ಬಿಜೆಪಿ ಪ್ರಯತ್ನ

ನಿತ್ಯಾನಂದ ರಾಯ್ ಜತೆಗೆ ಉತ್ತಮ ಮಾತುಕತೆ ನಡೆದಿದೆ. "ಚಿಕ್ಕಪ್ಪ ಮತ್ತು ಮತ್ತು ಮಗ ಒಂದಾಗಿ ಎಂದು ಅವರು ಹೇಳಿದರು. ಅದು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಹಾಲನ್ನು ಮೊಸರು ಮಾಡಿದಾಗ, ನೀವು ಎಷ್ಟು ಪ್ರಯತ್ನಿಸಿದರೂ ನಿಮಗೆ ಬೆಣ್ಣೆ ಸಿಗುವುದಿಲ್ಲ ಎಂದಿದ್ದಾರೆ ಪಾರಸ್.

ಬಿಹಾರದ ಲೋಕ ಜನಶಕ್ತಿ ಪಕ್ಷದಲ್ಲಿ ಪಾರಸ್ vs ಚಿರಾಗ್; ಬಣ ವಿಲೀನಕ್ಕೆ ಬಿಜೆಪಿ ಪ್ರಯತ್ನ
ಪಶುಪತಿ ನಾಥ್ ಪಾರಸ್- ಚಿರಾಗ್ ಪಾಸ್ವಾನ್
ರಶ್ಮಿ ಕಲ್ಲಕಟ್ಟ
|

Updated on:Jul 17, 2023 | 1:06 PM

Share

ದೆಹಲಿ  ಜುಲೈ 17: ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್​​ಗೆ ಕಡಿವಾಣ ಹಾಕಿ ಬಿಜೆಪಿ (BJP) ಮೇಲುಗೈ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿವಂಗತ ರಾಮ್ ವಿಲಾಸ್ ಪಾಸ್ವಾನ್ (Ram Vilas Paswan) ಅವರ ಲೋಕ ಜನಶಕ್ತಿ ಪಕ್ಷದ (Lok Janshakti Party) ವಿಭಜನೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಪಾಸ್ವಾನ್ ಮತಗಳ ವಿಭಜನೆಯನ್ನು ತಡೆಯಲು ಎರಡೂ ಬಣಗಳನ್ನು ಒಂದೇ ಸೂರಿನಡಿ ಇಡಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ. ಎರಡು ದಿನಗಳ ಹಿಂದೆ ಬಿಜೆಪಿಯ ಕೇಂದ್ರ ಸಚಿವ ನಿತ್ಯಾನಂದ ರಾಯ್ ಎರಡೂ ಬಣಗಳನ್ನು ಭೇಟಿಯಾಗಿ ವಿಲೀನದ ಚಿಂತನೆ ನಡೆಸಿದ್ದರು. ಆದರೆ ಪಾಸ್ವಾನ್ ಅವರ ಸಹೋದರ, ಪ್ರಸ್ತುತ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪಶುಪತಿ ನಾಥ್ ಪಾರಸ್ ಇದನ್ನು ತಿರಸ್ಕರಿಸಿದ್ದಾರೆ.

ನಿತ್ಯಾನಂದ ರಾಯ್ ಜತೆಗೆ ಉತ್ತಮ ಮಾತುಕತೆ ನಡೆದಿದೆ. “ಚಿಕ್ಕಪ್ಪ ಮತ್ತು ಮತ್ತು ಮಗ ಒಂದಾಗಿ ಎಂದು ಅವರು ಹೇಳಿದರು. ಅದು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಹಾಲನ್ನು ಮೊಸರು ಮಾಡಿದಾಗ, ನೀವು ಎಷ್ಟು ಪ್ರಯತ್ನಿಸಿದರೂ ನಿಮಗೆ ಬೆಣ್ಣೆ ಸಿಗುವುದಿಲ್ಲ ಎಂದಿದ್ದಾರೆ ಪಾರಸ್.

ಜುಲೈ 18 ರಂದು ಮಿತ್ರಪಕ್ಷಗಳೊಂದಿಗಿನ ಮೆಗಾ ಸಭೆಯಲ್ಲಿ ಭಾಗವಹಿಸಲು ಚಿರಾಗ್ ಪಾಸ್ವಾನ್ ಅವರನ್ನು ಬಿಜೆಪಿ ಆಹ್ವಾನಿಸಿದೆ. ಚಿರಾಗ್ ಪಾಸ್ವಾನ್ ಅವರ ಎನ್‌ಡಿಎ ಪ್ರವೇಶವನ್ನು ನಾವು ವಿರೋಧಿಸುವುದಿಲ್ಲ, ಆದರೆ ನಾವು ಅದನ್ನು ಸ್ವಾಗತಿಸುವುದೂ ಇಲ್ಲ ಎಂದು ಪಶುಪತಿ ಪರಾಸ್ ನೇತೃತ್ವದ ಬಣ ಹೇಳಿದೆ.

