ಭಾರತಕ್ಕೆ ಸದಾ ಹೊರೆಯಾಗಿರೋ ನೆರೆ ರಾಷ್ಟ್ರ ಅಂದ್ರೆ ಅದು ಪಾಕಿಸ್ತಾನ. ಭಾರತಕ್ಕೆ ಕಿರುಕುಳ ನೀಡೋದ್ರಲ್ಲಿ ಸದಾ ಮುಂದಿರೋ ಪಾಪಿ ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೊಮ್ಮೆ ಬೆತ್ತಲಾಗಿದೆ. ಈ ಮೂಲಕ ತನ್ನ ನರಿಬುದ್ಧಿಯನ್ನ ವಿಶ್ವದ ಎದುರು ಬಯಲಾಗಿದೆ. ಭಾರತಕ್ಕೆ ಬೇಕಿರೋ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ಗಳಿಗೆ ಪಾಕಿಸ್ತಾನದ ನೆಲದಲ್ಲಿ ಜಾಗ ನೀಡಿರುವುದನ್ನ ಒಪ್ಪಿಕೊಂಡಿದೆ ಅಂತಾ ಪಾಕಿಸ್ತಾನದಿಂದ್ಲೇ ವರದಿ ಹೊರಬಿದ್ದಿದೆ.
ದಾವೂದ್ ತನ್ನ ನೆಲದಲ್ಲಿರೋದಾಗಿ ಒಪ್ಪಿಕೊಂಡಿತಾ ಪಾಕ್?
ಪಾಕಿಸ್ತಾನದ ಸ್ಥಳೀಯ ಮಾಧ್ಯಮದ ವರದಿಯನ್ನ ಆಧರಿಸಿ, ಪಾಕ್ ಸರ್ಕಾರ ದಾವೂದ್ ಇಬ್ರಾಹಿಂ ಕರಾಚಿಯಲ್ಲಿರೋದಾಗಿ ಒಪ್ಪಿಕೊಂಡಿದೆ ಅಂತಾ ಭಾರತೀಯ ಮಾಧ್ಯಮಗಳು ವರದಿ ಮಾಡಿದ್ವು. ಇದೇ ಮೊದಲ ಬಾರಿಗೆ ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಅಂತಾ ಪಾಕ್ ಸರ್ಕಾರ, ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಿದೆ ಅಂತಲೂ ಗೊತ್ತಾಗಿತ್ತು. ಈ ಅಧಿಸೂಚನೆಯ ಪ್ರಕಾರ ಭಾರತದ ಮಹಾರಾಷ್ಟ್ರ ನಿವಾಸಿಯಾದ ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ. ವಿಶ್ವಸಂಸ್ಥೆಯ ಆರ್ಥಿಕ ಕಾರ್ಯಾಚರಣೆಗಳ ಕ್ರಿಯಾ ಸಮಿತಿ ಅಥವಾ ಎಫ್ಎಟಿಎಫ್ ಪಾಕ್ ವಿರುದ್ಧ ಕಠಿಣ ಕ್ರಮಗಳನ್ನ ಕೈಗೊಳ್ಳದಂತೆ ತಡೆಯಲು, ದಾವೂದ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಬ್ಯಾಂಕ್ ಖಾತೆಗಳನ್ನ ನಿಷ್ಕ್ರಿಯಗೊಳಿಸಲು ನಿರ್ಧರಿಸಿದೆ ಅಂತಾ ವರದಿಯಲ್ಲಿ ಹೇಳಲಾಗಿದೆ.
ಕೇವಲ ದಾವೂದ್ ಇಬ್ರಾಹಿಂ ಮಾತ್ರವೇ ಅಲ್ದೆ, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್, ಜೈಷೆ ಮೊಹಮ್ಮದ್ನ ಮಸೂದ್ ಅಜರ್, ತಾಲಿಬಾನ್, ದಾಯೆಷ್, ಲಷ್ಕರೇ ತಯ್ಬಾ, ಅಲ್ ಖೈದಾ, ಹಖ್ಖಾನಿ ನೆಟ್ವರ್ಕ್, ಐಸಿಸ್ ಸೇರಿ 88 ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಲು ಅಧಿಸೂಚನೆ ಹೊರಡಿಸಿದೆ ಅಂತಾ ವರದಿಯಲ್ಲಿ ಹೇಳಲಾಗಿದೆ. ಆದ್ರೆ, ಪಾಕ್ ಸ್ಥಳೀಯ ಮಾಧ್ಯಮದ ವರದಿ ಆಧರಿಸಿ ಭಾರತದಲ್ಲಿ ವರದಿಗಳು ಪ್ರಕಟಗೊಳ್ಳುತ್ತಿದ್ದಂತೆ ಪಾಕ್ ಸರ್ಕಾರ ಉಲ್ಟಾ ಹೊಡೆದಿದೆ. ಭಾರತ ಹೇಳುತ್ತಿರುವಂತೆ ಯಾವುದೇ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ ವಿಶ್ವಸಂಸ್ಥೆ ಸೂಚನೆಯಂತೆ ತಾಲಿಬಾನ್, ಅಲ್ ಖೈದಾ, ಐಸಿಸ್ ವಿರುದ್ಧ ಮಾತ್ರವೇ ಕ್ರಮ ಕೈಗೊಂಡಿದೆ ಅಂತಾ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ ಒಪ್ಪಲಿ ಬಿಡಲಿ, ದಕ್ಷಿಣ ಏಷ್ಯಾದಲ್ಲಿ ಪಾಕ್ ಜೊತೆ ಗಡಿ ಹಂಚಿಕೊಂಡಿರೋ ಎಲ್ಲ ದೇಶಗಳ ರಕ್ಷಣೆಗೆ ಪಾಕ್ ತಲೆನೋವಾಗಿದೆ. ಪಾಕಿಸ್ತಾನ ಅನ್ನೋದ ದಕ್ಷಿಣ ಏಷ್ಯಾಗೆ ಅಂಟಿಕೊಂಡಿರೋ ಕ್ಯಾನ್ಸರ್ ಅಂದ್ರೂ ತಪ್ಪಾಗಲಿಕ್ಕಿಲ್ಲ. ಈಗಲಾದ್ರೂ ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರಿಗೆ ನೆರವು ನೀಡೋದನ್ನ ನಿಲ್ಲಿಸಿದ್ರೆ, ಭಾರತ ಸೇರಿ ದಕ್ಷಿಣ ಏಷ್ಯಾ ದೇಶಗಳಿಗೆ ಮಾತ್ರವೇ ಅಲ್ಲ.. ಸ್ವತಃ ಪಾಕಿಸ್ತಾನಕ್ಕೆ ಒಳ್ಳೆಯದು ಅನ್ನೋದನ್ನ ಪಾಕ್ ಅರಿಯಬೇಕಿದೆ.