ಸಭೆಯಲ್ಲಿ ಅವರ ಅಣ್ಣನ ಮಗನ ಉಪಸ್ಥಿತಿಯ ಬಗ್ಗೆ ಕೇಳಿದಾಗ, ಚಿರಾಗ್ ಪಾಸ್ವಾನ್ ಈಗ ಎನ್‌ಡಿಎ ಪಾಲುದಾರನಲ್ಲ. 2020 ರ ವಿಧಾನಸಭಾ ಚುನಾವಣೆಯಿಂದ ಅವರು ಪ್ರತ್ಯೇಕವಾಗಿದ್ದಾರೆ. ಇದು ಚುನಾವಣಾ ವರ್ಷ. ಪ್ರತಿ ಪಕ್ಷವೂ ಹೆಚ್ಚಿನ ಜನರನ್ನು ಸೇರಿಸಲು ಬಯಸುತ್ತದೆ. ಆದ್ದರಿಂದ ಚಿರಾಗ್ ಪಾಸ್ವಾನ್ ಮತ್ತು ಜಿತನ್ ರಾಮ್ ಮಾಂಝಿ ಅವರನ್ನು ಆಹ್ವಾನಿಸಲಾಗಿದೆ. ಜನರು ಸಭೆಗೆ ಬರುತ್ತಾರೆ, ಅದು ಒಳ್ಳೆಯದು, ಮುಂದೇನಾಗುತ್ತದೆ ಎಂಬುದು ಸಭೆಯ ಫಲಿತಾಂಶವನ್ನು ಆಧರಿಸಿರುತ್ತದೆ ಎಂದು ಪಾರಸ್ ಹೇಳಿದ್ದಾರೆ.

ಚಿಕ್ಕಪ್ಪ ಮತ್ತು ಮಗ ಪ್ರಸ್ತುತ ಹಾಜಿಪುರ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದು ಇಬ್ಬರೂ ರಾಮ್ ವಿಲಾಸ್ ಪಾಸ್ವಾನ್ ಅವರ ಪರಂಪರೆಯನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಿದ್ದಾರೆ.

ಈ ಕ್ಷೇತ್ರ ರಾಮ್ ವಿಲಾಸ್ ಪಾಸ್ವಾನ್ ಅವರ ಭದ್ರಕೋಟೆಯಾಗಿತ್ತು. 2019 ರಲ್ಲಿ, ಪಾರಸ್ ಇಲ್ಲಿಂದ ಮತ್ತು ಚಿರಾಗ್ ಪಾಸ್ವಾನ್ ಜಮುಯಿಯಿಂದ ಗೆದ್ದಿದ್ದರು. ಪಾರಸ್ ಈಗ ತನ್ನ ಅಣ್ಣನ ಮಗನಿಗೆ ಸ್ಥಾನವನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: Tamil Nadu: ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮೇಲೆ ಇ.ಡಿ ದಾಳಿ, 9 ಸ್ಥಳಗಳಲ್ಲಿ ಶೋಧ

“ನಿಮ್ಮ ತಂದೆ ಬದುಕಿದ್ದಾಗ ಜಮುಯಿಯಿಂದ ಸ್ಪರ್ಧಿಸಲು ನಿಮ್ಮಲ್ಲಿ ಹೇಳಿದ್ದರೇ ಹೊರತು ಮತ್ತು ಹಾಜಿಪುರದಿಂದ ಅಲ್ಲ” ಎಂದು ಐದು ಸಂಸದರನ್ನು ಹೊಂದಿರುವ ಪಾರಸ್ ಬಣ ಹೇಳಿದೆ.

ಅಣ್ಣನ ಮಗ ಚಿರಾಗ್, ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿದ ಪಾರಸ್, ಚಿರಾಗ್ ಪಾಸ್ವಾನ್ ಅವರು ಲಾಲೂ-ಜಿಯನ್ನು ವಿರೋಧಿಸುವುದನ್ನು, ತೇಜಸ್ವಿ ಯಾದವ್ ಅವರನ್ನು ವಿರೋಧಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ?” ಅವರು ಕೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Mon, 17 July 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